Friday, March 9, 2012

ಸೇವೆಯನ್ನು ಸವಾಲಾಗಿ ಸ್ವೀಕರಿಸಿ: ಸೀಮಂತ್ ಕುಮಾರ್ ಸಿಂಗ್

ಮಂಗಳೂರು,ಮಾರ್ಚ್.09: ಮಂಗಳೂರು ಪೊಲೀಸ್ ಕಮಿಷನರೇಟ್ ನಲ್ಲಿ ಶೇಕಡ 95 ಮಹಿಳೆಯರೇ ಇದ್ದು, ಮಹಿಳೆಯರದ್ದೇ ಪ್ರಾಬಲ್ಯ. ಈ ಪ್ರಾಬಲ್ಯವನ್ನು ಸಿಸಿಬಿ ವಿಭಾಗ ಮತ್ತು ಪಿಸಿಆರ್ ಚಾಲನೆಯಲ್ಲೂ ತೋರಿಸಬೇಕೆಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ಮಂಗ ಳೂರಿ ನಲ್ಲಿ ನೂತನ ಪೊಲೀಸ್ ಕಮಿಷ ನರೇಟ್ ನಲ್ಲಿ ಮಾರ್ಚ್ 8 (ಗುರು ವಾರ) ರಂದು ವಿಭಿನ್ನ ವಾಗಿ ನಡೆದ ಮಹಿಳಾ ದಿನಾ ಚರಣೆ ಕಾರ್ಯ ಕ್ರಮದ ಅಧ್ಯ ಕ್ಷತೆ ವಹಿಸಿ ಮಾತ ನಾಡು ತಿದ್ದರು. ಪೊಲೀಸ್ ಇಲಾ ಖೆಯ ಒಂದೇ ವಿಭಾ ಗಕ್ಕೆ ಸೇವೆ ಮೀಸಲಿ ರಿಸದೇ ಎಲ್ಲಾ ವಿಭಾಗ ಗಳ ಲ್ಲಿಯೂ ತಮ್ಮ ಸಾಮಥ್ರ್ಯ ವನ್ನು ತೋರಿಸಬೇಕೆಂದ ಅವರು, ಎಲ್ಲರೂ ಪೊಲೀಸ್ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಇಲಾಖೆಗೆ ಸೇರಿದ್ದರೂ ವಾರ್ಷಿಕ ಕ್ರೀಡಾಕೂಟದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಕೊರತೆಯ ಬಗ್ಗೆಯೂ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಮಹಿಳಾ ಪೊಲೀಸರ ಸಮಸ್ಯೆಗಳನ್ನು ಆಲಿಸಿದರು.
ಪ್ರಜ್ಞಾ ಕೌನ್ಸಿ ಲಿಂಗ್ ನ ನಿರ್ದೇ ಶಕ ರಾದ ಹೀಲ್ಡಾ ರಾಯ ಪ್ಪನ್ ಅವರು ಮಾತ ನಾಡಿ ಮಹಿಳೆ ಯರು ಸಮಸ್ಯೆ ಗಳೊಂ ದಿಗೆ ಇಲಾಖೆ ಯನ್ನು ಸಂಪ ರ್ಕಿಸಿ ದಾಗ ಸೂಕ್ತ ರೀತಿಯ ಸ್ಪಂ ದನ ಅಗತ್ಯ ಎಂ ದರು. ನಮ್ಮ ಸಾಮಾ ಜಿಕ ವ್ಯವಸ್ಥೆ ಯಲ್ಲಿ ಪೊ ಲೀಸ್ ಇಲಾಖೆ ಮತ್ತು ಮಹಿಳೆ ಯರ ನಡುವೆ ಸೌ ಹಾರ್ದ ಸಂಬಂ ಧದ ಅಗತ್ಯ ವನ್ನು ಪ್ರತಿ ಪಾದಿಸಿ ದರು.
ರೋಶನಿ ನಿಲ ಯದ ಅಸಿ ಸ್ಟೆಂಟ್ ಪ್ರೊಫೆ ಸರ್ ವಿನುತಾ ಅವರು ಮಹಿಳೆ ಯರ ಆ ರೋಗ್ಯ ಮತ್ತು ಸಮಸ್ಯೆ ಗಳ ಕುರಿತು ಬೆಳಕು ಚೆಲ್ಲಿ ದರು. ಮಹಿಳಾ ಪೊಲೀಸ್ ಠಾಣೆಯ ಕಲಾ ವತಿ ಅವರು ಕಾರ್ಯ ಕ್ರಮ ಸಂ ಯೋಜಿ ಸಿದರು. ಡಿಸಿಪಿ ಧ ರ್ಮಯ್ಯ ಮತ್ತು ಎಸಿಪಿ ಸುಬ್ರ ಹ್ಮಣ್ಯ ಅವರು ಉಪ ಸ್ಥಿತ ರಿದ್ದರು.