ಮಂಗಳೂರು,ಸೆಪ್ಟೆಂಬರ್.25:ಸರ್ವ ಶಿಕ್ಷಣ ಯೋಜನೆಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ 2012-13ನೆ ಸಾಲಿಗೆ ಒಟ್ಟು ರೂ 5137.283ಲಕ್ಷ ಮಂಜೂರಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಸರ್ವ ಶಿಕ್ಷಣ ಯೋಜನೆಯ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಸುಮಾರು 70ಕ್ಕೂ ಅಧಿಕ ಕಾರ್ಯ ಕ್ರಮ ಗಳು ಅನು ಷ್ಠಾನ ಗೊಳ್ಳುತ್ತಿವೆ.ಶಾಲಾ ಕೊಠಡಿ ನಿರ್ಮಾಣ ದಿಂದ ತೊಡಗಿ ಶೈಕ್ಷಣಿಕ ಗುಣ ಮಟ್ಟವನ್ನು ಅಭಿ ವೃದ್ಧಿ ಪಡಿ ಸುವುದು ಸೇರಿ ದಂತೆ ಹತ್ತು ಹಲವು ಕಾರ್ಯ ಕ್ರಮ ಗಳನ್ನು ಹಮ್ಮಿ ಕೊಳ್ಳ ಲಾಗುತ್ತಿದೆ ಎಂದರು.ಜಿಲ್ಲೆ ಯಲ್ಲಿ ಈಗಾಗಲೇ 262 ಶಾಲೆ ಗಳನ್ನು ಮೇಲ್ದರ್ಜೆಗೆ ಏರಿಸ ಲಾಗಿದೆ.2012-13ನೇ ಸಾಲಿನಲ್ಲಿ 42 ಹಿರಿಯ ಪ್ರಾಥ ಮಿಕ ಶಾಲೆ ಗಳಲ್ಲಿ 8 ನೇ ತರಗತಿ ಆರಂಭಿಸಲು ಅನುಮೋದನೆ ದೊರೆತ್ತಿದ್ದು,ಮುಂದಿನ ಹಂತದಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ 8ನೇ ತರಗತಿ ಆರಂಭಗೊಳ್ಳಲಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ವಿಶೇಷ ಮಕ್ಕಳ ದತ್ತು ಸ್ವೀಕಾರ ಯೋಜನೆ:-ಜಿಲ್ಲೆಯಲ್ಲಿ 6-14 ವಯೋಮಾನದ 602 ಮಕ್ಕಳನ್ನು ಜಿಲ್ಲೆಯ ವಿವಿಧ ಸಹಕಾರಿ ಸಂಘಗಳು ದತ್ತು ಸ್ವೀಕರಿಸಿ,ಅವರ ಶಿಕ್ಷಣ ಮುಂದುವರಿಕೆಗೆ ಪೂರಕವಾಗುವಂತೆ ವಿವಿಧರೀತಿಯ ಸಹಕಾರ ನೀಡಲು ಮುಂದೆ ಬಂದಿರುವುದುರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿದೆಎಂದು ಶೈಲಜ ಭಟ್ ತಿಳಿಸಿದರು.ಜಿಲ್ಲೆಯ 35 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ನೆ ತರಗತಿಯಿಂದಆಂಗ್ಲ ಮಾಧ್ಯಮವನ್ನು ಪ್ರಾಯೋಗಿಕವಾಗಿ ಈ ವರ್ಷದಿಂದಲೆಆರಂಭಿಸಲಾಗುವುದು.ಜಿಲ್ಲೆಯಲ್ಲಿ 10ಮಕ್ಕಳಿಗಿಂತ ಕಡಿಮೆಇರುವ 17 ಶಾಲೆಗಳಿವೆ ಆದರೆ ಈ ಶಾಲೆಗಳನ್ನು ಮುಚ್ಚುವ ತೀಮರ್ಾನವನ್ನು ಕೈ ಗೊಂಡಿಲ್ಲ.ಜಿಲ್ಲೆಯಲ್ಲಿಜನಸಂಖ್ಯೆಯ ಪ್ರಮಾಣ ಕುಸಿದಿರುವುದರಿಂದ ಮಕ್ಕಳ ದಾಖಲಾತಿಯೂ ಕಡಿಮೆಯಾಗಿದೆ.2011ರಲ್ಲಿ ವಾಷರ್ಿಕ 314220 ಆಗಿತ್ತು.2011-12 ಸಾಲಿನಲ್ಲಿದಾಖಲಾತಿ 273555ಕ್ಕೆ ಇಳಿಕೆಯಾಗಿದೆ.ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಳೆದ ಹತ್ತು ವರ್ಷದ ಹಿಂದೆಜಿಲ್ಲೆಯಲ್ಲಿ 7864 ಇತ್ತು.ಈ ಪ್ರಮಾಣ2012-13ರಲ್ಲಿ 137 ಕ್ಕೆ ಇಳಿಕೆಯಾಗುವ ಮೂಲಕ ಉತ್ತಮ ಸಾಧನೆಯಾಗಿದೆ.ಬೆಳ್ತಂಗಡಿಯ ಲಾಲದಲ್ಲಿ ರೂ.1.23ಲಕ್ಷ ವೆಚ್ಚದಲ್ಲಿ ಉತ್ಫಾದಿಸಿರುವ ಸೇಪ್ಟಿ ನ್ಯಾಪ್ಕಿನ್ ಘಟಕದ ಮೂಲಕ ಜಿಲ್ಲೆಯ 10,250 ಶಾಲಾ ಮಕ್ಕಳಿಗೆ ನ್ಯಾಫ್ಕಿನ್ ಒದಗಿಸುವ ಯೋಜನೆರಾಜ್ಯದಲ್ಲೆ ಪ್ರಥಮ ಪ್ರಯತ್ನವಾಗಿದೆ.ಜಿಲ್ಲೆಯಲ್ಲಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕಗುಣ ಮಟ್ಟದ ವರ್ಧನೆಗಾಗಿ ಹಾಗು ಶೈಕ್ಷಣಿಕ ವಾತವರಣ ನಿಮರ್ಾಣಕ್ಕಾಗಿ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಶೈಲಜ ತಿಳಿಸಿದರು.
ನಕ್ಸಲ್ ಬಾಧಿತ ಪ್ರದೇಶಗಳ ಶಾಲೆಗಳಿಗೆ ವಿಶೇಷ ಕಾರ್ಯಕ್ರಮ:ಸರ್ವ ಶಿಕ್ಷಣ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕಿನ ನಕ್ಸಲ್ ಬಾಧಿತ ಪ್ರದೇಶಗಳ 24 ಶಾಲಾ ವ್ಯಾಪ್ತಿಗೆ ಸಂಬಂಧಿಸಿಸದಂತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಒಂದು ವಸತಿ ಶಾಲೆಯನ್ನು ಈ ಪ್ರದೇಶದಲ್ಲಿ ಆರಂಭಿಸಲಾಗುವುದು.ಇಲ್ಲಿನ ಸುಮಾರು 2496 ಮಕ್ಕಳಿಗೆ ಬ್ಯಾಗ್,ಚಪ್ಪಲ್,ಛತ್ರಿ,ಕಲಿಕಾ ಸಾಮಾಗ್ರಿ ಸೇರಿದಂತೆಇತರ ಕೆಲವು ಅವಷ್ಯಕ ಸಾಮಾಗ್ರಿಗಳನ್ನು ನೀಡಲು ತೀರ್ಮಾನಿಸಲಾಗಿದೆ.ಇದಕ್ಕಾಗಿರೂ 25 ಲಕ್ಷ ಅನುದಾನ ನಿಗದಿ ಪಡಿಸಲಾಗಿದೆ.ವಸತಿಗೆ ಶಾಲೆಯ ಕಟ್ಟಡ ನಿರ್ಮಾಣಕ್ಕೆ 154.53 ಲಕ್ಷ ಬಿಡುಗಡೆಯಾಗಿದ್ದು,ರಾಜ್ಯ ಕಚೇರಿಯ ಮೂಲಕ ಕಟ್ಟಡ ನಿರ್ಮಾಣವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ನ ಉಪಾಧ್ಯಕ್ಷರಾದ ಧನಲಕ್ಷ್ಮಿಜನಾರ್ದನ್,ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್,ಉಪ ಕಾರ್ಯದರ್ಶಿ ಶಿವ ರಾಮೇಗೌಡ,ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್,ಮುಖ್ಯಯೋಜನಾಧಿಕಾರಿ ಮುಹಮ್ಮದ್ ನಝೀರ್,ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಫಿಲೋಮಿನಾ ಲೋಬೊ,ಸರ್ವ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಮೋಸೆಸ್ ಜಯಶಂಕರ್,ಉಪ ಸಮನ್ವಯಾಧಿಕಾರಿ ಎನ್.ಶಿವ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.