ಮಂಗಳೂರು,ಸೆಪ್ಟೆಂಬರ್. 19 :ವಿದ್ಯುತ್ ದರ ಪರಿಷ್ಕರಣೆ ಕುರಿತು ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿತು.
ಸಭೆಯ ಅಧ್ಯಕ್ಷ ತೆಯನ್ನು ಕರ್ನಾ ಟಕ ವಿದ್ಯುತ್ ನಿಯಂತ್ರಣ ಆಯೋ ಗದ ಅಧ್ಯಕ್ಷ ಎಂ.ಆರ್.ಶ್ರೀನಿ ವಾಸ ಮೂರ್ತಿ ವಹಿಸಿ ದ್ದರು. ಮಂಗ ಳೂರು ವಿದ್ಯುತ್ ಸರಬ ರಾಜು ಕಂಪೆ ನಿಯ(ಮೆಸ್ಕಾಂ) ಅಧ್ಯಕ್ಷ ವಿಜಯ ನರ ಸಿಂಹ ಅವರು ವಿದ್ಯುತ್ ದರ ಪರಿ ಷ್ಕರಿಸ ಬೇಕಾದ ಅಗತ್ಯತೆಯ ಕುರಿತು ಸಭೆಯಲ್ಲಿ ವಿವರಿಸಿದರು. ಸಾರ್ವಜನಿಕರು, ಸಂಘ ಸಂಸ್ಥೆಗಳು,ರೈತರು,ಕೃಷಿಕ ರಿಂದ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಆಯೋಗದ ಆಧ್ಯಕ್ಷರು ಮೆಸ್ಕಾಂ ದರ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಒಟ್ಟು 4,602 ಆಕ್ಷೇಪಣಾ ದೂರುಗಳು ಬಂದಿವೆ. ರಾಜ್ಯದ ಇತರ ನಾಲ್ಕು ವಿದ್ಯುತ್ ಕಂಪೆನಿಗಳಿಗೆ ಸಲ್ಲಿಕೆಯಾದ ದೂರುಗಳಷ್ಟೇ ಆಕ್ಷೇಪಗಳು ಇಂದಿನ ಸಭೆಯಲ್ಲಿ ಸಲ್ಲಿಕೆಯಾಗಿವೆ. ಆಯೋಗವು ಕಂಪೆನಿಗಳು ಅರ್ಜಿ ಸಲ್ಲಿಸಿದ 120 ದಿನಗಳೊಳಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಇದೇ ಸೆಪ್ಟೆಂಬರ್ 21ಕ್ಕೆ ಹುಬ್ಬಳ್ಳಿ ಮತ್ತು ಸೆಪ್ಟೆಂಬರ್ 23ಕ್ಕೆ ಗುಲ್ಬರ್ಗದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರದ ಸಭೆ ನಡೆದ ಬಳಿಕ ಅಂತಿಮವಾಗಿ ಆಯೋಗವು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದರು. ಆಯೋಗದ ಸದಸ್ಯರಾದ ವಿಶ್ವನಾಥ ಹಿರೇಮಠ, ಕೆ.ಶ್ರೀನಿವಾಸ್ ರಾವ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.