ಮಂಗಳೂರು ಮಾರ್ಚ್.20:ವಾರ್ತಾ ಇಲಾಖೆ,ಮಂಗಳೂರು ಇವರು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದನ್ವಯ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ನಿನ್ನೆ ಸೋಮವಾದಂದು ಸಂಜೆ ಏರ್ಪಡಿಸಿದ್ದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ತಪ್ಪಲಿನ ಬುಡಕಟ್ಟು ಕಲಾವಿದರಾದ ಪುಪುಮಾಲೆ ಕಲಾತಂಡದ ಸದಸ್ಯರು ನಡೆಸಿಕೊಟ್ಟ ಸೋಲಿಗರ ನೃತ್ಯ ಅತ್ಯಂತ ಆಕರ್ಷಕವಾಗಿ ಜನಮನ ಸೂರೆಗೊಂಡಿದೆ.ಸೋಲಿ ಗರ ನೃತ್ಯ ಕಾರ್ಯ ಕ್ರಮದ ಜೊತೆ ಯಲ್ಲಿ ಸ್ಥ ಳೀಯ ಕೊರಗ ಸಮು ದಾಯದ ಆದಿ ಸಿರಿ ಕಲಾ ತಂಡ ದವರೂ ತಮ್ಮ ನೃತ್ಯ ಪ್ರದ ರ್ಶನ ನೀಡಿದ್ದು,ಎರಡು ಆದಿ ವಾಸಿ ಸಾಂ ಸ್ಖೃತಿಕ ಕಲಾ ತಂಡ ಗಳ ಸಂಸ್ಕೃತಿ ವಿನಿ ಮಯಕ್ಕೆ ವೇದಿಕೆ ಸಾಕ್ಷಿ ಯಾಯಿತು.
ಸಮಾ ರಂಭ ದಲ್ಲಿ ಬಾಳೆ ಪುಣಿ ಗ್ರಾಮ ಪಂಚಾ ಯತ್ ಅಧ್ಯಕ್ಷ ರಾದ ಚಂದ್ರ ಶೇಖರ ಆಳ್ವಾ, ಮಹಾ ತ್ಮ ಗಾಂಧಿ ರಾ ಷ್ಟ್ರೀಯ ಗ್ರಾ ಮೀಣ ಉದ್ಯೋಗ ಭರವಸೆ ಯೋಜ ನೆಯ ಒಂ ಬುಡ್ಸ್ ಮನ್ ಬಿ. ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಮುಂತಾ ದವರು ಹಾಜ ರಿದ್ದರು. ಪತ್ರ ಕರ್ತ ಗುರು ವಪ್ಪ ಎನ್.ಟಿ. ಬಾಳೆ ಪುಣಿ ಕಾರ್ಯ ಕ್ರಮ ನಿರೂ ಪಿಸಿ ದರು. ಶಾಲಾ ಮಕ್ಕ ಳಿಂದ ಸ್ವಚ್ಛತಾ ಗೀತೆ ಹಾಗೂ ಸ್ವಚ್ಛತಾ ಘೋಷಣೆ ಗಳನ್ನು ನಡೆಸಿ ಕೊಡ ಲಾಯಿತು.