Showing posts with label sveep for nation. Show all posts
Showing posts with label sveep for nation. Show all posts

Sunday, March 31, 2013

ಸುಭದ್ರ ಪ್ರಜಾಪ್ರಭುತ್ವಕ್ಕೆ ಪ್ರತಿಯೊಬ್ಬರೂ ಮತದಾನ ಮಾಡಿ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.31: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಿ. ಮತದಾನ ಪ್ರತಿಯೊಬ್ಬರ ಕರ್ತವ್ಯ ಹಾಗೂ ಹಕ್ಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಹೇಳಿದರು.
 ಅವ ರಿಂದು ನಗ ರದ ಬಿಜೈ ಯಲ್ಲಿ ರುವ ಭಾರತ್ ಮಾಲ್  ನಲ್ಲಿ ಸ್ವೀಪ್ ಕಾರ್ಯ ಕ್ರಮ ದಡಿ ಆಯೋ ಜಿಸ ಲಾದ ಯಕ್ಷ ಗಾನದ ಮೂಲಕ ಜಾಗೃತಿ ಕಾರ್ಯ ಕ್ರಮಕ್ಕೆ ಚೆಂಡೆ ಬಾರಿ ಸುವುದರ ಮೂಲಕ ಉದ್ಘಾಟಿಸಿದರು.
ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರತಿಯೊಬ್ಬರು ಮತದಾನ ಮಾಡುವಂತೆ ಪ್ರೇರೆಪಿಸಲು ಜಿಲ್ಲಾಡಳಿತ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಜಾಗೃತಿ ಕಾರ್ಯಕ್ರಮಗಳು ಫಲ ನೀಡುವಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
 ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ,
ಜಿಲ್ಲಾ ಪಂಚಾಯತ್ ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಜನ ಶಿಕಣ ಟ್ರಸ್ಟ್ ನ ಕೃಷ್ಣ ಮೂಲ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶ್ಯಾಮಲ ಅವರು ಸ್ವಾಗತಿಸಿದರು. ರೋಶನಿಲಯ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ವಿನೀತಾ ಅವರ  ನೇತ್ರತ್ವದಲ್ಲಿ ಹವ್ಯಾಸಿ ಬಳಗ ಕದ್ರಿ ಮತ್ತು ವಿದ್ಯಾರ್ಥಿಗಳು ಯಕ್ಷಗಾನ ಕಾರ್ಯಕ್ರಮ ನಡೆಸಿಕೊಟ್ಟರು.  

' ಮತದಾನ ನಮ್ಮ ಹಕ್ಕು,ಬನ್ನಿ ಪಾಲ್ಗೊಳ್ಳಿ'

ಮಂಗಳೂರು,ಮಾರ್ಚ್.31: ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ, ದಕ್ಷಿಣ ಕನ್ನಡ ಜಿಲ್ಲೆ ಯಲ್ಲೂ ಜನ ರಲ್ಲಿ  ಜಾಗೃತಿ ಮೂಡಿ ಸಲು ಜಿಲ್ಲಾ ಡಳಿತ ಕಾರ್ಯ ಯೋಜ ನೆಯನ್ನು ರೂಪಿ ಸಿದ್ದು, ಜಿಲ್ಲಾಧಿ ಕಾರಿ ಹರ್ಷ ಗುಪ್ತ ಅವರು ಇಂದು ನಗ ರದ ಬಿಜೈ ಭಾರತ್ ಮಾಲ್  ನಲ್ಲಿ ಸ್ವೀಪ್ ಕಾರ್ಯ ಕ್ರಮ ದಡಿ ಯಲ್ಲಿ ಆಯೋ ಜಿಸ ಲಾದ ಯಕ್ಷ ಗಾನ ಮೂಲಕ ಮತ ದಾನದ ಜಾಗೃತಿ ಅಭಿ ಯಾನಕ್ಕೆ ಚಾಲನೆ ನೀಡಿ ದರು. ಜಿಲ್ಲಾ ಪಂಚಾ ಯತ್ ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್, ಜನ ಶಿಕಣ ಟ್ರಸ್ಟ್ ನ ಕೃಷ್ಣ ಮೂಲ್ಯ ಕಾರ್ಯ ಕ್ರಮ ದಲ್ಲಿ ಉಪ ಸ್ಥಿತ ರಿದ್ದರು. ಶಿಶು ಕಲ್ಯಾಣ ಅಭಿ ವೃದ್ಧಿ ಅಧಿ ಕಾರಿ ಶ್ಯಾಮಲ ಅವರು ಸ್ವಾಗ ತಿಸಿ ದರು. ರೋಶನಿ ನಿಲಯ ಕಾಲೇ ಜಿನ ಪ್ರಾಧ್ಯಾ ಪಕಿ ಪ್ರೊ. ವಿನೀತಾ ಅವರ  ನೇತೃತ್ವ ದಲ್ಲಿ ಹವ್ಯಾಸಿ ಬಳಗ ಕದ್ರಿ ಮತ್ತು ವಿದ್ಯಾರ್ಥಿ ಗಳು ಯಕ್ಷ ಗಾನ ಕಾರ್ಯ ಕ್ರಮ ನಡೆಸಿ ಕೊಟ್ಟರು. ಸ್ವೀಪ್ ಬಗ್ಗೆ ಸಾರ್ವ ಜನಿಕ ರಿಂದ ಉತ್ತಮ ಪ್ರತಿ ಕ್ರಿಯೆ ವ್ಯಕ್ತ ವಾಗು ತ್ತಿದೆ.   
 ಭಾರತ ಚುನಾವಣಾ ಆಯೋಗ
ಕರ್ನಾಟಕ ವಿಧಾನಸಭಾ ಚುನಾವಣೆ-2013ರ ಮತದಾನವು ಮೇ 5 ರಂದು ಬೆಳಗಿನ 8 ರಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ.ಈ ಮತದಾನಕ್ಕಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಈಗಲೇ ಖಚಿತ ಪಡಿಸಿಕೊಳ್ಳಿ.
2013ರ ಜನವರಿ 1ಕ್ಕೆ 18 ವರ್ಷ ತುಂಬಿದವರೆಲ್ಲ ಮತಪಟ್ಟಿಗೆ ತಪ್ಪದೇ ಹೆಸರು ಸೇರಿಸಿ.ಮಾಹಿತಿಗಾಗಿ ಲಾಗ್ ಆನ್ ಮಾಡಿ.http://ceokarnataka.kar.nic.in/