ಮಂಗಳೂರು,ಮಾರ್ಚ್.12:ದೇಶಾದ್ಯಂತದಿಂದ ಸಾವಿರಾರು ಭಕ್ತರು ದಿನನಿತ್ಯ ಭೇಟಿ ನೀಡುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 180 ಕೋಟಿ ರೂ.ಗಳ ಸಮಗ್ರ ಯೋಜನೆ ರೂಪಿಸಲಾಗಿದ್ದು, ಪ್ರಥಮ ಹಂತದಲ್ಲಿ 60 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ; ಆದರೆ ಇದುವರೆಗೆ 27.37 ಕೋಟಿ ರೂ.ಗಳ ಸಾಧನೆ ದಾಖಲಿಸಲಾಗಿದೆ.
ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಧಾರ್ಮಿಕದತ್ತಿ ಇಲಾಖೆಯ ಆಯುಕ್ತರಾದ ಬಿ ಎನ್ ಕೃಷ್ಣಯ್ಯ ಅವರು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಇಂದು ಸುಬ್ರ ಹ್ಮಣ್ಯ ದಲ್ಲಿ ಕಾಮ ಗಾರಿ ಗಳ ಪರಿ ಶೀಲನೆ ನಡೆಸಿದ ಬಳಿಕ ಆಯೋ ಜಿಸಿದ್ದ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡಿದ ಅವರು, ಹಲವು ಪ್ರಗತಿ ಪರಿ ಶೀಲನಾ ಸಭೆ ಗಳ ಬಳಿ ಕವೂ ಕಾಮ ಗಾರಿ ಯಲ್ಲಿ ನಿರೀ ಕ್ಷಿತ ಪ್ರಗತಿ ದಾಖ ಲಿಸದ ಬಗ್ಗೆ ಅಸ ಮಾಧಾನ ವ್ಯಕ್ತ ಪಡಿಸಿದ ಅವರು, ಗುತ್ತಿಗೆ ದಾರರ ವಿರುದ್ಧ ತೀಕ್ಷ್ಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಭಕ್ತಾದಿಗಳ ಸೌಕರ್ಯಕ್ಕಾಗಿ ದೇವಳದ ದುಡ್ಡಿನಲ್ಲೇ ಮಾಸ್ಟರ್ ಪ್ಲಾನ್ ರೂಪಿಸಿದ್ದು 2009ರಲ್ಲೇ ಕಾರ್ಯಾದೇಶ ನೀಡಲಾಗಿದ್ದು 2011ರಲ್ಲಿ ಎಲ್ಲಾ ಕಾಮಗಾರಿಗಳು ಸಂಪೂರ್ಣಗೊಳ್ಳಬೇಕಿದ್ದು ತಾನು ಸುಬ್ರಹ್ಮಣ್ಯದಿಂದ ಸಭೆಮುಗಿಸಿ ಹೋಗುವ ಮುನ್ನ ಕಾಮಗಾರಿ ಮುಗಿಸಿಕೊಡುವ ದಿನಾಂಕವನ್ನು ಲಿಖಿತವಾಗಿ ನೀಡಬೇಕೆಂದು ಆದೇಶಿಸಿದ ಅವರು, ಗುತ್ತಿಗೆ ಪಡೆದ ಸಂಸ್ಥೆಯ ಮುಖ್ಯಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರೈಸಲು ಸೂಚಿಸಿದರು.ಎಲ್ಲ ಕಾಮ ಗಾರಿ ಗಳು ಮೇ 30 ರೊಳಗೆ ಸಂಪೂರ್ಣ ಗೊಳಿಸಿ, ಉದ್ಘಾ ಟನೆಗೆ ದಿನ ನಿಗದಿ ಪಡಿ ಸಲು ಸೂಚಿ ಸಿದ ಆಯು ಕ್ತರು, ಸಭೆ ಯಲ್ಲಿ ಉಪ ಸ್ಥಿತರಿದ್ದ ಜಿಲ್ಲಾ ಧಿಕಾ ರಿಗಳು ಹಾಗೂ ಸೂಪ ರಿಂಟೆಂ ಡೆಂಟ್ ಇಂಜಿ ನಿಯರ್ ಅವ ರಿಂದ ಪೂರಕ ಮಾಹಿತಿ ಪಡೆ ದರು. ನಿಗದಿ ಪಡಿ ಸಿದ ದಿನಾಂ ಕದಂದು ಕಾಮ ಗಾರಿ ಮುಗಿ ಸಲು ಕನಿಷ್ಠ 1500 ಕಾರ್ಮಿಕರ ಅಗ ತ್ಯವಿದ್ದು, ಈ ಮಾದ ರಿಯ ಕಾಮ ಗಾರಿ ಮುಂದು ವರಿದರೆ ಕಾಲ ಮಿತಿ ಯೊಳಗೆ ಕಾಮಗಾರಿ ಮುಗಿಸುವುದು ಅಸಾಧ್ಯ ಎಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ ಎಸ್ ಬಾಲಕೃಷ್ಣ ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು. ತಮ್ಮಲ್ಲಿ 600 ಕಾಮರ್ಿಕರ ವಾಸಕ್ಕೆ ಸೌಲಭ್ಯವಿದ್ದು, ಉಳಿದವರಿಗೆ ವಾಸ್ತವ್ಯಕ್ಕೆ ತೊಂದರೆಯಾಗುವ ಬಗ್ಗೆ ಪ್ರಾಜೆಕ್ಟ್ ಡೈರೆಕ್ಟರ್ ಸಭೆಯ ಗಮನಸೆಳೆದಾಗ, ಈ ಸಬೂಬುಗಳೆಲ್ಲ ಬೇಡ ಎಂದ ಜಿಲ್ಲಾಧಿಕಾರಿಗಳು, ಕಾರ್ಮಿಕರಿಗೆ ವಸತಿ ಸೌಕರ್ಯ ನೀಡುವುದಾಗಿ ಹೇಳಿದರು. ತಾನು ಕರ್ತವ್ಯ ನಿರ್ವಹಿಸುವ ರೀತಿ ವಿಭಿನ್ನವಾಗಿದ್ದು, ಸಭಾ ನಡಾವಳಿಗಳ ಉಲ್ಲಂಘನೆ ಯಾದರೆ ಕಾನೂನು ಕ್ರಮ ಖಚಿತ ಎಂದು ಎಚ್ಚರಿಸಿದ ಆಯುಕ್ತರು, ಪ್ರತಿ ದಿನ ಸಂಜೆ ತನ್ನ ಕಚೇರಿಗೆ ಗುತ್ತಿಗೆದಾರ ಸಂಸ್ಥೆ ಕಾರ್ಮಿಕರ ಹಾಜರಿ ಮತ್ತು ಪ್ರಗತಿಯನ್ನು ಫ್ಯಾಕ್ಸ್ ಮಾಡಬೇಕು; ಲೋಕೋಪಯೋಗಿ ಇಂಜಿನಿಯರ್ ವಿಭಾಗ ವಾರಕ್ಕೊಮ್ಮೆ ಪ್ರಗತಿ ವರದಿ ನೀಡಬೇಕೆಂದ ಅವರು, ತಿರುಪತಿಯಲ್ಲಿ 30,000 ಜನರಿಗೆ ಏಕಕಾಲದಲ್ಲಿ ಪ್ರಸಾದ ಸ್ವೀಕರಿಸಲು ಭೋಜನಾಲಯ ನಿರ್ಮಿಸಿದ್ದು ಮಾದರಿಯಾಗಿದ್ದು, ಆ ಮಾದರಿಯನ್ನು ಇಂಜಿನಿಯರ್ ಗಳು ವೀಕ್ಷಿಸಿ ಇಲ್ಲಿ ಅಳವಡಿಸಬಹುದು ಎಂದೂ ಸಲಹೆ ಮಾಡಿದರು.ಕಾಲ ಮಿತಿ ಯೊಳಗೆ ಕಾಮ ಗಾರಿ ಮುಗಿ ಸುವ ರಭಸ ದಲ್ಲಿ ಗುಣ ಮಟ್ಟ ದಲ್ಲಿ ರಾಜಿ ಇಲ್ಲ ಎಂದ ಅವರು, ಪಾರ್ಕಿಗ್ ಹಾಗೂ ಇನ್ನಿ ತರ ಪೂರಕ ವ್ಯವ ಸ್ಥೆಗೆ ಉಪ ಸಮಿತಿ ರಚಿಸಿ ಶೀಘ್ರವೇ ನಿರ್ಧಾರ ಕೈ ಗೊಂಡು ಕಾಮ ಗಾರಿ ಮುಗಿ ಸಬೇ ಕೆಂದರು.ಇದೇ ಸಂದರ್ಭ ದಲ್ಲಿ ಒಳ ಚರಂಡಿ ವ್ಯವಸ್ಥೆಗೆ ಸಂಪೂರ್ಣ ಗ್ರಾಮಪಂಚಾಯಿತಿಯನ್ನು ಗಮನದಲ್ಲಿರಿಸಿ ಯೋಜನೆ ರೂಪಿಸಬೇಕೆಂದು ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಬೋರ್ಡ್ ನ ಇಂಜಿನಿಯರ್ ಗೆ ಸೂಚಿಸಿದರು. ಪ್ರವಾಸಿ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಉತ್ತಮವಾಗಿರಬೇಕು. ಈ ಯೋಜನೆಯ ಬಗ್ಗೆ ಗ್ರಾಮಪಂಚಾಯಿತಿ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ನಿಮ್ಮ ಸಮೀಕ್ಷೆಯ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಬೇಕೆಂದು ಆಯುಕ್ತರು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮಪಂಚಾಯಿತಿ ಸದಸ್ಯರ ಮನವಿಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸ್ವೀಕರಿಸಿದರಲ್ಲದೆ, ಸದಸ್ಯರ ಸಮಸ್ಯೆಗಳನ್ನು ಆಲಿಸಿದರು. ಸಲಹೆಗಳನ್ನು ಪರಿಗಣಿಸುವುದಾಗಿ ಹೇಳಿದರು. ಸಭೆಯಲ್ಲಿ ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ನಿವೃತ್ತ ಐಎಎಸ್ ಅಧಿಕಾರಿ ಸುರೇಶ್, ನಿವೃತ್ತ ಮುಖ್ಯ ಇಂಜಿನಿಯರ್ ಮನಮೋಹನ್ ಸಭೆಯಲ್ಲಿದ್ದು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಟಿ ವಿ ಭಟ್ ಅವರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತರಾದ ಸುಂದರಭಟ್, ತಹಸೀಲ್ದಾರ್ ವೈದ್ಯನಾಥ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲ್ ನಾಯಕ್ ಅವರು ಉಪಸ್ಥಿತರಿದ್ದರು.