Showing posts with label Sveepdk. Show all posts
Showing posts with label Sveepdk. Show all posts

Sunday, March 31, 2013

ಸುಭದ್ರ ಪ್ರಜಾಪ್ರಭುತ್ವಕ್ಕೆ ಪ್ರತಿಯೊಬ್ಬರೂ ಮತದಾನ ಮಾಡಿ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.31: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಿ. ಮತದಾನ ಪ್ರತಿಯೊಬ್ಬರ ಕರ್ತವ್ಯ ಹಾಗೂ ಹಕ್ಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಹೇಳಿದರು.
 ಅವ ರಿಂದು ನಗ ರದ ಬಿಜೈ ಯಲ್ಲಿ ರುವ ಭಾರತ್ ಮಾಲ್  ನಲ್ಲಿ ಸ್ವೀಪ್ ಕಾರ್ಯ ಕ್ರಮ ದಡಿ ಆಯೋ ಜಿಸ ಲಾದ ಯಕ್ಷ ಗಾನದ ಮೂಲಕ ಜಾಗೃತಿ ಕಾರ್ಯ ಕ್ರಮಕ್ಕೆ ಚೆಂಡೆ ಬಾರಿ ಸುವುದರ ಮೂಲಕ ಉದ್ಘಾಟಿಸಿದರು.
ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರತಿಯೊಬ್ಬರು ಮತದಾನ ಮಾಡುವಂತೆ ಪ್ರೇರೆಪಿಸಲು ಜಿಲ್ಲಾಡಳಿತ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಜಾಗೃತಿ ಕಾರ್ಯಕ್ರಮಗಳು ಫಲ ನೀಡುವಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
 ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ,
ಜಿಲ್ಲಾ ಪಂಚಾಯತ್ ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಜನ ಶಿಕಣ ಟ್ರಸ್ಟ್ ನ ಕೃಷ್ಣ ಮೂಲ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶ್ಯಾಮಲ ಅವರು ಸ್ವಾಗತಿಸಿದರು. ರೋಶನಿಲಯ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ವಿನೀತಾ ಅವರ  ನೇತ್ರತ್ವದಲ್ಲಿ ಹವ್ಯಾಸಿ ಬಳಗ ಕದ್ರಿ ಮತ್ತು ವಿದ್ಯಾರ್ಥಿಗಳು ಯಕ್ಷಗಾನ ಕಾರ್ಯಕ್ರಮ ನಡೆಸಿಕೊಟ್ಟರು.  

Friday, March 29, 2013

ಮತದಾರರ ಪಟ್ಟಿ ಸ್ವಚ್ಛವಾಗಿರಲಿ: ಜಿಲ್ಲಾಧಿಕಾರಿ ಹರ್ಷ ಗುಪ್ತ

ಮಂಗಳೂರು, ಮಾರ್ಚ್. 29 : ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಆಗಿರುವ ಪ್ರಗತಿ ವರದಿಯನ್ನು ಪ್ರತಿದಿನ ಬೆಳಗ್ಗೆ ತನಗೆ ನೀಡಬೇಕೆಂದು ಜಿಲ್ಲಾಧಿಕಾರಿ ಹರ್ಷ ಗುಪ್ತ ಹೇಳಿದರು. ಫಾರ್ಮ್ ನಂಬರ್ 6, 7 ಮತ್ತು 8 ಹಾಗೂ ಎಲ್ಲಿ ಹೆಚ್ಚು ನೋಂದಣಿಯಾಗಿದೆ; ಯಾವೆಲ್ಲ ಪ್ರದೇಶಗಳಲ್ಲಿ ಕಡಿಮೆ ನೋಂದಣಿಯಾಗಿದೆ ಎಂಬುದರ ಮಾಹಿತಿ ಕಾರಣ ಸಹಿತ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಮತ ದಾರರ ಪಟ್ಟಿ ಯಲ್ಲಿ ಹೆಸರು ಗಳ ಡೂಪ್ಲಿ ಕೇಟ್ ಆಗ ದಂತೆ ಹಾಗೂ ಸತ್ತ ವರ ಹಾಗೂ ಇತರ ಕಾರಣ ಗಳಿಂದ ಇಲ್ಲ ದವರ ಹೆಸ ರನ್ನು ಕೈ ಬಿಟ್ಟು ಸ್ವಚ್ಛ ಮತ ದಾರರ ಪಟ್ಟಿ ಯನ್ನು ರಚಿಸಿ ದರೆ ಮತ ದಾನದ ಶೇಕಡ ವಾರು ವಿವರ ಹಾಗೂ ಪಾಲ್ಗೊ ಳ್ಳುವಿ ಕೆಯನ್ನು ಖಚಿತ ಪಡಿಸಿ ಕೊಳ್ಳ ಬಹುದು ಎಂದು ಅವರು ನುಡಿದರು.
      ಕೆಳಮಟ್ಟದಿಂದ ಮೇಲ್ಮಟ್ಟದವರೆಗಿನ ಅಧಿಕಾರಿಗಳ ನಡುವೆ ಸಂವಹನ ಅತಿ ಮುಖ್ಯವಾಗಿದ್ದು, ಮತದಾನದ ಪ್ರಕ್ರಿಯೆ ಯನ್ನು ಸೂಚನೆಯಂತೆ ಪಾಲಿಸಲು ಸುತ್ತೋಲೆಗಳಂತೆ ನಡೆದುಕೊಳ್ಳಿ. ಗಡಿ ಪ್ರದೇಶದ ಮತದಾರರ ಪಟ್ಟಿಯನ್ನು ತಯಾರಿಸುವಾಗ ಸೂಕ್ಷ್ಮವಾಗಿ ಕೆಲಸ ಮಾಡಿ ಎಂದರು. ಸೆಕ್ಟರ್ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಬೆನ್ನೆಲುಬಾಗಿದ್ದು, ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ.ಅವರು ತಮ್ಮ ಬೂತ್ ಲೆವೆಲ್ ಅಧಿಕಾರಿಗಳೊಂದಿಗೆ ಪ್ರತಿದಿನ ಸಂಪರ್ಕವಿರಿಸಿಕೊಂಡು ಮಾಹಿತಿಯನ್ನು ಸಂಗ್ರಹಿಸಬೇಕು. ಸಭೆ ನಡೆಸಲು ನಿಗದಿತ ಜಾಗ ಗುರುತಿಸಿಕೊಳ್ಳಬೇಕು. ನಿಗದಿತ ಮಾದರಿಯಲ್ಲೇ ಮಾಹಿತಿ ತುಂಬಿ ಕಳುಹಿಸಿ ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಿಟರ್ನಿಂಗ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಹೇಳಿದರು, ಮತದಾರರ ನೋಂದಣಿ ಕಾರಣಗಳನ್ನು ವಿಶ್ಲೇಷಿಸಿ; ಎಲ್ಲಿ ತಪ್ಪಾಗಿದೆ, ಯಾರು ಹೊಣೆ ಎಂಬ ಬಗ್ಗೆಯೂ ಸ್ಪಷ್ಟಪಡಿಸಿದರು.
 ಕ್ಷೇತ್ರ ವಾರು ಡಿ ಡುಪ್ಲಿ ಕೇಷನ್ ತಡೆ ಯಲು ಬೇಕಾದ ಕ್ರಮ ಗಳನ್ನು ಕೈ ಗೊಳ್ಳಲು ನಿರ್ದೇ ಶನ ನೀಡಿ ದರು. ಆರ್ ಒ ಗಳು ಮತ್ತು ಎ ಆರ್ ಒ ಗಳಿಗೆ ಹೆಚ್ಚಿನ ಜವಾ ಬ್ದಾರಿ ಯಿದ್ದು, ಫೋಟೋ ಗಳಿ ಲ್ಲದೆ (ಎಪಿಕ್) ವೋಟರ್ ಐ ಡಿ ಇರ ಬಾರದು ಎಂದರು.
ಸ್ವೀಪ್ ಬಗ್ಗೆಯೂ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಕ್ಷೇತ್ರವಾರು ಕಡಿಮೆ ಮತದಾನವಾದ ಪ್ರದೇಶಗಳನ್ನು ವಿಶೇಷ ಗಮನದಲ್ಲಿರಿಸಿ, ಮತದಾನವನ್ನು ಹೆಚ್ಚಿಸಲು ಯೋಜನೆ ರೂಪಿಸಿ. ಇದಕ್ಕಾಗಿ ಬಿಎಲ್ ಒ ಗಳ ಸಹಕಾರ ಪಡೆಯಿರಿ. ಮತದಾನವಾಗದಿರುವ ಸಮಸ್ಯೆ ಮೂಲ ಹುಡುಕಿ. ಸಹಾಯಕ ಆಯುಕ್ತರು ಈ ಸಂಬಂಧ ತಮಗೆ ಫೀಡ್ ಬ್ಯಾಕ್ ಕೊಡಿ. ಬಿ ಎಲ್ ಒ ಗೆ ಕಳೆದ ಬಾರಿಯ ಪಟ್ಟಿ ಕೊಟ್ಟು ಕಾರಣ ಕೇಳಿ. ವೋಟಿಂಗ್ ಪರ್ಸಂಟೇಜ್ ಜಾಸ್ತಿ ಆದರೆ ಬಿ ಎಲ್ ಒ ಗಳಿಗೆ ವಿಶೇಷ ಸಂಭಾವನೆ ಕೊಡುವ ಬಗ್ಗೆಯೂ ಚಿಂತಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ .ಎ., ಸಿಇಒ ಹಾಗೂ ಸ್ವೀಪ್ ಅಧ್ಯಕ್ಷರಾದ ಡಾ ಕೆ ಎನ್ ವಿಜಯಪ್ರಕಾಶ್ ಹಾಗೂ ಮಹಾನಗರಪಾಲಿಕೆ ಆಯುಕ್ತರು ಉಪಸ್ಥಿತರಿದ್ದರು

ಕಂಟ್ರೊಲ್ ರೂಂ ನಂ 1077 ,ಖರ್ಚು-ವೆಚ್ಚದ ಮೇಲೆ ತೀವ್ರ ನಿಗಾ: ಹರ್ಷ ಗುಪ್ತ

ಮಂಗಳೂರು,ಮಾರ್ಚ್.29 : ಹೊಸ ಮತದಾರರ ನೋಂದಣಿ, ನೀತಿ ಸಂಹಿತೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮತ್ತು ಮುಕ್ತ-ನ್ಯಾಯ ಸಮ್ಮತ ಚುನಾವಣೆಗೆ ತಮ್ಮ ಆದ್ಯತೆ ಇರುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಅವರು ಇಂದು ಬೆಳಗ್ಗೆ  ತಮ್ಮ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡು ತ್ತಿದ್ದರು.
ಒಂದ ಕ್ಕಿಂತ ಹೆಚ್ಚು ಕಡೆ ಗಳಲ್ಲಿ ಮತ ದಾರರ ಪಟ್ಟಿ ಯಲ್ಲಿ ಹೆಸರು ನೋಂದಾ ಯಿಸಿ ಕೊಳ್ಳು ವುದು ಕಾನೂನು ಪ್ರಕಾರ ತಪ್ಪು.ಅಂತಹ ವರು ತಕ್ಷಣವೇ ನಮೂನೆ 7ರಲ್ಲಿ ಅಲ್ಲಿ ಸಲ್ಲಿಸಿ ಒಂದಕ್ಕಿಂತ ಹೆಚ್ಚು ಕಡೆಯ ಹೆಸರುಗಳನ್ನು ಕಿತ್ತು ಹಾಕಲು ಕೋರಿಕೆ ಸಲ್ಲಿಸಬೇಕು. ಇದು ಮತದಾರರ ಕರ್ತವ್ಯವೂ ಆಗಿದೆ ಎಂದು  ಜಿಲ್ಲಾಧಿಕಾರಿ ನುಡಿದರು.
ಅರ್ಹ ನಾಗರಿಕರು ಸ್ವಇಚ್ಛೆಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ.ಅದೇ ರೀತಿ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ತಪ್ಪಾಗಿರುವುದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಎ.7 ಸೇರ್ಪಡೆ ಮತ್ತು ತಿದ್ದುಪಡಿಗೆ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯವರು  ತಿಳಿಸಿದರು.
 ಜಿಲ್ಲಾ ಧಿಕಾರಿ ಕಚೇರಿಯ ನಿಯಂ ತ್ರಣ ಕೊಠಡಿ ಯನ್ನು ಬಲ ಪಡಿ ಸಲಾ ಗುವು ದಲ್ಲದೆ ದಿನದ 24 ಗಂಟೆ ಯೂ ಕಾರ್ಯ ನಿರ್ವ ಹಿಸು ವಂತೆ ವ್ಯ ವಸ್ಥೆ ರೂಪಿ ಸಲಾ ಗುವುದು. ನಿಯಂ ತ್ರಣ ಕೊಠಡಿಯ ದೂರ ವಾಣಿ ಸಂಖ್ಯೆ 1077 ಕ್ಕೆ ಹೆಚ್ಚು ವರಿ ಲೈನ್ ಗಳನ್ನು ಜೋಡಿ ಸುವ ಮೂಲಕ ಫೋನ್ ಬಿಝಿ ಬರ ದಂತೆ ನೋಡಿ ಕೊಳ್ಳ ಲಾಗು ವುದು ಎಂದು ಹರ್ಷ ಗುಪ್ತ ವಿವ ರಿಸಿ ದರು.
ನಿಯಂತ್ರಣ ಕೊಠಡಿಗೆ ಕರೆ ಮಾಡಿದವರು ನೇರವಾಗಿ ಜಿಲ್ಲಾಧಿಕಾರಿಯವರಲ್ಲಿ ಮಾತನಾಡಲು ಬಯಸಿದರೆ ಕರೆ ವರ್ಗಾವಣೆಗೂ ವ್ಯವಸ್ಥೆ ರೂಪಿಸಲಾಗುವುದು ಎಂದ ಅವರು ನಿಯಂತ್ರಣ ಕೊಠಡಿಯ ಸಿಬ್ಬಂದಿ ಕರೆ ಸ್ವೀಕರಿಸಿದ ಕೂಡಲೆ ಸಂಬಂಧ ಪಟ್ಟವರಿಗೆ ವಿಳಂಬವಿಲ್ಲದೆ ವರದಿ ಮಾಡಲು ನಿರ್ದೇಶನ ನೀಡುವುದಾಗಿ ಹೇಳಿದರು.
ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡಲಾಗುವುದು.ಅಭ್ಯರ್ಥಿಗಳಿಗೆ ಪ್ರತ್ಯೇಕ ದಾಖಲಾತಿ ಪುಸ್ತಕ ತೆರೆದು ಖರ್ಚು-ವೆಚ್ಚಗಳನ್ನು ದಾಖಲು ಮಾಡಲಾಗುವುದು. ಅಂತಿಮವಾಗಿ ಅಭ್ಯರ್ಥಿಗಳು ನೀಡುವ ವಿವರಗಳೊಂದಿಗೆ ತಾಳೆ ನೋಡಲಾಗುವುದು.ಆ ಕುರಿತಂತೆ ಈಗಾಗಲೇ ಛಾಯಾ ತಂಡ, ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.

 ವಿವಿಧ ಇಲಾಖಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು.
       ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಾಗಿ ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂಬ ಕುರಿತು ಚುನಾವಣಾ ಆಯೋಗ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಆಯೋಗ ಸೂಚಿತ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಹೇಳಿದ ಗುಪ್ತ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿ ಚುನಾವಣಾ ಕೆಲಸ ಕಾರ್ಯಗಳಿಗೆ ವೇಗ ಹೆಚ್ಚಿಸಲಾಗುವುದು ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ ಡಾ.ಹರೀಶ್ ಕುಮಾರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಉಪಸ್ಥಿತರಿದ್ದರು.

'ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ'

ಮಂಗಳೂರು, ಮಾರ್ಚ್. 29 : ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ಎಲ್ಲ ಜಿಲ್ಲೆಗಳಲ್ಲು ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಖರ್ಚು ವೆಚ್ಚದ ವಿಶೇಷ ಅಧಿಕಾರಿಯೂ ಆಗಿರುವ ಪಂಕಜ್ ಕುಮಾರ್ ಪಾಂಡೆ ಅವರು ಹೇಳಿದರು.
  ಇಂದು ನಡೆದ ವಿಡಿಯೋ ಕಾನ್ಫ ರೆನ್ಸ್ನಲ್ಲಿ ಜಾಗೃತಿ ಯೋಜ ನೆಯ ಬಗ್ಗೆ ವಿವ ರಿಸಿದ ಅವರು, ವಿವಿಧ ಜಿಲ್ಲೆಯ ಜಿಲ್ಲಾ ಧಿಕಾರಿ ಗಳಿಂದ ಅಭಿ ಪ್ರಾಯ ವನ್ನು ಸಂಗ್ರ ಹಿಸಿ ದರು. ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಹರ್ಷ ಗುಪ್ತಾ ಅವರು ಅಭಿಪ್ರಾ ಯಿಸಿ, ಉಳಿ ದೆಲ್ಲ ಸ್ವೀಪ್ ನ ಕ್ರಿಯಾ ಯೋಜನೆ ಗಳ ಜೊತೆಗೆ ಕಾರ್ಯ ಕ್ರಮ ಗಳಲ್ಲಿ ಸ ಕ್ರಿಯ ವಾಗಿ ನೇರ ವಾಗಿ ಜನ ರೊಂದಿಗೆ ಸಂಪರ್ಕ ಹೊಂದಿ ರುವ ಬಿ ಎಲ್ ಒಗಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಲೋಕಲ್ ಚಾನೆಲ್ ಗಳು ಚುನಾವಣಾ ಸಂದೇಶಗಳನ್ನು ಸಮಾಜದ ಹಿತದೃಷ್ಟಿಯಿಂದ ನೀಡಬೇಕು. ಜನ ಜಾಗೃತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಬಹುಮಾಧ್ಯಮಗಳ ನೆರವನ್ನು ಪಡೆಯಲಾಗಿದೆ.
ಇದಕ್ಕೂ ಮುಂಚೆ ಮಾತನಾಡಿದ ಅನಿಲ್ ಝಾ ಅವರು ಸದಾಚಾರ ಸಂಹಿತೆ ಬಗ್ಗೆ ವಿವರಿಸಿದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Monday, March 25, 2013

ಮಹಾನಗರಪಾಲಿಕೆ ವ್ಯಾಪ್ತಿಗೆ ಇನ್ನೊಂದು ನೋಂದಣಿ ಕೇಂದ್ರ

ಮಂಗಳೂರು, ಮಾರ್ಚ್. 25:-ಇಂದು ಜಿಲ್ಲಾಧಿಕಾರಿಗಳು ಮಹಾ ನಗರ ಪಾಲಿಕೆಯ ಮತ ದಾನ ನೋಂದಣಿ ಕೇಂದ್ರ ಕ್ಕೆ ಭೇಟಿ ನೀಡಿದ ಸಂದ ರ್ಭದಲ್ಲಿ ಅಲ್ಲಿ ನೆರೆ ದಿದ್ದ ಜನ ದಟ್ಟಣೆ ಯನ್ನು ಗಮ ನಿಸಿ ಮತ ದಾರರ ನೋಂದ ಣಿಗೆ  ಅನು ಕೂಲ ವಾಗು ವಂತೆ ಮಹಾನಗರಪಾಲಿಕೆ ಕದ್ರಿ ಉಪಕಚೇರಿಯಲ್ಲಿ ದಿನಾಂಕ 26-3-13ರ  ಬೆಳಿಗ್ಗೆಯಿಂದ ನೋಂದಣಿ ಕೇಂದ್ರ ಕಾರ್ಯಾರಂಭಗೊಳ್ಳಲಿದೆ.  ಮತದಾರ ಸಾರ್ವಜನಿಕರು ಈ ಕೇಂದ್ರದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆಯೆಂದು ಅವರು ತಿಳಿಸಿದ್ದಾರೆ.