ಮಂಗಳೂರು, ಮಾರ್ಚ್.02 :ಸುಶಿಕಿತರನ್ನು ಹೊಂದಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳು ಎಲ್ಲರ ಸಹಕಾರ ಹಾಗೂ ಅಧಿಕಾರಿಗಳ ಶ್ರದ್ಧೆಯಿಂದ ಉತ್ತಮವಾಗಿವೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ ಅವರು ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್ ವಿಜಯಪ್ರಕಾಶ್ ಹಾಗೂ ಇನ್ನಿತರೆ ಅಧಿಕಾರಿಗಳೊಂದಿಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಸಂಚರಿಸಿ ಹಲವು ಕಾಮಗಾರಿಗಳನ್ನು ವೀಕ್ಷಿಸಿದರು.ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವಗ್ಗ ಇಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ರೂ.13.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.ಅದೇರೀತಿ ಕಾವಳಪಡೂರು ಗ್ರಾಮ ಪಂಚಾಯತ್ ವತಿಯಿಂದ ರೂ.12.54 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಭವನವನ್ನು ವೀಕ್ಷಿಸಿ ತಾಂತ್ರಿಕ ಮಾಹಿತಿ ಪಡೆದರು.
ಬೆಳ್ತಂಗಡಿ ತಾಲೂಕಿನ ಒಡಿಲ್ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಮಾನ್ಯ ಪ್ರಧಾನ ಕಾರ್ಯದಶರ್ಿಗಳು ಅಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ರೂ.2 ಲಕ್ಷ ಅನುದಾನದಿಂದ ನಿಮರ್ಿಸಿರುವ ಶೌಚಾಲಯ ಕಟ್ದಟಡ ಬಿಸಿ ಊಟ ಅಡಿಗೆ ಮನೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಾಣ ಮಾಡಿರುವ ಮುಖ್ಯ ಶಿಕ್ಷಕರ ಕೊಠಡಿಗಳನ್ನು ಪರಿಶೀಲಿಸಿದರು.
ಲಾಲ ಗ್ರಾಮ ಪಂಚಾಯತ್ ಸಾಧನೆ ಬಗ್ಗೆ ಕೇಳಿ ತಿಳಿದಿದ್ದ ಮಾನ್ಯ ಕಾರ್ಯದರ್ಶಿಗಳು ಇಂದು ಸ್ವಯಂ ಅಲ್ಲಿಗೆ ಭೇಟಿ ನೀಡಿ ಅಲ್ಲಿನ ಘನ ತ್ಯಾಜ್ಯ ವಿಲೇವಾರಿ ಘಟಕ ,ಸಾವಯವ ಗೊಬ್ಬರ ತಯಾರಿ ಘಟಕ ,ನ್ಯಾಪ್ ಕಿನ್ ತಯಾರಿಕಾ ಘಟಕ ,ಅಂಗನವಾಡಿ ಶಾಲಾಕೊಠಡಿ ಗಳನ್ನು ವೀಕ್ಷಿಸಿ ಇದೊಂದು ಮಾದರಿ ಗ್ರಾಮ ಪಂಚಾಯತ್ ಆಗಿದ್ದು ಇಂತಹ ಇನ್ನೂ 100 ಗ್ರಾಮ ಪಂಚಾಯತ್ ಗಳು ಬರಲಿ ಎಂದು ಪ್ರಶಂಸಿಸಿದರು.
ಮಾನ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿಗಳೊಂದಿಗೆ ನಿರ್ಮಲ ಭಾರತ್ ಅಭಿಯಾನದ ನಿರ್ದೇಶಕರಾದ ಶ್ರೀಮತಿ ದೀಪಾ,ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಸತ್ಯನಾರಾಯಣ ಮುಖ್ಯ ಯೋಜನಾಧಿಕಾರಿ ನಜೀರ್ ಮುಂತಾದವರು ಹಾಜರಿದ್ದರು.