Friday, March 8, 2013

ಮತ ಎಣಿಕೆ ಕೇಂದ್ರ: ಸೂಚನೆ

ಮಂಗಳೂರು, ಮಾರ್ಚ್.08 :- ಮಂಗಳೂರು ಮಹಾನಗರಪಾಲಿಕೆ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಮಾರ್ಚ್ 11ರಂದು ನಿಗದಿತ ಪ್ರದೇಶಗಳಲ್ಲಿ ನಡೆಯಲಿದ್ದು, ಮತ ಎಣಿಕೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸಿ ಎಂದು ಚುನಾವಣಾ ವೀಕ್ಷಕ  ಎ ಕೆ ಮೊನ್ನಪ್ಪ ಅವರು ಸೂಚನೆ ನೀಡಿದ್ದಾರೆ.
ಮತ ಎಣಿಕೆ ಸಂದರ್ಭ ದಲ್ಲಿ ಚುನಾ ವಣಾ ಧಿಕಾ ರಿಗಳೇ (ಆರ್ ಒ) ಅಂತಿಮ ನಿರ್ಧಾರ ತೆಗೆದು ಕೊಳ್ಳುವ ಅಧಿ ಕಾರ ಹೊಂದಿದ್ದು, ಅವರ ಸೂಚನೆ ಗಳನ್ನು ಪ್ರತಿ ಯೊಬ್ಬರೂ ಪಾಲಿಸ ಬೇಕೆಂದು ನಿರ್ದೇ ಶನ ನೀಡಿದರು.
ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಸಂಬಂಧಪಟ್ಟ ಎಲ್ಲರಿಗೂ ತರಬೇತಿಯನ್ನು ನೀಡಲಾಗಿದ್ದು, ಕಟ್ಟುನಿಟ್ಟಾಗಿ ಆದೇಶ ಪಾಲನೆಯಾಗಬೇಕು ಎಂದು ಹೇಳಿದರು.
ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಈ ಚುನಾವಣೆಯಲ್ಲಿ ಉಪಯೋಗಿಸಿರುವುದರಿಂದ ಯಾವುದೇ ಗೊಂದಲ, ಗಡಿಬಿಡಿ ಇಲ್ಲದೆ ನಿಧಾನವಾಗಿ ಮತ ಎಣಿಕೆ ಮಾಡಿ ಎಂದು ಕಿವಿ ಮಾತು ಹೇಳಿದ ಅವರು, ಮತ ಎಣಿಕೆ ಸಂದರ್ಭದಲ್ಲಿ ಅನಗತ್ಯ ಮಾತುಕತೆಗೆ ಅವಕಾಶ ಇಲ್ಲ ಎಂದು ಹೇಳಿದರು.
ಮರು ಮತ ಎಣಿಕೆ ಅಥವಾ ಇನ್ನಿ ತರೇ ಯಾವುದೇ ಸಂದ ರ್ಭಗ ಳಲ್ಲಿ ಚುನಾ ವಣಾ ಧಿಕಾ ರಿಗ ಳಿಗೆ ಸಂದೇ ಹಗಳಿ ದ್ದಲ್ಲಿ ಜಿಲ್ಲಾ ಚುನಾ ವಣಾ ಧಿಕಾರಿ ಅಥವಾ ಚುನಾ ವಣಾ ವೀಕ್ಷಕರ ನೆರವು ಪಡೆ ಯಬಹುದು ಎಂದೂ ಅವರು ನುಡಿದರು.
ಅಭ್ಯರ್ಥಿ ಗಳು ಮತ್ತು ಮತ ಎಣಿಕೆ ಏಜೆಂಟರ ಗಮನಕ್ಕೆ
ಮತ ಎಣಿಕೆ ಸಂದರ್ಭದಲ್ಲಿ ಕೊಠಡಿಗಳಲ್ಲಿ ಉಪಸ್ಥಿತರಿರಲು ಅಗತ್ಯ ಗುರುತು ಚೀಟಿಯನ್ನು ನಾಳೆ ಮಾರ್ಚ್ 9ರಂದು 11 ಗಂಟೆಯ ಬಳಿಕ ಮಹಾನಗರಪಾಲಿಕೆಯ ಚುನಾವಣಾಧಿಕಾರಿಗಳ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಮತ ಎಣಿಕೆ ಕೊಠಡಿಯೊಳಗೆ ಮೊಬೈಲ್ ಬಳಸಲು ಅವಕಾಶವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದು, ಮಾಧ್ಯಮದವರಿಗೆ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇಲ್ಲೇ ಮಾಹಿತಿಗಳನ್ನು ನೀಡಲಾಗುವುದು. ಪತ್ರಿಕಾ ಛಾಯಾ ಚಿತ್ರ ಗ್ರಾಹಕರು ಮತ್ತು ಇಲೆ ಕ್ಟ್ರಾನಿಕ್ ಮಾಧ್ಯ ಮದವ ರಿಗೆ 8 ಗಂಟೆಗೆ ಮೊದಲು ಅಥವಾ ಮತ ಎಣಿಕೆ ಆರಂ ಭಕ್ಕೆ ಮೊದಲು ಛಾಯಾ ಗ್ರಹಣಕ್ಕೆ ಅವ ಕಾಶ ವಿದೆ ಎಂದು ಜಿಲ್ಲಾ ಚುನಾ ವಣಾ ಧಿಕಾ ರಿಗಳು ಹೇಳಿದರು.
ಮತ ಎಣಿಕೆ ಸಂದ ರ್ಭದಲ್ಲಿ ಪ್ರತಿ ಯೊಬ್ಬ ಅಧಿ ಕಾರಿ ಮತ್ತು ಸಿಬ್ಬಂದಿಯ ಕರ್ತ ವ್ಯದ ಬಗ್ಗೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳೂ ಆಗಿರುವ ಕೆ ಎ ದಯಾನಂದ ಅವರು ವಿವರಿಸಿದರು. ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್, ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಡಿಸಿಪಿ ಮುತ್ತುರಾಯರು ಉಪಸ್ಥಿತರಿದ್ದರು.