ಮಂಗಳೂರು,ಡಿಸೆಂಬರ್.05 : ರೈತರ ಜೀವನಾಧಾರವಾಗಿರುವ ರಾಸುಗಳು ಆಕಸ್ಮಿಕ ಮರಣ ಹೊಂದಿದ್ಲಲ್ಲಿ ರೈತರಿಗೆ ವಿಮಾ ಕಂಪೆನಿಗಳು ಅದರ ಮೌಲ್ಯವನ್ನು ಭರಿಸಲು ಮಿಶ್ರತಳಿ ಹಾಗೂ ಹೆಚ್ಚು ಹಾಲು ಕೊಡುವ ಹಸು ಮತ್ತು ಎಮ್ಮೆಗಳನ್ನು ವಿಮೆಗೆ ಒಳಪಡಿಸಲಾಗುವುದು ಎಂದು ಪಶುಪಾಲನಾ ಉಪನಿರ್ದೇಶಕರಾದ ಡಾ ಹಲಗಪ್ಪ ಅವರು ತಿಳಿಸಿದ್ದಾರೆ.
1.4.11ರಿಂದ ಅನ್ವಯವಾಗುವಂತೆ ಒಂದು ವರ್ಷಕ್ಕೆ ಶೇ 5.5 ರಷ್ಟು ಮತ್ತು 3 ವರ್ಷಗಳ ಅವಧಿಗೆ ರಾಸುಗಳನ್ನು ವಿಮೆಗೆ ಒಳಪಡಿಸಲಾಗುವುದು. ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಶೇ. 50 ರಷ್ಟು ಹಣವನ್ನು ರೈತರೇ ಭರಿಸಬೇಕಿದೆ. ಸೇವಾ ತೆರಿಗೆಗೆ ಸಹಾಯಧನ ಲಭ್ಯವಿಲ್ಲದೆ ಇರುವುದರಿಂದ ಶೇ. 10.30 ರಷ್ಟು ಸೇವಾ ತೆರಿಗೆಯನ್ನು ರೈತರೇ ಭರಿಸಬೇಕಾಗಿದೆ.
ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗಿದ್ದು, 11ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ 2,20,000 ರಾಸುಗಳನ್ನು ವಿಮೆಗೆ ಒಳಪಡಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10,000 ರಾಸುಗಳ ಭೌತಿಕ ಗುರಿಯಿದ್ದು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಕುಲಶೇಖರ ಮಂಗಳೂರು ಹಾಗೂ ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ಮಂಗಳೂರು ಇವರ ಸಹಯೋಗದೊಂದಿಗೆ ಪಶುಪಾಲನ ಇಲಾಖೆಯಿಂದ ನವೆಂಬರ್ 2011 ರವರೆಗೆ ಒಟ್ಟು 5391 ರಾಸುಗಳನ್ನು ವಿಮೆಗೆ ಒಳಪಡಿಸಲಾಗಿದೆ.
ಈ ಯೋಜನೆಯ ಅವಧಿ ಮಾರ್ಚ್ 2012 ರವೆಗೆ ವಿಸ್ತರಿಸಿದ್ದು ಈ ಕುರಿತು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಪಶುವೈದ್ಯಕೀಯ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ಸದ್ರಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿಗದಿತ ವೇಳಾಪಟ್ಟಿಯಂತೆ ಮನೆಮನೆಗೆ ಭೇಟಿ ನೀಡಲಿದ್ದು, ಜಾನುವಾರು ಮಾಲೀಕರು ಸಹಕರಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824 2492337, ಸ್ಥಳೀಯ ಪಶುವೈದ್ಯರು, ಪಶುವೈದ್ಯಕೀಯ ಆಸ್ಪತ್ರೆ, ಪಶುಚಿಕಿತ್ಸಾಲಯಗಳು, ದ.ಕ ಸಹಕಾರಿ ಹಾಲು ಉತ್ಪಾದಕರು ಒಕ್ಕೂಟ, ನಿ., ಕುಲಶೇಖರ ಮಂಗಳೂರು ದೂ. ಸಂ. 0824 2230042, ಡಾ ಕೆ ಎಸ್ ಎನ್ ಮೂರ್ತಿ ಹಿರಿಯ ವಿಭಾಗೀಯ ಪ್ರಬಂಧಕರು, ನ್ಯಾಷನಲ್ ಇನ್ಷೂರೆನ್ಸ್ ಕಂ. ಲಿ. ಮಂಗಳೂರು ದೂ. ಸಂ, 0824 2440674.