Tuesday, September 18, 2012

ಪ್ರವಾಸೋದ್ಯಮ ಅಭಿವೃದ್ಧಿಗೆ ಸಚಿವರಿಂದ ತಣ್ಣೀರು ಬಾವಿ ಸುತ್ತಮುತ್ತಲ ಪ್ರದೇಶ ವೀಕ್ಷಣೆ

ಮಂಗಳೂರು, ಸೆಪ್ಟೆಂಬರ್.18 :ಮಂಗಳೂರಿನ ಸಮುದ್ರ ತೀರ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಸೆಪ್ಟೆಂಬರ್ 17 ಸೋಮವಾರದಂದು ಸಂಜೆ ತಣ್ಣೀರು ಬಾವಿಗೆ ಭೇಟಿ ನೀಡಿದರು.
ಸಮುದ್ರ ತೀರದಲ್ಲಿ ಗಾಲ್ಫ್ ಕ್ಲಬ್ ನಿರ್ಮಾಣ, ಮರೈನ್ ಪಾರ್ಕ್ ನಿರ್ಮಾಣ ಹಾಗೂ ತಣ್ಣೀರು ಬಾವಿಯಿಂದ ಸುಲ್ತಾನಬತ್ತೇರಿಗೆ ತೂಗು ಸೇತುವೆ ನಿರ್ಮಾಣ ಯೋಜನೆಗಳ ನಕ್ಷೆಗಳನ್ನು ಪರಿಶೀಲಿಸಿದರಲ್ಲದೆ, ತಣ್ಣೀರು ಬಾವಿಯಿಂದ ಸುಲ್ತಾನ್ ಬತ್ತೇರಿಗೆ ಬೋಟ್ ನಲ್ಲಿ ಪಯಣಿಸಿ ಪ್ರತ್ಯಕ್ಷವಾಗಿ ಸ್ಥಳ ಪರಿಶೀಲನೆ ನಡೆಸಿದರು.
ಗಾಲ್ಫ್ ಕ್ಲಬ್ ರಚನೆಗೆ ಮೀಸಲಿರುವ ಜಾಗವನ್ನು ಆದಷ್ಟು ಶೀಘ್ರ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಉಪಸಭಾಪತಿ ಗಳಾದ ಎನ್ ಯೋಗೀಶ್ ಭಟ್, ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿ ಶ್ರೀಮತಿ ಲತಾ ಕೃಷ್ಣ ರಾವ್, ನಿರ್ದೇಶಕರಾದ ಶ್ರೀಮತಿ ಸತ್ಯವತಿ, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿತೇಂದ್ರ, ತಹಸೀಲ್ದಾರ್ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.