ಮಂಗಳೂರು,ಮಾರ್ಚ್.26:ಸಶಕ್ತ ಯುವಕ ಮತ್ತು ಯುವತಿ ಮಂಡಲಗಳು ಸಮಾಜಮುಖಿ ಕರ್ತವ್ಯಗಳನ್ನು ನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಜನಸಂಪರ್ಕವಿರುವ ಕಚೇರಿಗಳನ್ನು ಮಧ್ಯವರ್ತಿಗಳಿಂದ ಮುಕ್ತರನ್ನಾಗಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಅವರಿಂದು ನಗರದ ಡಯಟ್ ನಲ್ಲಿ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ,ಮಂಗಳೂರು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಸಭಾಭವನದಲ್ಲಿ ಹಾಸನ,ಮಡಿಕೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೆಂಟರ್ ಯೂತ್ ಕ್ಲಬ್ ನ ನಾಯಕರಿಗೆ ಸಾಮಥ್ರ್ಯ ನಿರ್ಮಾಣ ತರಬೇತಿ ಕಾರ್ಯಕ್ರಮದ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಾವು ಮಾಡುವ ಕಾರ್ಯಕ್ರಮಗಳ ಉದ್ದೇಶ ಒಳೆಯದಿದ್ದರೆ ಪ್ರತಿಫಲವೂ ಒಳ್ಳೆಯದಿರುತ್ತದೆ; ಒಳ್ಳೆಯ ಕೆಲಸವನ್ನು ಮಾಡುದರಲ್ಲಿ ನಮ್ಮ ನಡುವೆ ಸ್ಪರ್ಧೆಗಳಾಗಬೇಕೇ ವಿನ: ಕೆಟ್ಟದ್ದನ್ನು ಮಾಡಲು ಅಲ್ಲ ಎಂದರು. ಒಳಿತನ್ನು ಮಾಡುವ ಮನೋಭಾವ ಎಲ್ಲರಿಗೂ ಇರಬೇಕು. ಸರ್ಕಾರದ ಸವಲತ್ತುಗಳನ್ನು ನಿಮ್ಮ ಹಳ್ಳಿಗಳ ಅರ್ಹರಿಗೆ ದೊರಕಿಸಿಕೊಡಿ. ಯೂತ್ ಕ್ಲಬ್ ಗಳು ಸಕ್ರಿಯವಾದಷ್ಟು ಸಮಾಜಕ್ಕೆ ಒಳಿತಾಗಲಿದೆ ಎಂದರು.
ಬಳಿಕ ನಡೆದ ಸಂವಾದದಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ಅನುಭವಗಳನ್ನು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಹೇಳಿದರು. ಡಯಟ್ ನ ಪ್ರಾಂಶುಪಾಲರಾದ ಪಾಲಾಕ್ಷಪ್ಪ, ನೆಹರು ಯುವಕೇಂದ್ರದ ಯುವ ಸಮನ್ವಯಾಧಿಕಾರಿ ಸಿ ಜೆ ಎಫ್ ಡಿ ಸೋಜ ಉಪಸ್ಥಿತರಿದ್ದರು.