ಮಂಗಳೂರು, ಸೆಪ್ಟೆಂಬರ್. 11: ಸೆಪ್ಟೆಂಬರ್ 27ರಿಂದ ಮೂರು ದಿನಗಳ ಕಾಲ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲು ನಿರ್ಧರಿಸಿತು.
ಸೆಪ್ಟೆಂಬರ್ 10ರಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ಪೂರ್ವಭಾವಿ ಸಭೆಯಲ್ಲಿ ಮಂಗಳೂರನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯೊಂದು ಮೈಲುಗಲ್ಲಾಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಉಪಸ್ಥಿತರಿದ್ದವರಿಂದ ವ್ಯಕ್ತವಾಯಿತು.
ಸೆಪ್ಟೆಂಬರ್ 27ರಂದು ಸ್ಕೈ ಡೈವಿಂಗ್, ಟ್ರೆಷರ್ಹಂಟ್, ಸಂವಾದ ಕಾರ್ಯಕ್ರಮ ನಗರದ ವಿವಿಧೆಡೆಗಳಲ್ಲಿ ಆಚರಿಸುವ ಕುರಿತು ಚಚರ್ಿಸಲಾಯಿತು. ಪ್ರವಾಸೋದ್ಯಮವನ್ನು ಆಕರ್ಷಣೀಯವಾಗಿಸಲು ಸ್ಕೈ ಡೈವಿಂಗ್, ಸಿಟಿ ರೈಡ್, ಪ್ರವಾಸೋದ್ಯಮ ನಡಿಗೆ, ಪ್ರವಾಸೋದ್ಯಮ ಸಚಿವರನ್ನು ಆಹ್ವಾನಿಸುವ ಬಗ್ಗೆಯೂ ಚಚರ್ೆ ನಡೆಯಿತು.
ಸ್ಕೈ ಡೈವಿಂಗ್ ಕುರಿತು ಸವಿವರ ಮಾಹಿತಿಯನ್ನು ನೀಡಲು ಜಿಲ್ಲಾಧಿಕಾರಿಗಳು ಈ ಸಂಬಂಧ ಯೋಜನೆ ರೂಪಿಸಿರುವ ಯತೀಶ್ ಬೈಕಂಪಾಡಿ ಅವರಿಗೆ ಸೂಚಿಸಿದರು. ಎನ್ ಎಂ ಪಿಟಿ ಯ ಅಧಿಕಾರಿಗಳು ಪ್ರವಾಸೋದ್ಯಮ ವಿಷಯವನ್ನು ಅಧ್ಯಯನವಾಗಿಸಿರುವ ಕಾಲೇಜಿನ ಮಕ್ಕಳಿಗೆ ಅಂತರ್ ಕಾಲೇಜು ಸ್ಪರ್ಧೆಯನ್ನು ಆಯೋಜಿಸುವ ಕುರಿತು ಪ್ರಸ್ತಾವವನ್ನಿರಿಸಿದರು. ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿತೇಂದ್ರ ಅವರು ನುಡಿದರು.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ .ಎ,, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಮೂಡಾ ಆಯುಕ್ತರಾದ ಅಜಿತ್ ಕುಮಾರ್ ಹೆಗಡೆ ಅವರು ಸಭೆಯಲ್ಲಿದ್ದರು.