ಮಂಗಳೂರು,ಮಾರ್ಚ್.29 : ಹೊಸ ಮತದಾರರ ನೋಂದಣಿ, ನೀತಿ ಸಂಹಿತೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮತ್ತು ಮುಕ್ತ-ನ್ಯಾಯ ಸಮ್ಮತ ಚುನಾವಣೆಗೆ ತಮ್ಮ ಆದ್ಯತೆ ಇರುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಅವರು ಇಂದು ಬೆಳಗ್ಗೆ ತಮ್ಮ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡು ತ್ತಿದ್ದರು.
ಒಂದ ಕ್ಕಿಂತ ಹೆಚ್ಚು ಕಡೆ ಗಳಲ್ಲಿ ಮತ ದಾರರ ಪಟ್ಟಿ ಯಲ್ಲಿ ಹೆಸರು ನೋಂದಾ ಯಿಸಿ ಕೊಳ್ಳು ವುದು ಕಾನೂನು ಪ್ರಕಾರ ತಪ್ಪು.ಅಂತಹ ವರು ತಕ್ಷಣವೇ ನಮೂನೆ 7ರಲ್ಲಿ ಅಲ್ಲಿ ಸಲ್ಲಿಸಿ ಒಂದಕ್ಕಿಂತ ಹೆಚ್ಚು ಕಡೆಯ ಹೆಸರುಗಳನ್ನು ಕಿತ್ತು ಹಾಕಲು ಕೋರಿಕೆ ಸಲ್ಲಿಸಬೇಕು. ಇದು ಮತದಾರರ ಕರ್ತವ್ಯವೂ ಆಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಅರ್ಹ ನಾಗರಿಕರು ಸ್ವಇಚ್ಛೆಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ.ಅದೇ ರೀತಿ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ತಪ್ಪಾಗಿರುವುದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಎ.7 ಸೇರ್ಪಡೆ ಮತ್ತು ತಿದ್ದುಪಡಿಗೆ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಧಿಕಾರಿ ಕಚೇರಿಯ ನಿಯಂ ತ್ರಣ ಕೊಠಡಿ ಯನ್ನು ಬಲ ಪಡಿ ಸಲಾ ಗುವು ದಲ್ಲದೆ ದಿನದ 24 ಗಂಟೆ ಯೂ ಕಾರ್ಯ ನಿರ್ವ ಹಿಸು ವಂತೆ ವ್ಯ ವಸ್ಥೆ ರೂಪಿ ಸಲಾ ಗುವುದು. ನಿಯಂ ತ್ರಣ ಕೊಠಡಿಯ ದೂರ ವಾಣಿ ಸಂಖ್ಯೆ 1077 ಕ್ಕೆ ಹೆಚ್ಚು ವರಿ ಲೈನ್ ಗಳನ್ನು ಜೋಡಿ ಸುವ ಮೂಲಕ ಫೋನ್ ಬಿಝಿ ಬರ ದಂತೆ ನೋಡಿ ಕೊಳ್ಳ ಲಾಗು ವುದು ಎಂದು ಹರ್ಷ ಗುಪ್ತ ವಿವ ರಿಸಿ ದರು.
ನಿಯಂತ್ರಣ ಕೊಠಡಿಗೆ ಕರೆ ಮಾಡಿದವರು ನೇರವಾಗಿ ಜಿಲ್ಲಾಧಿಕಾರಿಯವರಲ್ಲಿ ಮಾತನಾಡಲು ಬಯಸಿದರೆ ಕರೆ ವರ್ಗಾವಣೆಗೂ ವ್ಯವಸ್ಥೆ ರೂಪಿಸಲಾಗುವುದು ಎಂದ ಅವರು ನಿಯಂತ್ರಣ ಕೊಠಡಿಯ ಸಿಬ್ಬಂದಿ ಕರೆ ಸ್ವೀಕರಿಸಿದ ಕೂಡಲೆ ಸಂಬಂಧ ಪಟ್ಟವರಿಗೆ ವಿಳಂಬವಿಲ್ಲದೆ ವರದಿ ಮಾಡಲು ನಿರ್ದೇಶನ ನೀಡುವುದಾಗಿ ಹೇಳಿದರು.
ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡಲಾಗುವುದು.ಅಭ್ಯರ್ಥಿಗಳಿಗೆ ಪ್ರತ್ಯೇಕ ದಾಖಲಾತಿ ಪುಸ್ತಕ ತೆರೆದು ಖರ್ಚು-ವೆಚ್ಚಗಳನ್ನು ದಾಖಲು ಮಾಡಲಾಗುವುದು. ಅಂತಿಮವಾಗಿ ಅಭ್ಯರ್ಥಿಗಳು ನೀಡುವ ವಿವರಗಳೊಂದಿಗೆ ತಾಳೆ ನೋಡಲಾಗುವುದು.ಆ ಕುರಿತಂತೆ ಈಗಾಗಲೇ ಛಾಯಾ ತಂಡ, ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.
ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಾಗಿ ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂಬ ಕುರಿತು ಚುನಾವಣಾ ಆಯೋಗ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಆಯೋಗ ಸೂಚಿತ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಹೇಳಿದ ಗುಪ್ತ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿ ಚುನಾವಣಾ ಕೆಲಸ ಕಾರ್ಯಗಳಿಗೆ ವೇಗ ಹೆಚ್ಚಿಸಲಾಗುವುದು ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ
ಡಾ.ಹರೀಶ್ ಕುಮಾರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಡಾ.ಕೆ.ಎನ್.ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಅವರು ಇಂದು ಬೆಳಗ್ಗೆ ತಮ್ಮ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡು ತ್ತಿದ್ದರು.
ಒಂದ ಕ್ಕಿಂತ ಹೆಚ್ಚು ಕಡೆ ಗಳಲ್ಲಿ ಮತ ದಾರರ ಪಟ್ಟಿ ಯಲ್ಲಿ ಹೆಸರು ನೋಂದಾ ಯಿಸಿ ಕೊಳ್ಳು ವುದು ಕಾನೂನು ಪ್ರಕಾರ ತಪ್ಪು.ಅಂತಹ ವರು ತಕ್ಷಣವೇ ನಮೂನೆ 7ರಲ್ಲಿ ಅಲ್ಲಿ ಸಲ್ಲಿಸಿ ಒಂದಕ್ಕಿಂತ ಹೆಚ್ಚು ಕಡೆಯ ಹೆಸರುಗಳನ್ನು ಕಿತ್ತು ಹಾಕಲು ಕೋರಿಕೆ ಸಲ್ಲಿಸಬೇಕು. ಇದು ಮತದಾರರ ಕರ್ತವ್ಯವೂ ಆಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಅರ್ಹ ನಾಗರಿಕರು ಸ್ವಇಚ್ಛೆಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ.ಅದೇ ರೀತಿ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ತಪ್ಪಾಗಿರುವುದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಎ.7 ಸೇರ್ಪಡೆ ಮತ್ತು ತಿದ್ದುಪಡಿಗೆ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಧಿಕಾರಿ ಕಚೇರಿಯ ನಿಯಂ ತ್ರಣ ಕೊಠಡಿ ಯನ್ನು ಬಲ ಪಡಿ ಸಲಾ ಗುವು ದಲ್ಲದೆ ದಿನದ 24 ಗಂಟೆ ಯೂ ಕಾರ್ಯ ನಿರ್ವ ಹಿಸು ವಂತೆ ವ್ಯ ವಸ್ಥೆ ರೂಪಿ ಸಲಾ ಗುವುದು. ನಿಯಂ ತ್ರಣ ಕೊಠಡಿಯ ದೂರ ವಾಣಿ ಸಂಖ್ಯೆ 1077 ಕ್ಕೆ ಹೆಚ್ಚು ವರಿ ಲೈನ್ ಗಳನ್ನು ಜೋಡಿ ಸುವ ಮೂಲಕ ಫೋನ್ ಬಿಝಿ ಬರ ದಂತೆ ನೋಡಿ ಕೊಳ್ಳ ಲಾಗು ವುದು ಎಂದು ಹರ್ಷ ಗುಪ್ತ ವಿವ ರಿಸಿ ದರು.
ನಿಯಂತ್ರಣ ಕೊಠಡಿಗೆ ಕರೆ ಮಾಡಿದವರು ನೇರವಾಗಿ ಜಿಲ್ಲಾಧಿಕಾರಿಯವರಲ್ಲಿ ಮಾತನಾಡಲು ಬಯಸಿದರೆ ಕರೆ ವರ್ಗಾವಣೆಗೂ ವ್ಯವಸ್ಥೆ ರೂಪಿಸಲಾಗುವುದು ಎಂದ ಅವರು ನಿಯಂತ್ರಣ ಕೊಠಡಿಯ ಸಿಬ್ಬಂದಿ ಕರೆ ಸ್ವೀಕರಿಸಿದ ಕೂಡಲೆ ಸಂಬಂಧ ಪಟ್ಟವರಿಗೆ ವಿಳಂಬವಿಲ್ಲದೆ ವರದಿ ಮಾಡಲು ನಿರ್ದೇಶನ ನೀಡುವುದಾಗಿ ಹೇಳಿದರು.
ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡಲಾಗುವುದು.ಅಭ್ಯರ್ಥಿಗಳಿಗೆ ಪ್ರತ್ಯೇಕ ದಾಖಲಾತಿ ಪುಸ್ತಕ ತೆರೆದು ಖರ್ಚು-ವೆಚ್ಚಗಳನ್ನು ದಾಖಲು ಮಾಡಲಾಗುವುದು. ಅಂತಿಮವಾಗಿ ಅಭ್ಯರ್ಥಿಗಳು ನೀಡುವ ವಿವರಗಳೊಂದಿಗೆ ತಾಳೆ ನೋಡಲಾಗುವುದು.ಆ ಕುರಿತಂತೆ ಈಗಾಗಲೇ ಛಾಯಾ ತಂಡ, ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.
ವಿವಿಧ ಇಲಾಖಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು. |