ಮಂಗಳೂರು,ಡಿಸೆಂಬರ್.10:ಮಂಗಳೂರು ನಗರದ ಲಾಲ್ ಭಾಗ್ ಹಿಂದಿ ಪ್ರಚಾರ ಸಭಾಂಗನದಲ್ಲಿ ಡಿ.24ರವರೆಗೆ ಜರುಗಲಿರುವ `ವಸ್ತ್ರ ಸಾಗರ-2011' ಕೈಮಗ್ಗದ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಸಭೆಯ ಉಪ ಸಭಾಪತಿ ಎನ್.ಯೋಗೀಶ್ ಭಟ್ ಅವರು ಸಾವಿರಾರು ಕುಟುಂಬಗಳಿಗೆ ಅನ್ನ ನೀಡುವ ಬೀಡಿ ಉದ್ಯಮ ಜಿಲ್ಲೆಯಲ್ಲಿ ಸಂಕಷ್ಟದಲ್ಲಿದೆ.
ಅದಕ್ಕೆ ಪರ್ಯಾ ಯವಾಗಿ ಮಹಿಳೆ ಯರಿಗೆ ಉದ್ಯೋಗ ಒದಗಿ ಸಲು ಕೈ ಮಗ್ಗ ಗಳಲ್ಲಿ ಬಟ್ಟೆ ನೇಯುವ ಬಗ್ಗೆ ತರ ಬೇತಿ ನೀಡು ತ್ತಿರುವುದು ಸಕಾ ಲಿಕ ವಾಗಿದೆ. ಇದ ರಿಂದ ಮಹಿಳೆ ಯರು ಆರ್ಥಿಕ ಸ್ವಾ ವಲಂಬನೆ ಸಾಧಿಸ ಬಹು ದಾಗಿದೆ ಎಂದರು. ಸಮಾ ರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಮಾತ ನಾಡಿದ ಶಾಸಕ ಯು.ಟಿ.ಖಾದರ್ ಮಹಿಳೆ ಯರು ಕೈ ಮಗ್ಗ ದಲ್ಲಿ ಬಟ್ಟೆ ನೇಯು ತ್ತಿರುವುದು ಈಗ ಆರಂಬಿಕ ಹೆಜ್ಜೆ ಯಾಗಿದೆ.ಭವಿಷ್ಯ ದಲ್ಲಿ ಕೈ ಮಗ್ಗದಲ್ಲಿ ಪಳಗಿದಂತೆ ಹೆಚ್ಚು ಉತ್ಪಾದನೆ ಸಾಧ್ಯ ವಾಗಲಿದೆ ಎಂದರು.ಇದೇ ಸಂದರ್ಭ ದಲ್ಲಿ ಫಲಾ ನುಭವಿಗಳಿಗೆ ವಿವಿಧ ಸವಲತ್ತುಗಳ ಸಹಾಯಧನ ಚೆಕ್ ಗಳನ್ನು ವಿತರಿಸಲಾಯಿತು. 25 ಫಲಾನುಭವಿಗಳಿಗೆ ರೂ.65,000 ಘಟಕ ವೆಚ್ಚದ ವಸತಿ ಸಹಾಯ ಧನ, 15 ಮಂದಿಗೆ ಕೈಮಗ್ಗದ ಮನೆ ನಿರ್ಮಾಣಕ್ಕೆ ತಲಾ ರೂ.25,000 ಸಹಾಯ ಧನ ಮತ್ತು ಸಿದ್ಧ ಉಡುಪು ತರಬೇತಿ ಪಡೆದ 20 ಮಂದಿಗೆ ತಲಾ ರೂ.2,000ದಂತೆ ಸಹಾಯಧನ ವಿತರಿಸಲಾಯಿತು.ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ವಸಂತಿ ಕೈಮಗ್ಗ ತರಬೇತಿಯ ಅನುಭವವನ್ನು ಹಂಚಿಕೊಂಡರು. ಕೈಮಗ್ಗದಿಂದ ಬಟ್ಟೆ ನೇಯ್ದು ಮಾರಾಟ ಮಾಡಿದ ಕೊರಗ ಸಮುದಾಯದ ಪ್ರಥಮ ಯುವತಿ ಬಾಳೆಪುಣಿಯ ಸುರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಆರ್.ಯೋಗೀಶ್ ಅಥಿತಿಗಳನ್ನು ಸ್ವಾಗತಿಸಿದರು.