ಇಂದು ನಗರದ ಮಂಗಳಾ ಸ್ಟೇ ಡಿಯಂ ಕಚೇರಿ ಯಲ್ಲಿ ನಡೆದ ಪ್ರಗತಿ ಪರಿ ಶೀಲನಾ ಸಭೆ ಯನ್ನು ದ್ದೇಶಿಸಿ ಮಾತ ನಾಡಿದ ಅವರು, ಏಪ್ರಿಲ್ ನೊಳಗೆ ಕಾಮ ಗಾರಿ ಮುಗಿಸಿ ಮೇ ಮೊದಲ ವಾರದಲ್ಲಿ ಸಿಂಥೆ ಟಿಕ್ ಟ್ರ್ಯಾಕ್ ಉದ್ಘಾ ಟನೆ ನಡೆಸಲು ನಿರ್ಧ ರಿಸ ಲಾಗಿದೆ ಎಂದರು.
ಕಾಮಗಾರಿ ಪರಿಶೀಲನೆಗೆ ರಚಿಸಲಾಗಿರುವ ಸಮಿತಿಯಲ್ಲಿ ಭದ್ರಾವತಿಯ ರಾಜು ವೇಲು ಅವರನ್ನು ಸೇರಿಸಲು ಸಮಿತಿಯ ಸದಸ್ಯರ ಸಲಹೆಯಂತೆ ನಿರ್ಧರಿಸಲಾಯಿತು. ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ಅವರು ಪ್ರಮಾಣೀಕರಿಸಿದ ಬಳಿಕ ಹಣ ಬಿಡುಗಡೆ ಮಾಡಲಾಗುವುದು ಎಂದ ಜಿಲ್ಲಾಧಿಕಾರಿಗಳು ಕಾಮಗಾರಿಯ ಗುಣಮಟ್ಟದ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ 3.09 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪ್ರಗತಿ ವಿವರವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಸಭೆಗೆ ತಿಳಿಸಿದರು.
ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ನಗರದಲ್ಲಿ ಇನ್ನೊಂದು ಈಜು ಕೊಳ ನಿರ್ಮಾಣದ ಬಗ್ಗೆ ಸಲಹೆ ನೀಡಿದ ಉಪಸಭಾಧ್ಯಕ್ಷರು, ಎಮ್ಮೆಕೆರೆ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು ಒಂದೆಡೆ ನೈಸರ್ಗಿಕ ಮತ್ತು ಇನ್ನೊಂದು ಬದಿಯಲ್ಲಿ ಈಜುಕೊಳ ನಿರ್ಮಿಸಬಹುದು ಎಂದರು. ಇಲ್ಲಿನ ಸುತ್ತಮುತ್ತಲ ವಾತಾವರಣ ಈಜುಕೊಳ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.
ಟ್ರ್ಯಾಕ್ ನ್ನು 2ಡಿ ಯಲ್ಲಿ ರೂಪಿಸಲು ಯುವಜನ ಮತ್ತು ಸೇವಾ ಇಲಾಖೆಯ ನಿರ್ದೇಶಾನಾಲಯದ ಜೊತೆ ಮಾತುಕತೆ ನಡೆಸುವುದಾಗಿ ಉಪಸಭಾಧ್ಯಕ್ಷರು ಹೇಳಿದರು. ಬಂಗ್ರ ಕೂಳೂರಿನಲ್ಲಿ ಕ್ರೀಡಾಭಿವೃದ್ಧಿಗೆ ಮೈದಾನ ರೂಪಿಸುವ ಬಗ್ಗೆ ಪರಿಶೀಲಿಸಿ ವರದಿ ನೀಡುವುದಾಗಿ ಮೂಡಾ ಆಯುಕ್ತರಾದ ಅಜಿತ್ ಕುಮಾರ್ ಹೆಗ್ಡೆ ಅವರು ಹೇಳಿದರು.
ಮೂಡಬಿದ್ರೆ ಸ್ವರಾಜ್ ಮೈದಾನದಲ್ಲಿ ಕ್ರೀಡಾಂಗಣ ನಿರ್ಮಿಸಲು 40 ಲಕ್ಷ ರೂ. ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ; ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ತಾಂತ್ರಿಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರು ಸಭೆಗೆ ತಿಳಿಸಿದರು. ಕರಾವಳಿ ಉತ್ಸವ ಮೈದಾನಕ್ಕೆ ಗೇಟ್ ಅಳವಡಿಸುವ ಬಗ್ಗೆ, ಎಲ್ಲರ ಅನುಕೂಲಕ್ಕೆ ಸುಸ್ಸಜ್ಜಿತ ಶೌಚಾಲಯ ನಿರ್ಮಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು.