ಅಕ್ಟೋಬರ್ ಒಂದ ರಿಂದ ವಾರ್ತಾ ಇಲಾಖೆ ಮತ್ತು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿರುವ ಉಪ ವಿಭಾಗ ಆಯುಕ್ತರ ಕಚೇರಿ ಯಲ್ಲಿ ಈ ಸಂಬಂಧ ಸಾರ್ವ ಜನಿಕ ರಿಂದ ಅಹ ವಾಲು ಸ್ವೀಕ ರಿಸಲು ದೂರು ಕೋಶ ಸ್ಥಾಪಿ ಸಲಾ ಗುವುದು.ತಾಲೂಕು ಮಟ್ಟ ದಲ್ಲಿ ಎಲ್ಲಾ ತಾಲೂಕು ಕಚೇರಿ ಗಳಲ್ಲಿ ಸಾರ್ವ ಜನಿಕರಿಂದ ಈ ಸಂಬಂದದೂರು ಸ್ವೀಕಾರಕ್ಕೆ ಅನುಕೂಲ ವಾಗುವಂತೆ ದೂರು ಪಟ್ಟಿಗೆಗಳನ್ನು ಇರಿಸಲಾಗುವುದು.
ಆನ್ ಲೈನ್ ಮೂಲಕ ದೂರುಸ್ವೀಕರಿಸಲು ವ್ಯವಸ್ಥೆ ಮಾಡಲಾಗುವುದು.ದೂರುದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಇದೇ ವೇಳೆ ಅಧಿಕೃತ ಕೇಬಲ್ ಆಪರೇಟರ್ ಗಳಿಗೆ ಮಾಹಿತಿ ಸಲ್ಲಿಸಲು ಇನ್ನೊಂದು ವಾರ ಕಾಲ ಅವಕಾಶವನ್ನು ನೀಡಲಾಗಿದೆ.ಕೇಬಲ್ ಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಮಿತಿಯಲ್ಲಿರುವ ಪರಿಣತ ಸದಸ್ಯರಿಗೆ ಕಾರ್ಯಕ್ರಮದ ಕುರಿತು ಸಮೀಕ್ಷೆ ನಡೆಸಲು ಹಾಗೂ ಅಭಿಪ್ರಾಯ ಸಂಗ್ರಹಕ್ಕೂ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದರು.
ಸಮಿತಿ ಸಭೆಯಲ್ಲಿಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ವಾರ್ತಾಧಿಕಾರಿ ರೋಹಿಣಿ, ಸೈಂಟ್ ಅಲೋಷಿಯಸ್ ಕಾಲೇಜಿನ ಪ್ರೊ. ನರಹರಿ, ಬಲ್ಮಠ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ತಾರಾ, ಧರ್ಮಜ್ಯೋತಿ ಸಂಸ್ಥೆಯ ಸಿಸ್ಟರ್ ಡ್ಯಾಫ್ನಿ, ಮಂಗಳೂರು ವಿವಿ ಕಾಲೇಜಿನ ಎಸೋಸಿಯೇಟ್ ಪ್ರೊ. ಶ್ರೀಮತಿ ಮಹೇಂದ್ರ ಮಣಿರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಸಿ ಎನ್ ದಿವಾಕರ್, ಪೊಲೀಸ್ ಕಮಿಷನರೇಟ್ ನಿಂದ ಪೊಲೀಸ್ಇನ್ಸ್ ಪೆಕ್ ದೇವಪ್ಪ, ಸಹಾಯಕ ಆಯುಕ್ತರ ಕಚೇರಿಯಿಂದ ತಹಸೀಲ್ದಾರ್ ಬಾಬು ದೇವಡಿಗ ಪಾಲ್ಗೊಂಡಿದ್ದರು.