ಹಲವು ಸಂದರ್ಭಗಳಲ್ಲಿ, ಹಲವೆಡೆ ಸರ್ಕಾರಿ ಸೌಲಭ್ಯಗಳು ಅದರ ಅನುಷ್ಠಾನಗಳ ಕುರಿತು ಅಪಸ್ವರ ಇರುವ ಸನ್ನಿವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವಿನ ಸಮುದಾಯ ಆರೋಗ್ಯ ಭವನ ಇದಕ್ಕೆಲ್ಲ ಅಪವಾದವಾಗಿದೆ. ಇಲ್ಲಿನ ವೈದ್ಯರು ಮತ್ತು ಅವರ ತಂಡ ಇರುವ ವ್ಯವಸ್ಥೆಯೊಳಗೆ ಜನರಿಗೆ ಹೊಸದನ್ನು ನೀಡುವ ಕುರಿತು ಸದಾ ಚಿಂತಿಸುತ್ತದೆ. ಈ ಚಿಂತನೆಯೊಳಗೆ ಮೂಡಿ ಬಂದುದೇ ಆರ್ ಸಿ ಹೆಚ್ ಗಾರ್ಡನ್.
ಈ ಬಗ್ಗೆ ಗ್ರಾಮೀಣ ಮಹಿಳೆಯರಿಗೆ ಸರಳವಾಗಿ, ಸುಲಭವಾಗಿ ಹಾಗೂ ಮನಮುಟ್ಟುವಂತೆ ಅರ್ಥೈಸಲು ಆರ್ ಸಿ ಹೆಚ್ ಗಾರ್ಡನ್ ವಾಮದಪದವಿನಲ್ಲಿ ಸೃಷ್ಟಿಯಾಯಿತು. ಮಡಿಲು, ತಾಯಿಭಾಗ್ಯ, ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ತಾಯಿ ಭಾಗ್ಯ ಪ್ಲಸ್ ಯೋಜನೆ, ಬಾಣಂತಿಯರಿಗೆ ಪೌಷ್ಠಿಕ ಆಹಾರ ಯೋಜನೆಗಳ ಕುರಿತು ಹೆಣ್ಣು ಮಗುವಿನ ಬೆಳವಣಿಗೆಗೆ ಪೂರಕವಾಗಿ ಸರ್ಕಾರ ಕೈಗೊಂಡ ಯೋಜನೆಗಳನ್ನು ಆಕರ್ಷಕವಾಗಿ ಒಂದು ತೋಟದಲ್ಲಿ ಚಿತ್ರಿಸಲಾಯಿತು. ಅರ್ಹರು ಈ ಎಲ್ಲ ಸೌಲಭ್ಯಗಳನ್ನು ಪಡೆಯ ಬಹುದು ಎಂಬುದನ್ನು ಮನದಟ್ಟು ಮಾಡಲು ಈ ಒಂದು ಹೂದೋಟ ಸಾಕು. ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆ ಇಲ್ಲದ ಈ ಸುಸ್ಜಜ್ಜಿತ ಸಮುದಾಯ ಆರೋಗ್ಯ ಕೇಂದ್ರ ಸೇವೆಗೆ ಮಾದರಿಯಾಗಿ ನಿಂತಿದೆ. 12,360 ಜನಸಂಖ್ಯೆಯಿರುವ ಇಲ್ಲಿನ ಬಹುತೇಕ ಜನರು ಆರೋಗ್ಯ ಸೇವೆಯನ್ನು ಪಡೆಯುತ್ತಿರುವುದು ಈ ಸಮುದಾಯ ಆರೋಗ್ಯ ಕೇಂದ್ರದಿಂದಲೇ. ಈ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ.
ಇಲ್ಲಿನ ಜನರ ಮುಖ್ಯ ಕಸುಬು ಕೃಷಿ ಮತ್ತು ಬೀಡಿ ಸುತ್ತುವುದು. 1988ರಲ್ಲಿ ಆರಂಭಗೊಂಡ ಈ ಆರೋಗ್ಯ ಕೇಂದ್ರ 1992ರಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿತು. ಡಾ ದುರ್ಗಾಪ್ರಸಾದ್ ಅವರ ಸೇವೆಗೆ ಸಕರ್ಾರ ಹಾಗೂ ಸಮಾಜದಿಂದ ಹಲವು ಪ್ರಶಸ್ತಿಗಳು ಲಭ್ಯವಾಗಿದೆ. ಇವರ ಜೊತೆಯಲ್ಲೇ ಅನುಭವ ಪಡೆದ ಡಾ ನವೀನ್ ಕುಮಾರ್ ಪ್ರಸ್ತುತ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೇ ಮಾದರಿಯನ್ನು ಉಳ್ಳಾಲದಲ್ಲಿ ಅಳವಡಿಸಿಕೊಳ್ಳುತ್ತಿದ್ದು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ಪ್ರಶಂಸೆ ಪಡೆದಿರುತ್ತಾರೆ.
ತಾಯಿಯಂದಿರ ಮತ್ತು ಹೆಣ್ಣು ಮಕ್ಕಳ ಆರೋಗ್ಯವನ್ನು ಗಮನದಲ್ಲಿರಿಸಿ ಆರಂಭಗೊಂಡಿರುವ ಈ ಆರ್ ಸಿ ಹೆಚ್ ಗಾರ್ಡನ್ ಮಾಚ್ರ್ ಐದರಂದು ಜನಪ್ರತಿನಿಧಿಗಳು ಹಾಗೂ ಡಾಕ್ಟರ್ ಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆಯಾಯಿತು. ಚಿತ್ರಕಲಾ ಶಿಕ್ಷಕ ಪುರುಷೋತ್ತಮ ಆಚಾರ್ಯ ಅವರು ತಾಯಿ ಮತ್ತು ಮಗುವಿನ ಶಿಲ್ಪವನ್ನು ಬಿಡಿಸಿದ್ದು, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ನಳಿನಿ ಬಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ರಮೇಶ್ ಕುಡುಮೇರು, ಗ್ರಾಮಪಂಚಾಯತ್ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ತುಂಗಪ್ಪ ಬಂಗೇರ, ಡಾ ಟೆರ್ರಿ ನ್ಯಾನ್ಸಿ ಲೋಬೋ,ಆರ್ ಸಿ ಹೆಚ್ ಡಾ ರುಕ್ಮಿಣಿ, ಡಾ ಹೇಮಲತಾ, ಡಾ ಕಿಶೋರ್, ಡಾ ದಿನೇಶ್ ಕಾಮತ್ ವೇದಿಕೆಯಲ್ಲಿದ್ದರು.