ಮಂಗಳೂರು,ಸೆಪ್ಟೆಂಬರ್.24 : ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಸೀಮಂತೂರಿನಲ್ಲಿ ಶೈಕ್ಷಣಿಕ ನೆಲೆಯಲ್ಲಿ ಆಡಂಬರವಿಲ್ಲದೆ 3 ಲಕ್ಷ ಅನುದಾನ ಬಳಸಿ ಯಶಸ್ವಿಯಾಗಿ ದಾಸ ಸಾಹಿತ್ಯ ಸಮ್ಮೇಳನ ಮಾಡಿದಂತೆ, ನವೆಂಬರ್ ಕೊನೆಯೊಳಗೆ ನಡೆಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರಾ ಸಭೆಯಲ್ಲಿ ಮಾಹಿತಿ ನೀಡಿದರು.
ಅವರು ಇಂದು ಈ ಸಂಬಂಧ ನಗರದಲ್ಲಿ ನಡೆದ ಪೂರ್ವಭಾವೀ ಸಭೆಯಲ್ಲಿ ಮಾತನಾಡುತ್ತಿದ್ದರು.
ಪರಿಷತ್ತಿನ ನಿಬಂಧನೆಗೊಳಪಟ್ಟಂತೆ ಹಣವನ್ನು ಉಪಯೋಗಿಸಿಕೊಂಡು ತಾಲೂಕು ಮಟ್ಟದಲ್ಲಿ ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪ್ರತೀ ತಾಲೂಕಿನಿಂದಲೂ ಸಾಧಕರ ಮಾಹಿತಿ ಸಂಗ್ರಹಿಸಿ, ಪ್ರಶಸ್ತಿಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು.
ಸಭೆಯಲ್ಲಿ ಹರಿಕೃಷ್ಣ ಪುನರೂರು ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಸಿರಿತನ, ವೈಭವ ದೊರೆಯುತ್ತಿದ್ದು, ಕನ್ನಡ ಶಾಲೆಗಳಿಗೂ ಇದೇ ಸ್ಥಿತಿ ಬರಬೇಕು. ಕನ್ನಡದ ಸಿರಿತನ ಉಳಿಸಲು ಕಸಾಪ ಮುಡಿಪಾಗಿರಬೇಕು ಎಂದರು. ಸಾಹಿತಿ ವಿ.ಗ.ನಾಯಕ್, ತಾಲೂಕು ಕಸಾಪ ಅಧ್ಯಕ್ಷರಾದ ಸರ್ವೋತ್ತಮ ಅಂಚನ್ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಸಲಹೆಗಳನ್ನು ನೀಡಿದರು.