ಮಂಗಳೂರು.ಮಾರ್ಚ್.15:- 1986 ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದು ,ಅಂದಿನಿಂದ ಗ್ರಾಹಕರು ನಿರ್ದಿಷ್ಟ ಹಕ್ಕುಗಳು ,ಶಿಕ್ಷಣ, ಪರಿಹಾರ ಮಾರ್ಗಗಳು ದೊರಕಿದವು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು.
ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯ ರವೀಂದ್ರ ಕಲಾಭವನದಲ್ಲಿ ನಡೆದ ವಿಶ್ವ ಗ್ರಾಹಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರಕುಗಳ ಯೋಗ್ಯತೆ,ಪ್ರಮಾಣ ಸಾಮಥ್ರ್ಯ,ಶುದ್ಧತೆ,ಗುಣಮಟ್ಟ ಮತ್ತು ಧಾರಣೆ ಬಗ್ಗೆ ಪ್ರಶ್ನಿಸುವ ಮತ್ತು ಸಮಸ್ಯೆಯನ್ನು ದೂರು ನೀಡಿ ಬಗೆಹರಿಸಿಕೊಳ್ಳುವ ಹಕ್ಕನ್ನು ಇಂದು ಗ್ರಾಹಕ ಪಡೆದುಕೊಂಡಿರುತ್ತಾನೆ.ಅದನ್ನು ಇಂದು ವಿದ್ಯಾರ್ಥಿಗಳು ಮನೆಮನೆಗಳಲ್ಲಿ ತಿಳಿಸಿ ಗ್ರಾಹಕರು ಜಾಗೃತಿಗೊಳ್ಳುವುದು ಅವಶ್ಯವೆಂದು ನುಡಿದರು.
ಮುಖ್ಯ ಅತಿಥಿಗಳಾಗಿ ಈ ಸಮಾರಂಭದಲ್ಲಿ ಭಾಗವಹಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಮಲ್ಲಿಕಾರ್ಜುನ ಮಾತನಾಡಿ ಸೌಕರ್ಯಗಳು ಹೆಚ್ಚಿದ್ದಲ್ಲಿ ಸಮಸ್ಯೆಗಳು ಹೆಚ್ಚಿರುತ್ತವೆ. ಎಲ್ಲಾ ಬಸ್ಗಳಲ್ಲೂ ಕಂಪ್ಯೂಟರ್ ಟಿಕೇಟ್ ನೀಡುವ ವ್ಯವಸ್ಥೆ ಮತ್ತು ಕರ್ಕಶ ಹಾರನ್ ಬದಲಾಯಿಸಿ ಸಾಧಾರಣ ಹಾರನ್ ಬಳಸುವ ಬಗ್ಗೆ ಮತ್ತು ಬಸ್ನ ಚಾಲಕ / ನಿರ್ವಾಹಕರು ಸೌಜನ್ಯದಿಂದ ವರ್ತಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾರಾದ ಡಾ.ಲಕ್ಷ್ಮಿನಾರಾಯಣ ಭಟ್ಟ ಎಚ್.ಆರ್. ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಹಕ ಶಿಕ್ಷಣ ಸರ್ಟಿಫಿಕೇಟ್ ,ಉತ್ತಮ ಕ್ಲಬ್ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಪ್ರೊ ಟಿ.ಎನ್. ಶ್ರೀಧರ ಮತ್ತು ಕಾಲೇಜುಗಳ ಪ್ರಾಂಶುಪಾಲರುಗಳು ಹಾಜರಿದ್ದರು.