
ಅವ ರಿಂದು ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಜಿಲ್ಲಾ ಪಂಚಾ ಯತ್, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ, ವಿಕಲ ಚೇತ ನರ ಹಾಗೂ ಹಿರಿಯ ನಾಗ ರೀಕರ ಸಬ ಲೀಕ ರಣ ಇಲಾಖೆ, ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿ ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವ ಶಿಕ್ಷಣ ಅಭಿಯಾನ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ವಿಕಲಚೇತನರ ದಿನಾಚರಣೆ-2011 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಗಳಾ ಗಿದ್ದ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು ಮಾತ ನಾಡಿ, ದಿನಾ ಚರಣೆ ಯಂದು ಖುದ್ದಾಗಿ ಅಂಗ ವಿಕ ಲರ ಹಲವು ಸಮಸ್ಯೆ ಗಳನ್ನು ಅರಿತು ಕೊಂಡಿದ್ದು, ಸಮಸ್ಯೆಗಳ ನಿವಾರಣೆಗೆ ಆಡಳಿತಾತ್ಮಕವಾಗಿ ಎಲ್ಲ ನೆರವು ನೀಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐದು ಗಾಲಿ ಕುರ್ಚಿಗಳ ವಿತರಣೆ, ಗ್ರೀಸ್ ನ ಅಥೆನ್ಸ್ ನಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ರಾಯಿಸ್ಟನ್, ಅನಿಲ್ ಮೆಂಡೊನ್ಸ್, ಧನ್ಯ ಎಸ್ ರಾವ್ ಅವರಿಗೆ ಸನ್ಮಾನ ನಡೆಯಿತು.
ವಿಕಲಚೇತನರಿಗೆ ಚೈತನ್ಯ ತುಂಬುತ್ತಿರುವ ವಸಂತ ಕುಮಾರ್ ಶೆಟ್ಟಿ ಹಾಗೂ ಡಾ ಅರುಣ್ ರಾವ್ ಅವರನ್ನು ಸನ್ಮಾನಿಸಲಾಯಿತು.
ಈಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಪ್ರಾಸ್ತಾವಿಕ ಮಾತುಗಳಲ್ಲಿ ವಿಕಲಚೇತನರಿಗೆ ಇಲಾಖೆ ನೀಡಿದ ಸೌಲಭ್ಯಗಳು ಹಾಗೂ ನೀಡಬೇಕಿರುವ ಅಗತ್ಯಗಳ ಬಗ್ಗೆ ಸಭೆಯ ಗಮನ ಸೆಳೆದರು.
ಸಭೆಯನ್ನುದ್ದೇಶಿಸಿ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಅವರು ಮಾತನಾಡಿದರು. ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಜಿ ಕೆ ಭಟ್, ಅಧ್ಯಕ್ಷರು ದ. ಕ ಹಾಗೂ ಉಡುಪಿ ಜಿಲ್ಲಾ ಅಂಗವಿಕಲರ ಸಂಘದ ಡಾ ಮುರಳೀಧರ್ ನಾಯಕ್, ಅಧ್ಯಕ್ಷರು ದ ಕ ಜಿಲ್ಲಾ ಅಂಗವಿಕಲರ ಫೆಡರೇಶನ್ನ ದಿನೇಶ್ ಶೆಟ್ಟಿ, ಬಿ ಜಿ ಎಜುಕೇಷನಲ್ &ಚಾರಿಟೇಬಲ್ ಟ್ರಸ್ಟ್ ನ ಬಿ ಜಿ ಗಣೇಶ್, ಪಾವೂರು ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಶ್ರೀಮತಿ ಆಶಾ ನಾಯಕ್ ಕಾರ್ಯಕ್ರಮದಲ್ಲಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಶಕುಂತಲಾ ಎ ಅವರು ಸ್ವಾಗತಿಸಿದರು.