ಅವರಿಂದು ರೋಟರಿ ಕ್ಲಬ್ ಮಂಗಳೂರು ಸಹ ಯೋಗದಲ್ಲಿ ನಗರದ ಫಾದರ್ ಮುಲ್ಲರ್ ಚಾರಿ ಟೇಬಲ್ ಸಂಸ್ಥೆಯಲ್ಲಿ ಆಯೋ ಜಿಸಲಾದ ಜೈವಿಕ ಅನಿಲ ಘಟಕಕ್ಕೆ ಚಾಲನೆ ನೀಡಿ ಮಾತ ನಾಡುತ್ತಿದ್ದರು. ಬೆಳೆಯು ತ್ತಿರುವ ನಗರ ಶುಚಿತ್ವ ಹಾಗೂ ಸೌಂದರ್ಯ ದಲ್ಲೂ ಮುಂದಿರ ಬೇಕೆಂಬ ದೃಷ್ಟಿಯಿಂದ ಹಲವು ಯೋಜನೆ ಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಪ್ಲಾಸ್ಟಿಕ್ ನಿಷೇಧವನ್ನೂ ಜಾರಿ ಮಾಡಲಾಗಿದೆ; ಆದರೆ ಪರಿಣಾಮ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ರೋಟರಿಯಂತಹ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಮುಖ್ಯ ಪಾತ್ರವಹಿಸಬೇಕು.
ನಗರದಲ್ಲಿ ಮೆಡಿಕಲ್ ಕಾಲೇಜುಗಳು, ಹಾಸ್ಟೆಲ್ ಗಳು, ಹೋಟೆಲ್ ಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಎಲ್ಲವನ್ನೂ ಜಿಲ್ಲಾಡಳಿತ ಕಾನೂನು ಮೂಲಕ ಹೇರದೆ ಸ್ವಯಂಪ್ರೇರಿತವಾಗಿ ಪರ್ಯಾಯ ಶಕ್ತಿಗಳನ್ನು, ಪರಿಸರ ಸ್ನೇಹಿ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದರು. ಅಂತಹ ಒಂದು ಯತ್ನ ರೋಟರಿಯವರ ಪ್ರಯತ್ನದಿಂದ ಫಾದರ್ ಮುಲ್ಲರ್ಸ್ ಸಂಸ್ಥೆಯ ಅಡುಗೆ ಕೋಣೆಯಲ್ಲಿ ಅಡುಗೆ ಅನಿಲ ಪೂರೈಸಲು ಜೈವಿಕ ಅನಿಲ ಘಟಕ ಆರಂಭವಾಗಿದ್ದು ಅಭಿನಂದನೀಯ ಎಂದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಫಾದರ್ ಮುಲ್ಲರ್ಸ್ ನಿರ್ದೇಶಕರಾದ ಪ್ಯಾಟ್ರಿಕ್ ರೋಡ್ರಿಗಸ್, ಆಡಳಿತ ನಿರ್ದೇಶಕ ರಿಚರ್ಡ್ ಕುವೆಲ್ಲೊ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು.