Sunday, March 31, 2013

' ಮತದಾನ ನಮ್ಮ ಹಕ್ಕು,ಬನ್ನಿ ಪಾಲ್ಗೊಳ್ಳಿ'

ಮಂಗಳೂರು,ಮಾರ್ಚ್.31: ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ, ದಕ್ಷಿಣ ಕನ್ನಡ ಜಿಲ್ಲೆ ಯಲ್ಲೂ ಜನ ರಲ್ಲಿ  ಜಾಗೃತಿ ಮೂಡಿ ಸಲು ಜಿಲ್ಲಾ ಡಳಿತ ಕಾರ್ಯ ಯೋಜ ನೆಯನ್ನು ರೂಪಿ ಸಿದ್ದು, ಜಿಲ್ಲಾಧಿ ಕಾರಿ ಹರ್ಷ ಗುಪ್ತ ಅವರು ಇಂದು ನಗ ರದ ಬಿಜೈ ಭಾರತ್ ಮಾಲ್  ನಲ್ಲಿ ಸ್ವೀಪ್ ಕಾರ್ಯ ಕ್ರಮ ದಡಿ ಯಲ್ಲಿ ಆಯೋ ಜಿಸ ಲಾದ ಯಕ್ಷ ಗಾನ ಮೂಲಕ ಮತ ದಾನದ ಜಾಗೃತಿ ಅಭಿ ಯಾನಕ್ಕೆ ಚಾಲನೆ ನೀಡಿ ದರು. ಜಿಲ್ಲಾ ಪಂಚಾ ಯತ್ ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್, ಜನ ಶಿಕಣ ಟ್ರಸ್ಟ್ ನ ಕೃಷ್ಣ ಮೂಲ್ಯ ಕಾರ್ಯ ಕ್ರಮ ದಲ್ಲಿ ಉಪ ಸ್ಥಿತ ರಿದ್ದರು. ಶಿಶು ಕಲ್ಯಾಣ ಅಭಿ ವೃದ್ಧಿ ಅಧಿ ಕಾರಿ ಶ್ಯಾಮಲ ಅವರು ಸ್ವಾಗ ತಿಸಿ ದರು. ರೋಶನಿ ನಿಲಯ ಕಾಲೇ ಜಿನ ಪ್ರಾಧ್ಯಾ ಪಕಿ ಪ್ರೊ. ವಿನೀತಾ ಅವರ  ನೇತೃತ್ವ ದಲ್ಲಿ ಹವ್ಯಾಸಿ ಬಳಗ ಕದ್ರಿ ಮತ್ತು ವಿದ್ಯಾರ್ಥಿ ಗಳು ಯಕ್ಷ ಗಾನ ಕಾರ್ಯ ಕ್ರಮ ನಡೆಸಿ ಕೊಟ್ಟರು. ಸ್ವೀಪ್ ಬಗ್ಗೆ ಸಾರ್ವ ಜನಿಕ ರಿಂದ ಉತ್ತಮ ಪ್ರತಿ ಕ್ರಿಯೆ ವ್ಯಕ್ತ ವಾಗು ತ್ತಿದೆ.