
ಆಹಾರದ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ ತೆಗೆದುಕೊಂಡಿರುವ ಮುಂಜಾಗ್ರತೆ ಕುರಿತಂತೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಆಹಾರ ವಿತರಣೆಯಲ್ಲಿ ಗೊಂದಲವಾಗದಂತೆ ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಯಾವುದೇ ರೀತಿಯ ಮುಜುಗರಕ್ಕೆ ಒಳಗಾಗದಂತೆ ಎಚ್ಚರಿಕೆಯಿಂದ ಅತಿಥಿ ಸತ್ಕಾರವನ್ನು ಮಾಡಲು ಮತ್ತು ಆಹಾರ ವಿತರಣಾ ಸ್ಥಳಗಳಲ್ಲಿ ಕಡ್ಡಾಯವಾಗಿ ಸ್ವಚ್ಚತೆಯನ್ನು ಕಾಪಾಡಬೇಕೆಂದು ಸೂಚಿಸಿದರು.
ಯಾರಾದರೂ ಅನಾರೋಗ್ಯ ಪೀಡಿತರಾದಲ್ಲಿ ಅಂತಹವರಿಗೆ ತಕ್ಷಣ ಶ್ರುಶ್ರೂಷೆ ನೀಡಲು ಮೂರು ಅಂಬುಲೆನ್ಸ್ ಮತ್ತು 2 ಸಂಚಾರಿ ಕ್ಲಿನಿಕ್ ಗಳನ್ನು ದಿನದ 24 ಗಂಟೆಗಳು ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ,ತುರ್ತು ಔಷಧಿಗಳನ್ನು ಸಂಗ್ರಹಿಸುವಂತೆ ತಿಳಿಸಿದರು.
ಉದ್ಘಾಟನಾ ಸಮಾರಂಭದಂದು ವೇದಿಕೆ ಮೇಲೆ ಅತೀ ಗಣ್ಯರ ಹೊರತು ಅಗತ್ಯಕ್ಕಿಂತ ಹೆಚ್ಚಿನ ಜನರು ವೇದಿಕೆಯಲ್ಲಿ ಅನಾವಶ್ಯಕವಾಗಿ ಓಡಾಡದಂತೆ ಸ್ವಾಗತ ಸಮಿತಿಯವರು ಮುಂಜಾಗ್ರತೆ ವಹಿಸಲು ಹಾಗೂ ಅತಿಥಿ ಗಣ್ಯರಿಗೆ ಸನ್ಮಾನಿತರಿಗೆ ಗೌರವ ಪೂರ್ವಕವಾಗಿ ನೀಡಲಾಗುವ ಹೂಗುಚ್ಛಗಳಿಗೆ ಪ್ಲಾಸ್ಟಿಕ್ ಹೊದಿಕೆ ಇಲ್ಲದಂತೆ ನೀಡಲು ಜಾಗ್ರತೆ ವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಲಯ್ಯ,ಮಹಾನಗರಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಉಪವಿಭಾಗಾಧಿಕಾರಿ ಡಾ.ವೆಂಕಟೇಶ್ ,ಅಪರ ಜಿಲ್ಲಾಧಿಕಾರಿ ದಯಾನಂದ .ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯ್ಕ ಮುಂತಾದವರು ಹಾಜರಿದ್ದರು.