Wednesday, March 6, 2013

ಮತದಾನಕ್ಕೆ ದಕ್ಷಿಣ ಕನ್ನಡ ಸನ್ನದ್ಧ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.06: ದಕ್ಷಿಣ ಕನ್ನಡ ಜಿಲ್ಲೆಯ 7 ನಗರ ಸ್ಥಳೀಯಾಡಳಿತ ಸಂಸ್ಥೆಗಳ ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.ಮತದಾರರು ನಿಭರ್ೀತಿಯಿಂದ ತಮ್ಮ ಹಕ್ಕು ಚಲಾಯಿಸ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ತಿಳಿಸಿದ್ದಾರೆ.
       ಇಂದು ಸುದ್ದಿ ಗೋಷ್ಠಿಯಲ್ಲಿ ಮಾತ ನಾಡಿದ ಅವರು ಜಿಲ್ಲಾ ಡಳಿ ತದ ವತಿ ಯಿಂದ 47 ಸೆಕ್ಟರ್ ಅಧಿಕಾ ರಿಗ ಳನ್ನು ನಿಯೋ ಜಿಸ ಲಾಗಿದೆ. ಪೊಲೀಸ್ ಇಲಾಖೆಯ ವತಿಯಿಂದ 68 ಸೆಕ್ಟರ್ ತಂಡಗಳನ್ನು ನಿಯೋಜಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಬಂದೋಬಸ್ತಿನ ನೇತೃತ್ವ ವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಹಾರ ದಳಗಳು ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಗಸ್ತು ನಡೆಸಲಿವೆ. ಒಟ್ಟು 544 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಆ ಪೈಕಿ 70 ಸೂಕ್ಷ್ಮ ಮತಗಟ್ಟೆಗಳಾಗಿವೆ. 84 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅತಿಸೂಕ್ಷ್ಮ ಮತಗಟ್ಟೆಗಳ ವೀಡಿಯೋ ಚಿತ್ರೀಕರಣ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.
ಈ ಚುನಾ ವಣೆ ಗಾಗಿ 3,000 ಸಿಬ್ಬಂದಿ ಕರ್ತವ್ಯ ನಿರ್ವ ಹಿಸಲಿ ದ್ದಾರೆ.84 ಬಸ್ಸು, 24 ಜೀಪು ಮತ್ತು 27 ಮ್ಯಾಕ್ಸಿ ಕ್ಯಾಬ್ ಗಳನ್ನು ಚುನಾ ವಣೆ ಗಾಗಿ ಬಳಸಿ ಕೊಳ್ಳ ಲಾಗು ತ್ತಿದೆ. ಮಂಗ ಳೂರಿ ನಲ್ಲಿ 32 ಸೆಕ್ಟರ್ ಅಧಿಕಾರಿಗಳು ಮತ್ತು 47 ಪೊಲೀಸ್ ಸೆಕ್ಟರ್ ಘಟಕಗಳು ಕಾರ್ಯನಿರ್ವಹಿಸಲಿವೆ. ಮೂಡುಬಿದಿರೆಯಲ್ಲಿ ಇಬ್ಬರು ಸೆಕ್ಟರ್ ಅಧಿಕಾರಿಗಳು ಹಾಗೂ ಎರಡು ಪೊಲೀಸ್ ಸೆಕ್ಟರ್ ಘಟಕಗಳು ಕರ್ತವ್ಯ ನಿರ್ವಹಿಸಲಿವೆ. ಉಳ್ಳಾಲದಲ್ಲಿ ಮೂವರು ಸೆಕ್ಟರ್ ಅಧಿಕಾರಿಗಳು ಮತ್ತು ಮೂರು ಪೊಲೀಸ್ ಸೆಕ್ಟರ್ ಘಟಕಗಳು ಕೆಲಸ ಮಾಡಲಿವೆ. ಬಂಟ್ವಾಳದಲ್ಲಿ ಮೂವರು ಸೆಕ್ಟರ್ ಅಧಿಕಾರಿಗಳಿಗೆ ಆರು ಪೊಲೀಸ್ ಸೆಕ್ಟರ್ ಘಟಕಗಳು ಸಾಥ್ ನೀಡಲಿವೆ ಎಂದು ಎನ್.ಪ್ರಕಾಶ್ ತಿಳಿಸಿದರು.
ಪುತ್ತೂ ರಿನಲ್ಲಿ ನಾಲ್ವರು ಸೆಕ್ಟರ್ ಅಧಿಕಾ ರಿಗಳಿ ರುತ್ತಾರೆ. ನಾಲ್ಕು ಪೊಲೀಸ್ ಸೆಕ್ಟರ್ ಘಟಕ ಗಳು ಅವರಿಗೆ ಸಹ ಕರಿ ಸಲಿವೆ. ಬೆಳ್ತಂಗ ಡಿಯಲ್ಲಿ ಎರಡು ಪೊಲೀಸ್ ಸೆಕ್ಟರ್ ಘಟಕ ಗಳು ಓರ್ವ ಸೆಕ್ಟರ್ ಅಧಿ ಕಾರಿಗೆ ಸಹ ಕಾರ ನೀಡ ಲಿವೆ. ಸುಳ್ಯದಲ್ಲಿ ಮೂರು ಪೊಲೀಸ್ ಸೆಕ್ಟರ್ಗಳು ಮತ್ತು ಇಬ್ಬರು ಸೆಕ್ಟರ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ನುಡಿದರು.
ಸೂಕ್ಷ್ಮ -ಅತಿಸೂಕ್ಷ್ಮ ಮತಗಟ್ಟೆಗಳು
ಮನಪಾ 31-61, ಮೂಡುಬಿದರೆ 2-2, ಉಳ್ಳಾಲ 3-3, ಬಂಟ್ವಾಳ 12-11, ಪುತ್ತೂರು 10-2, ಬೆಳ್ತಂಗಡಿ 3-2, ಸುಳ್ಯ 9-3
ಮತಗಟ್ಟೆಯ ನೂರು ಮೀಟರ್ ಸುತ್ತಳತೆಯ ಪ್ರದೇಶ ನಿರ್ಬಂಧಿತವಾಗಿರುತ್ತದೆ. ಮತ ದಾರರ ಹೊರತು ಇತರ ರಿಗೆ ಪ್ರವೇಶ ಇರು ವುದಿಲ್ಲ. ಕರ್ತವ್ಯ ನಿರತ ಅಧಿ ಕಾರಿ ಗಳಿಗೆ, ಸಿಬ್ಬಂದಿ ಗಳಿಗೆ ಈ ನಿಯಮ ಅನ್ವ ಯಿಸದು.
 ಹೊಸ ಮತ ಯಂತ್ರ ಗಳನ್ನು ಚುನಾ ವಣೆ ಯಲ್ಲಿ ಬಳ ಸಲಾಗು ತ್ತಿದೆ. ತೊಂದರೆ ಕಂಡು ಬಂದಲ್ಲಿ ಕೂಡಲೇ ಬದಲಿ ಯಂತ್ರ ಒದ ಗಿಸಲಾ ಗುವುದು. ಸೆಕ್ಟರ್ ಅಧಿ ಕಾರಿ ಗಳು ಹೆಚ್ಚು ವರಿ ಮತ ಯಂತ್ರ ಗಳನ್ನು ಹೊಂದಿ ರುತ್ತಾರೆ ಎಂದು ಅವರು ಸ್ಪಷ್ಟ ಪಡಿಸಿದರು. ಮತದಾನ ಮುಂಜಾನೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮಾ.11ರಂದು ಮತ ಎಣಿಕೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ ಮತ್ತು ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಡಾ.ಹರೀಶ ಕುಮಾರ್ ಉಪಸ್ಥಿತರಿದ್ದರು.