
ಆಶು ಚಿತ್ರಣ ಮತ್ತು ಆವೆ ಮಣ್ಣು ಮೂರ್ತಿ ಶಿಲ್ಪ ಶಿಬಿರಕ್ಕೆ ಮಂಗಳೂರು ಕದ್ರಿ ಪಾರ್ಕಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಛಾಯಾ ಚಿತ್ರಣಕ್ಕೆ ಪಿಲಿಕುಳ ನಿಸರ್ಗಧಾಮ,ಪಣಂಬೂರು ಕಡಲ ಕಿನಾರೆ ಮತ್ತು ಕದ್ರಿ ದೇವಸ್ಥಾನ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ಆಕ್ರಿಲಿಕ್ ಬಣ್ಣ ಮತ್ತು 24''* 30'' ಅಳತೆಯ ಕ್ಯಾನ್ವಾಸ್ ಒದಗಿಸಿಕೊಡಲಾಗುವುದು.ಆವೆಮಣ್ಣನ್ನು ಸ್ಥಳದಲ್ಲಿಯೇ ನೀಡಲಾಗುವುದು.ಛಾಯಾಚಿತ್ರಕ್ಕೆ ಆಯಾ ಕಲಾವಿದರೇ ಉಪಕರಣಗಳನ್ನು ಒದಗಿಸಿಕೊಳ್ಳತಕ್ಕದ್ದು.ಇದಲ್ಲದೆ ಪಣಂಬೂರು ಬೀಚ್ ಪರಿಸರದಲ್ಲಿ ಮರಳು ಶಿಲ್ಪ ರಚಿಸುವ ಅವಕಾಶವೂ ಇದೆ.
ಈ ಶಿಬಿರದಲ್ಲಿ ಸ್ಥಳೀಯ ವಿಕಲಚೇತನರ ಕಲಾವಿದರನ್ನೊಳಗೊಂಡಂತೆ ಅಭ್ಯರ್ಥಿಗಳು ಜನವರಿ 7 ರ ಸಂಜೆ 5.30ರೊಳಗೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದೆಂದು ಯುವ ಕಲಾವಿದರ ಉಪ ಸಮಿತಿ ಅಧ್ಯಕ್ಷರಾದ ಡಾ.ವಾಮನ ನಂದಾವರ ತಿಳಿಸಿರುತ್ತಾರೆ.ಕೇವಲ 15 ಕಲಾವಿದರಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಬಂದವರಿಗೆ ಅವಕಾಶವಿದೆ.