ಶಿಕ್ಷಕರ ಪ್ರಶಸ್ತಿಗಾಗಿ ನಡೆಯುವ ನೂಕು ನುಗ್ಗಲಾಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಶಸ್ತಿಗೆ ಶಿಕ್ಷಕರು ಯಾವುದಾದರೂ ರೂಪದಲ್ಲಿ ಅಜರ್ಿ ಹಾಕುವ ಬದಲು, ಶಿಕ್ಷಕರ ಮೌಲ್ಯಮಾಪನವನ್ನು ರಹಸ್ಯವಾಗಿ ಸಂಸ್ಥೆಯೊಂದರ ಮೂಲಕ ಮಾಡಿ ಅರ್ಹ ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ಕಾರ್ಯ ನಡೆಯಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ಉಪ ಸಭಾಧ್ಯಕ್ಷ ಯೋಗೀಶ್ ಭಟ್, ಪರಿಪೂರ್ಣತೆ ಶಿಕ್ಷಣದ ಮಹತ್ವ ಆಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ, ಪುತ್ತೂರು ಹಾರಾಡಿಯ ಸರಕಾರಿ ಮಾದರಿ ಹಿ. ಪ್ರಾ. ಶಾಲೆಯ ಶಿಕ್ಷಕ ಕುಮಾರ್, ಕಳೆದ ವರ್ಷ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ದಿವಾಕರ ಆಚಾರ್ಯ, ಕೆ. ಸರೋಜಿನಿ ಅವರನ್ನು ಸನ್ಮಾನಿಸುವ ಜೊತೆಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ 12 ಮಂದಿ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಾಸಕ ಯು.ಟಿ. ಖಾದರ್, ಮೇಯರ್ ಗುಲ್ಜಾರ್ ಬಾನು, ದ.ಕ. ಜಿ.ಪಂ. ಅಧ್ಯಕ್ಷೆ ಶೈ ಲಜಾ ಭಟ್, ಉಪ ಮೇಯರ್ ಅಮಿತ ಕಲಾ, ಮನಪಾ ಸಾರ್ವ ಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ, ದ.ಕ. ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತಾ.ಪಂ. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿ ಪಡೆದ ಶಾಲೆಗಳಿಗೆ ಸನ್ಮಾನ ಪತ್ರ ವಿತರಣೆ ಹಾಗೂ ಸ್ವಚ್ಛ ಶಾಲೆಗಳಿಗೆ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.