ಮಂಗಳೂರು,ಸೆಪ್ಟೆಂಬರ್.22: 2012ನೇ ಸಾಲಿನ ಪ್ರತಿಷ್ಠಿತ ಸರೋಜಿನಿ ನಾಯ್ಡು ರಾಷ್ಟ್ರೀಯ ಪ್ರಶಸ್ತಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯೂರೋದ ವರದಿಗಾರರಾದ ಕು.ಸಂಧ್ಯಾ ಡಿಸೋಜರವರಿಗೆ ಲಭಿಸಿದೆ.
ಪಂಚಾಯತ್ ರಾಜ್ ಮತ್ತು ಮಹಿಳೆ ಎಂಬ ವಿಷಯದಲ್ಲಿ ಪ್ರಕಟವಾಗುವ ಅತ್ಯುತ್ತಮ ಲೇಖನಗಳಿಗೆ ಈ ಪ್ರಶಸ್ತಿ ಲಭಿಸುತ್ತದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಡಾ.ರೋನಾಲ್ಡ್ ಅನಿಲ್ ಫೆರ್ನಾಂಡಿಸ್ ಮತ್ತು ಗುರುವಪ್ಪ ಬಾಳೆಪುಣಿಯವರಿಗೆ ಈ ಪ್ರಶಸ್ತಿ ಲಭಿಸಿದ್ದು, ಕು.ಸಂಧ್ಯಾರವರು ಜಿಲ್ಲೆಯ ಪ್ರಶಸ್ತಿ ಪುರಸ್ಕೃತರಲ್ಲಿ 3ನೇ ಯವರಾಗಿರುತ್ತಾರೆ. ಸಾಕ್ಷರತಾ ಆಂದೋಲನದಲ್ಲಿ ಅಕ್ಷರ ಕಲಿತು ಸಶಕ್ತರಾದ ಬೆಳ್ತಂಗಡಿ ತಾಲೂಕಿನ ಲಾಯಿಲದ ಯಶೋಧ ಮತ್ತು ಅವರ ತಂಡದವರ ಯಶೋಗಾಥೆಯ ಲೇಖನಕ್ಕಾಗಿ ಕು.ಸಂಧ್ಯಾರವರಿಗೆ ಈ ಪ್ರಶಸ್ತಿ ಲಭಿಸಿದೆ. ಅಕ್ಟೋಬರ್ 1ನೇ ತಾರೀಕಿಗೆ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದ್ದು, ಪ್ರಶಸ್ತಿ ` 2 ಲಕ್ಷ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ.