ಮಂಗಳೂರು,ಡಿಸೆಂಬರ್.23: ಕಂದಾಯ ಇಲಾಖೆಯ ಕುರಿತಾದ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ವಿಶೇಷ ಸಭೆಯನ್ನು ಕರೆಯಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಿರ್ಧರಿಸಿದೆ.ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಎಲ್ಲಾ ಅಧಿಕಾರಿಗಳನ್ನು ಈ ವಿಶೇಷ ಸಭೆಗೆ ಕರೆಯಲು ಜಿ.ಪಂ ಅಧ್ಯಕ್ಷರಾದ ಶೈಲಜಾ ಕೆ.ಟಿ.ಭಟ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ರುದ್ರ ಭೂಮಿಗೆ ಜಮೀ ನಿನ ಅವಶ್ಯ ಕತೆ ಇದೆ.ಕೆಲವು ಕಡೆ ರುದ್ರ ಭೂಮಿಗೆ ಮೂಲ ಭೂತ ಸೌಕರ್ಯ ಗಳ ಕೊರತೆ ಇದೆ.ವಸತಿ ಯೋಜನೆ ಗಳ ಅನು ಷ್ಠಾನಕ್ಕೆ, ಸರ ಕಾರಿ ಸೌಲಭ್ಯ ಗಳನ್ನು ವಿಸ್ತ ರಿಸಲು ಜಮೀ ನಿನ ಅವಶ್ಯ ಕತೆ ಇದೆ. ಸರ ಕಾರಿ ಜಮೀ ನಿನಲ್ಲಿ ಗುಡಿ ಸಲು ಹಾಕಿ ವಾಸಿ ಸುತ್ತಿ ರುವ ಬಡವರಿಗೆ ಹಕ್ಕುಪತ್ರಗಳನ್ನು ನೀಡಬೇಕಾಗಿದೆ ಎಂದು ಜಿ.ಪಂ.ಸದಸ್ಯರು ಸಭೆಯ ಗಮನ ಸೆಳೆದರು. ಈ ಸಂದರ್ಭದಲ್ಲಿ ಈ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಜಿಲ್ಲಾದಿಕಾರಿಗಳು ಒಳಗೊಂಡಂತೆ ವಿಶೇಷ ಸಭೆ ಕರೆಯಬೇಕೆಂದು ಅನೇಕ ಸದಸ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು, ಮುಂದಿನ 10 ದಿನಗಳ ಒಳಗಾಗಿ ವಿಶೇಷ ಸಭೆ ಕರೆಯಲಾಗುವುದು ಮತ್ತು ತಾಲೂಕು ತಹಶೀಲ್ದಾರರು, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರನ್ನು ಸಭೆಗೆ ಆಹ್ವಾನಿಸಲಾಗುವುದು ಎಂದರು.ಜಿಲ್ಲೆಯ ಗ್ರಾಮಾಂ ತರ ಭಾಗ ಗಳ ರಸ್ತೆ ಗಳು ತೀರಾ ಹದ ಗೆಟ್ಟಿ ರುವ ಕುರಿತು ಮತ್ತು ಕುಡಿ ಯುವ ನೀರಿನ ಸಮ ರ್ಪಕ ಸರ ಬರಾ ಜಿನಲ್ಲಿ ಆಗು ತ್ತಿರುವ ತೊಂದ ರೆಗಳ ಬಗ್ಗೆ ಸದ ಸ್ಯರು ಸಭೆಯ ಗಮ ನಕ್ಕೆ ತಂ ದರು. ಇದಕ್ಕೆ ಉತ್ತ ರಿಸಿದ ಕಾರ್ಯ ನಿರ್ವಾ ಹಕ ಇಂಜಿ ನಿಯರ್ ಈಗಾ ಗಲೇ ರಸ್ತೆ ಗಳ ದುರಸ್ತಿ ಕಾರ್ಯ ನಡೆ ದಿದೆ. ಮುಖ್ಯ ಮಂತ್ರಿ ಗಳು ಕಿ.ಮೀ.ಗೆ 50 ಸಾವಿರ ದಂತೆ ರಸ್ತೆ ದುರಸ್ತಿ ಗೆಂದು ಅನುದಾನ ನೀಡಲು ಸಮ್ಮತಿಸಿದ್ದಾರೆ. ಜಿ.ಪಂ.ನ 2650 ಕಿ.ಮೀ. ಉದ್ದದ ರಸ್ತೆಗಳಿಗೆ ರೂ. 13.14 ಕೋಟಿಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 62 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು.ಸಿಇಒ ಡಾ. ವಿಜಯಪ್ರಕಾಶ್ ಮಾತನಾಡಿ,ಗ್ರಾಮೀಣ ರಸ್ತೆಗಳ ದುರಸ್ತಿಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅಗತ್ಯವಿರುವ ಅನುದಾನವನ್ನು ಮುಖ್ಯಮಂತ್ರಿಗಳ ವಾಗ್ದಾನದಂತೆ ಒದಗಿಸಲಾಗುವುದು. ಶೀಘ್ರ ಕಾಮಗಾರಿಗಳನ್ನು ಮುಗಿಸಬೇಕು,ತಪ್ಪಿದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದರು.
ಅನೇಕ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ.ಅನುಭವಿ ಶಿಕ್ಷಕರಿಲ್ಲ. ಸರಕಾರಿ ಶಾಲೆಗಳಿಗೆ ಇನ್ನಷ್ಟು ಕಾಯಕಲ್ಪದ ಮತ್ತು ಸೌಲಭ್ಯದ ಅವಶ್ಯಕತೆ ಇದೆ ಎಂದು ಕೆಲವು ಸದಸ್ಯರು ಆಗ್ರಹಿಸಿದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ, ಶಾಸಕ ಯು.ಟಿ. ಖಾದರ್, ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಈಶ್ವರ ಕಟೀಲ್ ಉಪಸ್ಥಿತರಿದ್ದರು.