ಮುರುಗಾ ಬೇಟೆ ಉಯ್ತಾ ಬಂದುವಾ ಲಕ್ಷ್ಮಣಾ
ರಾಮುಸೀತಾದೋಗಾಜನಶೆಳ್ಯಾಕ್ ಬೋಸ್ಲ್ಯಾರ್.
ಬುಡಕಟ್ಟು ಜನಾಂದ ಸೋಲಿಗರು ಮತ್ತು ಸ್ಥಳೀಯ ಮೂಲನಿವಾಸಿಗಳಾದ ಕುಡುಬಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ವೈಭವದ ಸಾಲುಗಳಿವು. ಮಾರ್ಚ್ 15ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಚ್ಚೂರಿನ ಕಾನದ ಗುರಿಕಾರರ ಮನೆಯಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ ಹಾಗೂ ಅವರ ಗುರಿಕಾರರ ಸಹಕಾರದಿಂದ ವಾರ್ತಾ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ವಾರ್ತಾ ಇಲಾಖೆ ಬುಡ ಕಟ್ಟು ಜನಾಂ ಗದ ಕಲಾ ಸಂಸ್ಕೃ ತಿಯನ್ನು ನಾಡಿಗೆ ಪರಿಚ ಯಿಸುವ ನಿಟ್ಟಿ ನಲ್ಲಿ ರಾಜ್ಯ ದಾದ್ಯಂ ತ ಸಾಂ ಸ್ಕೃತಿಕ ವಿನಿ ಮಯ ಕಾರ್ಯ ಕ್ರಮ ಹಮ್ಮಿ ಕೊಂಡಿದೆ. ದ.ಕ.ಜಿಲ್ಲೆ ಯಲ್ಲಿ ಈ ಸಾಂಸ್ ಕೃತಿಕ ವಿನಿಮಯವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಮಂಗಳೂರಿನ ಹೊರವಲಯದ ಮುಚ್ಚೂರಿನಲ್ಲಿ ಸ್ಥಳೀಯ ಮೂಲನಿವಾಸಿಗಳಾದ ಕುಡುಬಿಗಳ ಸಾಂಪ್ರಾದಾಯಿಕ ಹಬ್ಬ ಹೋಳಿ ಹುಣ್ಣಿಮೆಯ ನಡುವೆ ಚಾಮರಾಜನಗರದ ಯಳಂದೂರಿನ ಬಿಳಿಗಿರಿರಂಗನ ಬೆಟ್ಟದ ಸೋಲಿಗ ಪುಷುಮಾಲೆ ಕಲಾ ಸಂಘದ ಕಾರ್ಯಕ್ರಮ ಎಲ್ಲರ ಮನಸೆಳೆಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸೋಲಿಗರೊಂದಿಗೆ ಹಲವು ವರ್ಷಗಳ ಒಡನಾಟವಿರಿಸಿಕೊಂಡಿದ್ದ ನರೇಗಾ ಒಂಬುಡ್ಸ್ಮನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕರಾದ ಕೃಷ್ಣಮೂಲ್ಯ ಅವರು, ಸಮಾರಂಭ ವನ್ನುದ್ದೇಶಿಸಿ ಮಾತನಾಡಿದರು. ಗ್ರಾಮಪಂಚಾಯಿತಿ ಕಾರ್ಯದರ್ಶಿಗಳು ಸೇರಿದಂತೆ ಸ್ಥಳೀಯ 254 ಕುಟುಂಬಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


ಸೋಲಿ ಗರ ತಂಡಕ್ಕೆ ನಾಯಕ ಬಸವರಾಜ್. ಇವರು ರೊಟ್ಟಿ ಹಬ್ಬದ ಸಂದರ್ಭದಲ್ಲಿ ಕುಣಿಯುವ ಗೋರ್ ಗೋರ್ ಕ ಗೋರ್ ಬಾನ್, ಜೇನುಕುರುಬರು ಸುಗ್ಗಿ ಕಾಲದಲ್ಲಿ ಪ್ರದರ್ಶಿಸುವ ಕೌಜಲಗಿ ನೃತ್ಯ ಹಾಗೂ ಮಾರಿ ಕುಣಿತ ಸ್ಥಳೀಯರನ್ನು ಆಕರ್ಷಿಸಿತು. ಈ ತಂಡ ನವದೆಹಲಿಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನಲ್ಲಿ ಮಾರ್ಚ್ 21 ರವರೆಗೆ ವಿವಿಧೆಡೆಗಳಲ್ಲಿ ಸೋಲಿಗರ ತಂಡ ಕಾರ್ಯಕ್ರಮ ನೀಡಲಿದೆ.