Monday, March 11, 2013

ಶಾಂತಿಯುತ ಮತ ಎಣಿಕೆ ಸಂಪೂರ್ಣ

ಮಂಗಳೂರು, ಮಾರ್ಚ್.11:-ನಗರ ಸ್ಥಳೀಯ ಸಂಸ್ಥೆಗಳಿಗೆ ಮಾರ್ಚ್ 7 ರಂದು ಜಿಲ್ಲೆಯಲ್ಲಿ ನಡೆದ ಮತದಾನದ ಮತ ಎಣಿಕೆ ಕಾರ್ಯ ಇಂದು(11-3-13) ಮಂಗಳೂರು ನಗರ ಹಾಗೂ ಇನ್ನಿತರ ತಾಲೂಕು ಕೇಂದ್ರಗಳಲ್ಲಿ ಶಾಂತಿಯುತವಾಗಿ ನಡೆಯುವ ಮೂಲಕ ಸಂಪೂರ್ಣವಾಗಿದೆ.
ಮಂಗಳೂರು ಮಹಾನಗರಪಾಲಿಕೆಯ 60 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 35 ಭಾರತೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ,20 ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು,02 ಜಾತ್ಯಾತೀತ ಜನತಾ ದಳ ,ಸೋಶಿಯಲಿಸ್ಟಿಕ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿ ಪಿಐ)ಪಕ್ಷದ ಇಬ್ಬರು,ಸಿಪಿಎಂ 1 ಹಾಗೂ ಸ್ವತಂತ್ರ ಅಭ್ಯರ್ಥಿ 1 ಚುನಾಯಿತರಾಗಿದ್ದಾರೆ. ಇಂದು ಬೆಳಿಗ್ಗೆ 8.00 ಗಂಟೆಗೆ ಸರಿಯಾಗಿ ಜಿಲ್ಲಾ ಚುನಾವಣಾಧಿಕಾರಿ  ಎನ್.ಪ್ರಕಾಶ್ ಅವರ ಉಪಸ್ಥಿತಿಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಇರಿಸಿದ್ದ ಭದ್ರತಾ(ಸ್ಟ್ರಾಂಗ್) ರೂಂನ್ನು ತೆರೆದು ಒಂದೊಂದೇ ವಾರ್ಡಿಗೆ ಸಂಬಂಧಿಸಿದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಮ್ಮುಖದಲ್ಲಿ  ಮತ ಎಣಿಕೆ ಕೊಠಡಿಗೆ ತಂದು ಪಾರದರ್ಶಕವಾಗಿ ಎಲ್ಲಾ ಅಭ್ಯರ್ಥಿಗಳ ಸಹಮತದೊಂದಿಗೆ ಯಾವ ತೊಡಕುಗಳು ಇಲ್ಲದೆ ಮತ ಎಣಿಕೆ ಕಾರ್ಯ ಆರಂಭವಾಗಿ 3 ಗಂಟೆಗಳೊಳಗಾಗಿ ಎಲ್ಲಾ 60 ವಾರ್ಡುಗಳ ಮತ ಎಣಿಕೆ ಸಂಪೂರ್ಣವಾಯಿತು.

ಮಂಗಳೂರು ಮಹಾನಗರಪಾಲಿಕೆಗೆ ಚುನಾಯಿತರಾಗಿರುವ ಅಭ್ಯರ್ಥಿ ಹಾಗೂ ಅವರ ಸಮೀಪದ ಪ್ರತಿಸ್ಪಧಿಗಳ ಪಟ್ಟಿ ಈ ರೀತಿ ಇದೆ.


 .
.