

ಅವರು ಇಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಕ್ಕಳ ವಿಭಾಗ ದಲ್ಲಿ ಹೊಂಗಿ ರಣ ನೆಟ್ ವರ್ಕ್ ಮಂಗ ಳೂರು ಇವರ ವತಿ ಯಿಂದ ಏರ್ಪ ಡಿಸಿದ್ದ ಮಿತ್ರೋ ಪದೇ ಶಕರ ಸಮ್ಮೇ ಳನ ಉದ್ಘಾ ಟಿಸಿ ಮಾತ ನಾಡಿ ದರು.ಇನ್ನೂ ಇಬ್ಬರು ಹೆಚ್ಐವಿ ಬಾಧಿ ತರಿಗೆ ಸ್ವಾವ ಲಂಭಿ ಜೀವನ ಕ್ಕಾಗಿ ಸರ್ಕಾ ರದ ಸೌಲಭ್ಯ ಗಳನ್ನು ಒದಗಿ ಸುವ ಕಾರ್ಯ ಪ್ರಗತಿ ಯಲ್ಲಿದೆ ಎಂದ ಅವರು ಎಚ್ಐವಿ ಬಾಧಿತ ರಲ್ಲಿ ನಾವೂ ಸಮಾಜದ ಪ್ರಜೆ ಗಳೇ ಎಂಬ ಮನೋ ಭಾವ ಮೂಡಿ ಸಬೇ ಕಾಗಿದೆ ಅವರಲ್ಲಿ ಧೈರ್ಯ ಆತ್ಮ ಸ್ಥೈರ್ಯ ಉಂಟು ಮಾಡ ಬೇಕಿದೆ.ಇದಕ್ಕಾಗಿ ಜಿಲ್ಲಾ ಪಂಚಾಯತ್ ,ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಳಲ್ಲಿ ಅವರಿಗೆ ವಸತಿ ಸೌಲಭ್ಯಗಳನ್ನು ಆದ್ಯತೆ ಮೇಲೆ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆಯೆಂದರು.

ಡಾ.ಕಿಶೋರ್ ಸರ್ಕಾರಿ ವೈದ್ಯಾಧಿಕಾರಿಯಾಗಿದ್ದುಕೊಂಡು ಹೊಂಗಿರಣ ನೆಟ್ ವರ್ಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು 15 ಜನ ಎಚ್ಐವಿ ಬಾಧಿತರಿಗೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಅತ್ಯಂತ ಪರಿಶ್ರಮ ವಹಿಸಿದ್ದಾರೆ. ಅಲ್ಲದೆ ಎಚ್ಐವಿ ಬಾಧಿತರಿಗೆ ಎಲ್ಲಾ ನೆರವನ್ನು ಒದಗಿಸುತ್ತಾ 5-6 ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿ ಅವರನ್ನು ಹೊಂಗಿರಣ ನೆಟ ವರ್ಕ್ ದಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಹೊಂಗಿರಣ ನೆಟ್ ವರ್ಕ್ ನ ಅಧ್ಯಕ್ಷರಾದ ಲ್ಯಾನ್ಸಿ ಸವೇರಾ ಅವರು ವಹಿಸಿದ್ದರು. ಶ್ರೀಮತಿ ಸೀಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.