ಮಂಗಳೂರು.ಮಾರ್ಚ್.27:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಪ್ರಿಲ್ 2ರಿಂದ ಜಾರಿಗೆ ಬರಲಿರುವ ಹನ್ನೊಂದು ಇಲಾಖೆಗಳ 151 ಸೇವೆಗಳನ್ನು ನೀಡಲು ಸಜ್ಜಾಗಿ ಎಂದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಂಗಳವಾರ ಕರೆದ ಸಭೆಯಲ್ಲಿ ಸೂಚನೆ ನೀಡಿದರು.ಕರ್ನಾಟಕ ನಾಗರಿಕ ಸೇವೆ ಖಾತರಿ ಅಧಿನಿ ಯಮದ ವ್ಯಾಪ್ತಿಗೆ ಬರುವ ಎಲ್ಲ ಕಚೇರಿ ಗಳು ತಮ್ಮ ಕಚೇರಿಯ ಮುಂಭಾ ಗದಲ್ಲಿ ಮಾದರಿ ಮಾಹಿತಿ ಫಲಕ ವನ್ನು ಹಾಕಲೇ ಬೇಕು; ಜೊತೆಗೆ ಯಾವ್ಯಾವ ಸೇವೆಗೆ ಏನು ದಾಖಲೆ ಬೇಕೆಂಬ ಮಾಹಿತಿಯನ್ನು ಅಗತ್ಯವಾಗಿ ಎಲ್ಲರಿಗೆ ಗೋಚರಿಸುವಂತೆ ಹಾಕಿರಬೇಕೆಂದು ಹೇಳಿದರು.
ಈ ಎಲ್ಲ ಇಲಾಖೆಗಳು ಪ್ರತಿದಿನ ಈ ಬಗ್ಗೆ ವರದಿ ನೀಡಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗೆ ಪ್ರತಿದಿನದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಬೇಕೆಂದರು. ತಕ್ಷಣವೇ ಅಗತ್ಯ ವಿರುವ ಇಲಾಖೆಗಳು ಕಂಪ್ಯೂ ಟರ್ ಗಳನ್ನು ಖರೀದಿಸಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೇಮಿಸಿಕೊಳ್ಳಿ; ಯಾವ ಸಮಸ್ಯೆ ಗಳಿದ್ದರೂ ಅಧಿನಿ ಯಮ ಅನುಷ್ಠಾನಕ್ಕೆ ಮುನ್ನ ಮಾಹಿತಿ ನೀಡಿ ಎಂದ ಅವರು, ಎಲ್ಲರಿಗೂ ಈ ಸಂಬಂಧ ಸೂಕ್ತ ತರಬೇತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ವ್ಯಾಪ್ತಿಯಡಿ ಬರುವ ಇಲಾಖೆಗಳ ಮುಖ್ಯಸ್ಥರಿಂದ ಕೈಗೊಂಡಿರುವ ಕ್ರಮಗಳ ವರದಿಯನ್ನು ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಪಡೆದುಕೊಂಡರು. ಮಹಾನಗರಪಾಲಿಕೆಯ ಸಿದ್ಧತೆಗಳನ್ನು ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ವಿವರಿಸಿದರು.