


ನಂತರ ಅವರು ರಾಷ್ಟ್ರೀ ಯ ಯುವ ಜನೋ ತ್ಸವ ಮುಖ್ಯ ಕಾರ್ಯ ಕ್ರಮ ಜರು ಗುವ ಮಂಗಳಾ ಕ್ರೀಡಾಂ ಗಣಕ್ಕೆ ತೆರಳಿ ಅಲ್ಲಿ ನಡೆ ದಿರುವ ತಯಾರಿ ಗಳ ಬಗ್ಗೆ ಪರಿ ಶೀಲನೆ ನಡೆಸಿ ದರು. ಇಡೀ ಮಂಗಳಾ ಕ್ರೀ ಡಾಂಗ ಣಕ್ಕೆ ಧೂಳು ಏಳದಂತೆ ಕಾರ್ಪೆಟ್ ಹೊದಿಸಲು, ಕ್ರೀಡಾಂಗಣ ಸುತ್ತ ಅಲಂಕಾರ ಮಾಡಲು ಹೆಚ್ಚುವರಿ ಕಾರ್ಯದರ್ಶಿಯವರು ಸೂಚಿಸಿದರು.ಜನಪದ ನೃತ್ಯ, ಸಾಂಪ್ರದಾಯಿಕ ನೃತ್ಯಗಳು ನಡೆಯುವ ಟಿ.ಎಂ.ಎ ಪೈ ಕನ್ವ್ಷೆಷನ್ ಹಾಲ್ ಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸುವ ಸಾವಿರಾರು ಪ್ರತಿನಿಧಿಗಳಿಗೆ ವಾಸ್ತವ್ಯ ಹೂಡಲು ಮಾಡಿರುವ ವ್ಯವಸ್ಥೆಗಳನ್ನು ಹಾಗೂ ಸುರತ್ಕಲ್ ನಲ್ಲಿರುವ ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ಅಲ್ಲಿಯ ವಿದ್ಯಾರ್ಥಿ ನಿಲಯ ಗಳಿಗೆ ಭೇಟಿ ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವ ಪುರಭವನಕ್ಕೂ ಸಹ ಭೇಟಿ ಇತ್ತು ಸ್ಥಳ ಪರಿಶೀಲಿಸಿ ಇಲ್ಲಿಯವರೆಗೂ ಆಗಿರುವ ತಯಾರಿಗಳ ಬಗ್ಗೆ ತಮ್ಮ ಮೆಚ್ಚುಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್,ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವಾ,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಬಾಲಕೃಷ್ಣ ಸೇರಿದಂತೆ ಯುವಜನೋತ್ಸವದಲ್ಲಿ ವಿವಿಧ ಸಮಿತಿಗಳ ನೇತೃತ್ವ ವಹಿಸಿರುವ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.