
ಅವ ರಿಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ ರಿನ ಪುರಸಭಾ ಸಭಾಂ ಗಣ ದಲ್ಲಿ ಕಾಯ್ದೆಯ ಲೋಕಾ ರ್ಪಣೆ ಮಾಡಿ ಮಾತ ನಾಡು ತ್ತಿದ್ದರು. 11 ಸರ್ಕಾರಿ ಇಲಾಖೆ ಗಳು 151 ಸೇವೆ ಗಳನ್ನು ನೀಡುವ ವಾಗ್ದಾನ ವನ್ನು ಸರ್ಕಾರ ಪ್ರಥಮ ಹಂತ ದಲ್ಲಿ ಜನ ರಿಗೆ ನೀಡಿದ್ದು, ಪಾರ ದರ್ಶ ಕತೆ ಮತ್ತು ಜವಾ ಬ್ದಾರಿ ಯುತ ಆಡಳಿತ ಕಾಲಮಿತಿಯೊಳಗೆ ಜನಸಾಮಾನ್ಯರಿಗೆ ಲಭಿಸುವಂತೆ ರೂಪಿಸಲಾಗಿದೆಯಲ್ಲದೆ, ಈ ಕಾಯಿದೆಯನ್ನು ಕಾನೂನು ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪ್ರಥಮ ಹಂತದಲ್ಲಿ ರಾಜ್ಯದ ದಕ್ಷಿಣ ಕನ್ನಡದಿಂದ ಪುತ್ತೂರು, ಬೀದರ್ ನಿಂದ ಔರಾದ್ ಮತ್ತು ಚಿತ್ರದುರ್ಗದಿಂದ ಚಿತ್ರದುರ್ಗ ತಾಲೂಕು ಮತ್ತು ಧಾರವಾಡದಿಂದ ಧಾರವಾಡ ತಾಲೂಕುಗಳನ್ನು ಆರಿಸಲಾಗಿದ್ದು, ಜನಸೇವೆ ಮತ್ತು ಕರ್ತವ್ಯಪ್ರಜ್ಞೆ ಮೆರೆಯಲು ಆಡಳಿತಕ್ಕೆ ಉತ್ತಮ ಅವಕಾಶ ಎಂದರು.

ಲಾಂಛನ ಮತ್ತು ಧ್ಯೇಯ ವಾಕ್ಯ ಗಳನ್ನು ಬಿಡು ಗಡೆ ಗೊಳಿಸಿ ಮಾತ ನಾಡಿದ ಸಂಸ ದರಾದ ನಳಿನ್ ಕುಮಾರ್ ಕಟೀಲ್ ಅವರು, ಸೇವೆಗೆ ಸಿದ್ಧ, ಕಾಲಕ್ಕೆ ಬದ್ಧ ಎಂಬ ಘೋಷ ವಾಕ್ಯ ಅನು ಷ್ಠಾನಕ್ಕೆ ಬಂ ದರೆ ಗ್ರಾಮೀಣ ಪ್ರದೇ ಶದ ಜನರಿಗೆ ಇದು ವರೆಗೆ ಆಗು ತ್ತಿದ್ದ ತೊಂದ ರೆಗ ಳಿಂದ ಮುಕ್ತಿ ಸಿಗ ಲಿದೆ ಎಂದರು. ಜನಪರ ನೂತನ ಅಧಿನಿಯಮವನ್ನು ರೂಪಿಸಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಸಂಸದರು, ಮುಂದಿನ ದಿನಗಳಲ್ಲಿ ಈ ಕಾಯಿದೆಯಿಂದ ಜನರು ನೆರವನ್ನು ಪಡೆಯಲಿ ಎಂದು ಹಾರೈಸಿದರು. ಯಾವಗಲೂ ಜನರೊಂದಿಗೆ ಇದ್ದ ಮುಖ್ಯಮಂತ್ರಿಗಳಿಗೆ ಜನರ ನೋವು ನಲಿವುಗಳ ಅರಿವಿದ್ದು ಅವರ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಇತಿಶ್ರೀ ಹಾಡಲು ಈ ಕಾಯಿದೆಗೆ ಸಾಧ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಅವರು, ಈ ಕಾಯಿದೆಯಿಂದ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಉಪಯೋಗವಾಗಲಿದೆ; ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಇದು ಸೂಕ್ತ ಕಾಯಿದೆ ಎಂದ ಅವರು, ಜನರ ದೂರು ದುಮ್ಮಾನಕ್ಕೆ ಉತ್ತರ ಕೊಡಲೇ ಬೇಕಾದ ಈ ಕಾಯಿದೆಯಿಂದ ಗ್ರಾಮೀಣರಿಗೆ ನೆರವಾಗಲಿದೆ. ಪುತ್ತೂರು ತಾಲೂಕಿನ ಆಯ್ಕೆ ಸೂಕ್ತವಾಗಿದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.

ಕರ್ನಾ ಟಕ ನಾಗ ರಿಕ ಸೇವಾ ಖಾತ್ರಿ ಮಸೂ ದೆಯ ಬಗ್ಗೆ ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ಪ್ರಭಾರ ಜಿಲ್ಲಾ ಧಿಕಾರಿ ಕೆ ಎ ದಯಾ ನಂದ ಅವರು, ಕಾಯಿದೆ ಅನು ಷ್ಠಾನಕ್ಕೆ ಪ್ರಾಮಾ ಣಿಕ ಪ್ರಯತ್ನ ಹಾಗೂ ಸೂಕ್ತ ತರ ಬೇತಿ ನೀಡ ಲಾಗು ವುದು ಎಂದರು. ಮುಖ್ಯ ಮಂತ್ರಿಗಳ ತವರು ಜಿಲ್ಲೆಯಲ್ಲಿ ಪೈಲಟ್ ಯೋಜನೆಯಡಿ ಆಯ್ಕೆಗೊಂಡ ತಾಲೂಕು ಹಾಗೂ ಏಪ್ರಿಲ್ ನಿಂದ ಎಲ್ಲ ಜಿಲ್ಲೆಗಳಲ್ಲಿ ಆರಂಭವಾಗುವ ಯೋಜನೆಯನ್ನು ರಾಜ್ಯಕ್ಕೇ ಮಾದರಿಯಾಗಿ ದಕ್ಷಿಣ ಕನ್ನಡದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
