ಮಂಗಳೂರು,ಮಾರ್ಚ್.24:ಮಾರ್ಚ್ ಒಂದರಿಂದ ಪ್ರಾಯೋಗಿಕವಾಗಿ ರಾಜ್ಯದ 4 ತಾಲೂಕುಗಳಲ್ಲಿ ಆರಂಭಗೊಂಡ 'ಸಕಾಲ' ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2011 ಇದೇ ಏಪ್ರಿಲ್ 2ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಕುರಿತು 22 ರಂದು ಸಂಜೆ ಮುಖ್ಯ ಕಾರ್ಯ ದರ್ಶಿ ಯವ ರಾದ ಎಸ್ ವಿ ರಂಗ ನಾಥ್ ಅವರು, ವಿಡಿಯೋ ಕಾನ್ಫ ರೆನ್ಸಿಂಗ್ ಮೂಲಕ ರಾಜ್ಯದ ಎಲ್ಲ ಜಿಲ್ಲಾ ಧಿಕಾರಿ ಗಳೊಂ ದಿಗೆ 'ಸಕಾಲ' ಪರಿಣಾ ಮಕಾರಿ ಅನು ಷ್ಠಾನ ಕುರಿತು ಚರ್ಚೆ ನಡೆ ಸಿದರು. ದಕ್ಷಿಣ ಕನ್ನಡದಲ್ಲಿ ಪೈಲೆಟ್ ಯೋಜನೆಯಡಿ ಪುತ್ತೂರು ತಾಲೂಕಿನಲ್ಲಿ ಯೋಜನೆ ಅನುಷ್ಠಾನದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು, ಯೋಜನೆ ಅನುಷ್ಠಾನಕ್ಕೆ ತರಲು ಜಿಲ್ಲೆ ಸಜ್ಜಾಗಿದೆ ಎಂದರು.
ಅಧಿನಿಯಮದಡಿ ಬರುವ ಎಲ್ಲ ಇಲಾಖೆಗಳು ತಾವು ಒದಗಿಸುವ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಸೂಚನಾ ಫಲಕಗಳ ಮುಖಾಂತರ ಕಡ್ಡಾಯವಾಗಿ ಪ್ರದರ್ಶಿಸಲು ಸೂಚನೆ ನೀಡಲಾಗಿದೆ ಎಂದರು. ಇದರ ಜೊತೆ ಅರ್ಜಿಯ ಜೊತೆಗೆ ಏನೆಲ್ಲಾ ಪೂರಕಮಾಹಿತಿಗಳನ್ನು (ಚೆಕ್ ಲಿಸ್ಟ್)ನೀಡಬೇಕೆಂಬ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸಲು ಕ್ರಮಕೈಗೊಳ್ಳುವುದಾಗಿ ಯೂ ಜಿಲ್ಲಾಧಿಕಾರಿಗಳು ಹೇಳಿದರು. ಈ ಬಗ್ಗೆ ಪ್ರತಿ ದಿನದ ಪ್ರಗತಿಯ ಬಗ್ಗೆ ಪರಿ ಶೀಲನೆ ನಡೆ ಸಲು ಜಿಲ್ಲಾ ಮಟ್ಟ ದಲ್ಲಿ ನೋಡಲ್ ಅಧಿಕಾ ರಿಯೊ ಬ್ಬರ ಅಗತ್ಯ ವನ್ನು ಪ್ರತಿ ಪಾದಿಸಿದ ಜಿಲ್ಲಾ ಧಿಕಾ ರಿಗಳು, 26 ರಂದು ಈ ಸಂಬಂಧ ತಮ್ಮ ಕಚೇರಿ ಯಲ್ಲಿ ಪೂರ್ವ ಪರಿಶೀ ಲನೆ ಸಭೆ ನಡೆ ಸುವುದಾಗಿ ಹೇಳಿದರು. ಪುತ್ತೂರಿನಿಂದ 3725 ಅರ್ಜಿಗಳು ಸಕಾಲ ಅಧಿನಿಯಮದಡಿ ಸ್ವೀಕರಿಸಲಾಗಿದ್ದು, 3284 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದರು.
ರಾಜ್ಯ ಮಟ್ಟದಲ್ಲಿ ಈ ಯೋಜನೆಯಡಿ 97 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 80 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿರುವುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. ಸಕಾಲ ಅನುಷ್ಠಾನದಿಂದ ರಾಜ್ಯದಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ಮತ್ತು ಪಾರದರ್ಶಕ ಸೇವೆ ದೊರಕಿಸಿಕೊಡುವ ಕರ್ನಾಟಕ ಸರ್ಕಾರದ ಆಶಯಕ್ಕೆ ಇಂಬುಕೊಟ್ಟಂತಾಗಿದೆ ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಉಪಸ್ಥಿತರಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಹಾಗೂ ಸೇವಾ ಖಾತರಿ ಅಧಿನಿಯಮದಡಿ ಬರುವ ಎಲ್ಲ ಇಲಾಖೆಗಳು ವಿಡಿಯೋ ಕಾನ್ಫರೆನ್ಸ್ ವೇಳೆ ಉಪಸ್ಥಿತರಿದ್ದರು.