Saturday, September 22, 2012

ಸಮಗ್ರ ಭಾರತದ ಕಲ್ಪನೆ ಯುವಕರಿಗೆ ಅಗತ್ಯ: ಡಾ. ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಮಂಗಳೂರು, ಸೆಪ್ಟೆಂಬರ್.22: ನೆಹರು ಯುವ ಕೇಂದ್ರ  ಮಂಗಳೂರು ಘಟಕದ ಆಶ್ರಯದಲ್ಲಿ  "ಜಿಲ್ಲಾ ಯುವ ಸಮಾವೇಶ" ಮಂಗಳೂರಿನಲ್ಲಿಂದು ಆಯೋಜಿಸಲಾಗಿತ್ತು. ನಗರದ ಮಿಲಾಗ್ರಿಸ್ ಜ್ಯುಬಿಲಿ ಸಭಾಂಗಣದಲ್ಲಿ  ನಡೆದ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಯುವಜನಾಂಗ ಮಾಡುವ ಸೇವೆ ಮುಂದೆ ದೇಶದ ಶಕ್ತಿಯಾಗಿ ಪರಿಣಮಿಸಲಿದೆ ಆದರೆ  ಸಮಗ್ರ ಭಾರತದ ಕಲ್ಪನೆಯ ಕೊರತೆ ಇಂದಿನ ಯುವ ಜನರಲ್ಲಿ ಕಾಣುತ್ತಿದೆ ಎಂದು  ವಿಷಾದ ವ್ಯಕ್ತಪಡಿಸಿದರು.ಯುವ ಜನಾಂಗ ದೇಶದ ಸಂಪತ್ತು. ಆ ಸಂಪ ತ್ತನ್ನು ಜೋಪಾನ ವಾಗಿ ರಕ್ಷಿ ಸಿದರೆ ಈ ದೇಶದ ಶಕ್ತಿ ಯನ್ನು ಮುಂದಿನ ಜನಾಂ ಗಕ್ಕೆ ನೀಡಲು ಸಾಧ್ಯ ವಾಗ ಲಿದೆ, ಭೋಗ ಜೀವ ನದ ಕಡೆಗೆ ವ್ಯಕ್ತಿತ್ವ ಮಾರಿ ಕೊಳ್ಳುವ ಸಂಸ್ಕೃತಿ ಬೆಳೆಸಿ ಕೊಳ್ಳದೆ ಯುವ ಜನರು ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಚಾರಿತ್ರ್ಯವನ್ನು ಕೂಡಾ ಬೆಳೆಸಿಕೊಳ್ಳುವುದು ಅತಿ ಅಗತ್ಯ ಎಂದು ಯುವಜನರಿಗೆ ಹಿತ ನುಡಿಗಳನ್ನಾಡಿದರು. ನಾವು  ಇಂದು ನೆಮ್ಮದಿಯ ಬದುಕನ್ನು ಸಾಗಿಸಲು ದೇಶದ ಗಡಿಯಲ್ಲಿ ಹಗಲಿರುಳು,ಚಳಿ,ಮಳೆ-ಗಾಳಿ ಎನ್ನದೆ ಕಾವಲು ಕಾಯುವ  ಯೋಧರು ಕಾರಣ.ಆದರೆ ಇವರ ಬಗ್ಗೆ  ಬಹುತೇಕ ಯುವಕರಿಗೆ  ಗೊತ್ತೇ ಇಲ್ಲ. ಹಾಗಾಗಿ ಸೈನ್ಯಕ್ಕೆ ಸೇರುವ ಮೂಲಕ  ರಾಷ್ಟ್ರ ಸೇವೆ ಮಾಡುವ  ಯುವಕರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರಿಗೆ ರಾಷ್ಟ್ರ ಪ್ರಜ್ಞೆ, ಜಾಗೃತಿ ಮೂಡಿಸುವ ಕೆಲಸ ಅಗಬೇಕಾಗಿದೆ  ಎಂದು ಹೆಗ್ಗಡೆ ಅವರು ನುಡಿದರು.
ಸಮಾರಂಭದಲ್ಲಿ  ಭಾಗವಹಿಸಿದ ಕೇಂದ್ರ ಕಾರ್ಪೋರೇಟ್ ವ್ಯವಹಾರ ಮತ್ತು ಇಂಧನ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಅವರು ಭಾರತ ಸರ್ಕಾದರ ಯೋಜನೆಗಳ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಮುಂದಿನ 15 ರಿಂದ 30 ವರ್ಷಗಳಲ್ಲಿ ನಮ್ಮ ದೇಶ ಯುವಶಕ್ತಿಯಾಗಿ ಜಗತ್ತಿನ ದಿಗಂತದಲ್ಲಿ ಮೂಡಿ ಬರಲಿದ್ದು, ಯುವಶಕ್ತಿ ದೇಶದ ಆಶಾಕಿರಣ.ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ  ರಾಷ್ಟ್ರದ ಯುವ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಂಡು ಭಾರತ ಜಗತ್ತಿನ ನಂ.1 ರಾಷ್ಟ್ರವಾಗಿ ಬೆಳೆಸಬೇಕಿದೆ ಎಂದರು.
  ನೆಹರು ಯುವ ಕೇಂದ್ರ ಸಂಘಟ ನೆಯ ಮಹಾ ನಿರ್ದೇ ಶಕ ಸಲೀಂ ಅಹ ಮ್ಮದ್  ಅವರು ಜಿಲ್ಲಾ ಸಮಾ ವೇಶ ವನ್ನು ಉದ್ಘಾ ಟಿಸಿ ಮಾತ ನಾಡಿ ದರು. 2012ನೆ ಸಾಲಿ ನಲ್ಲಿ ಕೌಶಲ್ಯ ಅಭಿ ವೃದ್ಧಿ ವರ್ಷ ವನ್ನಾಗಿ ಆಚರಿ ಸಲಾ ಗುತ್ತಿದೆ. ಯೂತ್ ಕ್ಲಬ್ ಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಯುವಕರಿಗೆ ಶಕ್ತಿ ನೀಡುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ದೇಶದಲ್ಲಿ 3 ಲಕ್ಷ ಕ್ಲಬ್ ಗಳನ್ನು ನೋಂದಣಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ವಿಧಾನಸಭೆ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಯುವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ 17 ನೇ ಯುವಜನೋತ್ಸವವನ್ನು ಮಂಗಳೂರಿನಲ್ಲಿ ಅತ್ಯುತ್ತಮವಾಗಿ ಸಂಘಟಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ದ.ಕ. ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡರನ್ನು ಸನ್ಮಾನಿಸಲಾಯಿತು.
  ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಬಿ.ರಮಾನಾಥ ರೈ,   ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮೇಯರ್ ಗುಲ್ಜಾರ್ ಬಾನು, ಉಪ ಮೇಯರ್ ಅಮಿತಕಲಾ, ಮಾಜಿ ಸಚಿವ ಬಿ.ಎ.  ಮೊಯ್ದಿನ್, ಪೊಲೀಸ್ ಆಯುಕ್ತ ಮನೀಶ್ ಕರ್ಬೇಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಯುವ ಕೇಂದ್ರದ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ರಾಜ್ಯ ಕಾರ್ಯದರ್ಶಿ ಆರ್. ನಟರಾಜನ್ ಮತ್ತಿತರ ಗಣ್ಯರು ಸಮಾರಂಭದಲ್ಲಿ  ಉಪಸ್ಥಿತರಿದ್ದರು.
ಕಾರ್ಯ ಕ್ರಮ ದಲ್ಲಿ ಮಾರ್ಗ ದರ್ಶಿ ಯುವಕ ಮಂಡಲ ಗಳಿಗೆ ಧನ ಸಹಾಯ, ಕ್ರೀಡಾ ಸಾಮಗ್ರಿ ವಿತ ರಿಸ ಲಾಯಿತು.
ಜಿಲ್ಲಾ ಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಸ್ವಾಗತಿಸಿದರು. ಆಕಾಶವಾಣಿ ಕಲಾವಿದೆ ಕಸ್ತೂರಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಮನೋಹರ್ ಪ್ರಸಾದ್, ವಸಂತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.