ಮಂಗಳೂರು, ಮಾ.14: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆ (ಕೋಟ್ಪಾ)ಯನ್ನು ಪಶ್ಚಿಮ ವಲಯದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಎಡಿಜಿಪಿ (ಅಪರಾಧ) ಎ.ಎಂ. ಪ್ರಸಾದ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪೊಲೀಸ್ ಅತಿಥಿ ಗೃಹ ದಲ್ಲಿ ಇಂದು ಪಶ್ಚಿಮ ವಲ ಯದ ಪೊಲೀಸು ಸಿಬ್ಬಂದಿ ಗಳಿ ಗಾಗಿ ಕೊಟ್ಪಾ ಕಾಯಿದೆ ಬಗ್ಗೆ ಆಯೋ ಜಿಸ ಲಾದ ತರ ಬೇತಿ ಕಾರ್ಯಾ ಗಾರ ವನ್ನು ಉದ್ದೇ ಶಿಸಿ ಅವರು ಮಾನ ತಾಡಿದರು.
ಕೋಟ್ಪಾ ಕಾಯಿದೆ ಜಾರಿಗೆ ಸಂಬಂಧಿಸಿ ಪಶ್ಚಿಮ ವಲಯದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಕೆಲಸ ಆಗಿದೆ. ಆದರೆ ನಮ್ಮ ಉದ್ದೇಶ ಕೇವಲ ಪ್ರಕರಣಗಳನ್ನು ದಾಖಲಿಸಿ ದಂಡ ಸಂಗ್ರಹಿಸುವುದು ಮಾತ್ರ ಆಗಬಾರದು. ನಾನೇ ನೋಡಲ್ ಅಧಿಕಾರಿಯಾಗಿರುವ ಈ ಕಾಯಿದೆಗೆ ಗುರಿ ನಿಗದಿ ಪಡಿಸುವುದಿಲ್ಲ. ಇಲ್ಲಿ ದಂಡ ಕಟ್ಟಿಸುವುದಕ್ಕಿಂತ ಮುಖ್ಯವಾಗಿ ತಿಳುವಳಿಕೆ ನೀಡುವುದು ಹಾಗೂ ವೈಯಕ್ತಿಕ ಶಿಸ್ತು ಪಾಲನೆಯಾಗಲಿ ಎಂಬ ಉದ್ದೇಶವಿದೆ ಎಂದರು. ಕಟ್ಟುನಿಟ್ಟಾಗಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕವಾಗಿ ತಂಬಾಕು ಸೇವನೆಯ ದುಷ್ಪರಿಣಾಮಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಹೇಳಿದರು.
ಕೋಟ್ಪಾ ಕಾಯಿದೆಯಡಿ ನಿಯಮ 4ರ ಅನುಸಾರ ಕಾನೂನು ಉಲ್ಲಂಘಿಸಿದರೆ 200ರೂ. ದಂಡವನ್ನು ಹಾಕುವ ಅಧಿಕಾರ ಸಬ್ ಇನ್ಸ್ ಪೆಕ್ಟರ್ ಮತ್ತು ಮೇಲಿನ ಅಧಿಕಾರವನ್ನು ನೀಡಲಾಗಿದ್ದು, ದಂಡ ಜಮಾ ಮಾಡಲು ಪ್ರತ್ಯೇಕ ಅಕೌಂಟ್ ನಂಬರನ್ನು ನೀಡಲಾಗಿದೆ. ಐಜಿಪಿ ಪಶ್ಚಿಮ ವಲಯ ಪ್ರತಾಪ್ ರೆಡ್ಡಿ ಅವರು ಮಾತನಾಡಿ, 2013ರಲ್ಲಿ 2303 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು. ರಾಜ್ಯದಲ್ಲಿ ಈ ನಿಟ್ಟಿನಲ್ಲಿ ಗದಗ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದು ಎಡಿಜಿಪಿ ಪ್ರಸಾದ್ ಹೇಳಿದರು.
ಜನ ಸಾಮಾ ನ್ಯರನ್ನು ಕಾಡುವ ವಿವಿಧ ರೀ ತಿಯ ಕ್ಯಾನ್ಸರ್ ಎಂಬ ಮಾರಕ ಕಾಯಿ ಲೆಗೆ ಸಂಬಂ ಧಿಸಿ ಶೇ. 50ರಷ್ಟು ಪ್ರಕರ ಣಗಳು ತಂಬಾಕು ಸೇವ ನೆಯಿಂದ ಉಂಟಾ ಗಿರುವುದು ಪತ್ತೆ ಯಾಗಿದೆ ಎಂದು ಕ್ಯಾನ್ಸರ್ ತಡೆ ಯೋಜನೆಯ ನಿರ್ದೇಶಕ, ಬೆಂಗಳೂರಿನ ಕ್ಯಾನ್ಸರ್ ಸರ್ಜನ್ ಡಾ. ವಿಶಾಲ್ ರಾವ್ ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಂಬಾಕು ಸೇವನೆಯಿಂದ ಉಂಟಾದ ವಿವಿಧ ರೀತಿಯ ಕ್ಯಾನ್ಸರ್ ಪ್ರಕರಣಗಳ ವಿವರ ನೀಡಿದ ಅವರು, ರಾಜ್ಯದಲ್ಲಿ 2 ಕೋಟಿ ಮಂದಿ ತಂಬಾಕು ಸೇವಿಸುವವರಿದ್ದು ಅವರಲ್ಲಿ 66 ಲಕ್ಷ ಮಂದಿ ಅಕಾಲಿಕ ಮರಣವನ್ನು ಹೊಂದುತ್ತಾರೆ ಎಂದು ತಂಬಾಕು ಸೇವನೆಯ ವಾಸ್ತವ ಚಿತ್ರಣ ನೀಡಿದರು.
ಪ್ರಸ್ತುತ ಡ್ರಗ್ಸ್ ಬಗ್ಗೆ ಭಾರೀ ಚರ್ಚೆ ನಡೆ ಯುತ್ತಿದೆ. ಆದರೆ ತೀರಾ ಅಗ್ಗ ಹಾಗೂ ಎಲ್ಲೆಂ ದರಲ್ಲಿ ತಂಬಾಕು ಪದಾ ರ್ಥಗಳು ಸಿಗು ವುದ ರಿಂದ ಡ್ರಗ್ಸ್ ಗಿಂತಲೂ ತಂಬಾಕು ಸೇವನೆ ತೀರಾ ಮಾರಕ ವಾಗಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ವಿರುದ್ಧದ ಜನಜಾಗೃತಿಗೆ ನೀಡುವ ಮಹತ್ವವನ್ನು ತಂಬಾಕು ಸೇವನೆಯ ಬಗ್ಗೆಯೂ ನೀಡಬೇಕಾಗಿದೆ ಎಂದವರು ಹೇಳಿದರು.
ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್, ಉಡುಪಿ ಎಸ್ಪಿ ಡಾ ಬೋರಲಿಂಗಯ್ಯ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಭಿಷೇಕ್ ಗೋಯಲ್ ಉಪಸ್ಥಿತರಿದ್ದರು. ಡಾ. ರಿಯಾಝ್ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.