ಮಂಗಳೂರು, ಸೆಪ್ಟೆಂಬರ್.18: ಗಣೇಶ ಹಬ್ಬದಲ್ಲಿ ಗಣೇಶ ಮೂತರ್ಿಗಳನ್ನು ನೀರಿನಲ್ಲಿ ವಿಸರ್ಜಿಸುವಾಗ ನೀರು ರಾಸಾಯಿನಿಕಗಳಿಂದ ಕೂಡಿದ ಬಣ್ಣಗಳಿಂದ ಕಲ್ಮಶಗೊಳ್ಳುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಸೀಸದ ಬಣ್ಣದಲ್ಲಿನ ಸೀಸದ ಪ್ರಮಾಣ ನೀರಿನಲ್ಲಿ ಬೆರೆಯುವುದರಿಂದ ಮಕ್ಕಳಲ್ಲಿ ಬುದ್ದಿಶಕ್ತಿ ಕಡಿಮೆಯಾಗಲಿದೆ. ಹಾಗಾಗಿ ಮೂರ್ತಿಗಳನ್ನು ತಯಾರಿಸುವಾಗ ಸಸ್ಯಾಧಾರಿತ ನೈಸರ್ಗಿಕ ಬಣ್ಣಗಳನ್ನು ಮಾತ್ರ ಉಪಯೋಗಿಸಿ. ನಿಂತ ನೀರು ಅಂದರೆ ಕೆರೆ, ಕೊಳ, ಬಾವಿಗಳಲ್ಲಿ ನೀರಿನಲ್ಲಿ ಕಲ್ಮಶ ಸೇರುವುದನ್ನು ತಡೆಯಲು ಹಾಗೂ ಜೇಡಿಮಣ್ಣು ನೀರಿಗೆ ಸೇರುವುದನ್ನು ತಡೆಯಲು ಗಣೇಶ ಮೂರ್ತಿಗಳನ್ನು ಇಂತಹ ನೀರಿನಲ್ಲಿ ಮುಳುಗಿಸದಿರಿ. ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಕೋರಿದ್ದಾರೆ.