ಮಂಗಳೂರು,ಡಿಸೆಂಬರ್.17: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 203 ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮೀಣ ಘನತ್ಯಾಜ್ಯ ನಿರ್ವಹಣೆ ಜನಜಾಗೃತಿ ಅಭಿಯಾನವನ್ನು ಮುಂದುವರೆಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್. ವಿಜಯ ಪ್ರಕಾಶ್ ತಿಳಿಸಿದ್ದಾರೆ.ಅವರು ಇಂದು ಜಿಲ್ಲಾ ಪಂಚಾ ಯತ್, ತಾಲ್ಲೂಕು ಪಂಚಾ ಯತ್ ಮಂಗ ಳೂರು, ಕಂದಾ ವರ,ಗುರು ಪುರ,ಗಂಜಿ ಮಠ, ಪಡು ಪೆರಾರ್ ಮೂಡು ಶೆಡ್ಡೆ ಮತ್ತು ಬಜ್ಪೆ ಗ್ರಾಮ ಪಂಚಾ ಯತ್ ಗಳು ಹಾಗೂ ಸೈಂಟ್ ಆಗ್ನೇಸ್ ಕಾಲೆಜು ಇವರ ಸಹ ಯೋಗ ದೊಂದಿಗೆ ಗುರುಪುರ ಕೈಕಂಬದಲ್ಲಿ ಗ್ರಾಮೀಣ ಘನತ್ಯಾಜ್ಯ ನಿರ್ವಹಣೆ ಜನಜಾಗೃತಿ ಅಭಿಯಾನ- 2011-12 ನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಚ್ಚ್ಚತ ಪುರಸ್ಕಾರ ಪಡೆದ ರಾಜ್ಯದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಸ್ವಚ್ಚತಾ ಆಂದೋಲನ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ 5 ಗ್ರಾಮ ಪಂಚಾಯತ್ ಗಳಲ್ಲಿ ಎರೆ ಗೊಬ್ಬರ ತಯಾರಿಕೆಗೆ ತೊಡಗಿದ್ದು ಲೈಲಾ ಗ್ರಾಮ ಪಂಚಾಯತ್ ಎರೆಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದೆ,ಮಲೆನಾಡು ಅಭಿವೃದ್ಧಿ ಮಂಡಲಿಯ ಸಹಯೋಗದೊಂದಿಗೆ ಉಜಿರೆ ಗ್ರಾಮ ಪಂಚಾಯತ್ ನಲ್ಲಿ ರೂ.70 ಲಕ್ಷದಲ್ಲಿ ದ್ರವತ್ಯಾಜ್ಯ ವಿಲೆವಾರಿ ಘಟಕ ಸ್ಥಾಪಿಸಲು ಶಂಖುಸ್ಥಾಪನೆ ಆಗಬೇಕಿದೆ, ಕಡಬ ಗ್ರಾಮ ಪಂಚಾಯತ್ನಲ್ಲಿ ಈಗಾಗಲೆ ಘಟಕವನ್ನು ರೂ.24ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಗಳಿಗೆ ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ 25 ಮಾರ್ಗ ಸೂಚಿಗಳನ್ನು ನೀಡ ಲಾಗಿದ್ದು ಅದರಂತೆ ಅವು ಕಾರ್ಯಾ ಚರಿಸುತ್ತಿವೆ ಎಂದು ತಿಳಿಸಿದರು. ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾಗಿದ್ದ ಅವಧಿಯಲ್ಲಿ ನಗರ ಸ್ವಚ್ಚತೆ ಅಭಿಯಾನಕ್ಕೆ ಸೈಂಟ್ ಆಗ್ನೇಸ್ ಕಾಲೆಜು ನೀಡಿದ ಸಹಕಾರವನ್ನು ನೆನೆದ ವಿಜಯ್ ಪ್ರಕಾಶ್ ಈಗಲೂ ಕಾಲೇಜು ಗ್ರಾಮಿಣ ಪ್ರದೇಶಗಳಲ್ಲೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಷಿಷ್ಟವಾದ ಹೆಜ್ಜೆಯನ್ನು ಇಟ್ಟಿರುವುದು ಪ್ರಶಂಸಾರ್ಹವಾದುದೆಂದರು.
ಜಿಲ್ಲಾ ಪಂಚಾತ್ ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ, ಸದಸ್ಯರಾದ ಶ್ರೀಮತಿ ಯಶ್ವಂತಿ ಆಳ್ವ, ಸೈಂಟ್ ಆಗ್ನೇಸ್ ಕಾಲೇಜಿನ ಉಪ ಪ್ರಾಂಶುಪಾಲರಾದ ಸಿಸ್ಟರ್ ಸುಪ್ರಿಯ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿಯ ಸದಸ್ಯರಾದ ರಿತೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷಮಿ , ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಉಪಾಧ್ಯಕ್ಷರುಗಳು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿಯ ಮುಖ್ಯಯೋಜನಾಧಿಕಾರಿ ಎಮ್. ಮೊಹ್ಮದ್ ನಜಿರ್ ಸ್ವಾಗತಿಸಿದರೆ ತಾಲ್ಲುಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ವಂದಿಸಿದರು. ಶ್ರೀಮತಿ ಮಂಜುಳ ಕಾರ್ಯಕ್ರಮ ನಿರ್ವಹಿಸಿದರು.ಸೈಂಟ್ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿಯರಿದ ಕಸ ವಿಲೆವಾರಿ ಕುರಿತ ರೂಪಕವನ್ನು ಪ್ರಸ್ತುತಪಡಿಸಲಾಯಿತು.