Thursday, December 29, 2011
' ಯುವಜನೋತ್ಸವದಲ್ಲಿ ರಾಜ್ಯದ ಸಂಸ್ಕೃತಿ ಪ್ರತಿಬಿಂಬಿಸುವಂತಿರಲಿ '
ಮಂಗಳೂರು,ಡಿಸೆಂಬರ್.29:ದೇಶದ ನಾನಾ ಭಾಗಗಳಿಂದ ನಾನಾ ಸಂಸ್ಕೃತಿ ಪರಂಪರೆಯ ಜನ ಆಗಮಿಸುತ್ತಿರುವ, ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸಾಂಸ್ಕೃತಿಕ ಕಲಾ ಪ್ರಾಕಾರಗಳ ಜೊತೆಗೆ ಇಡೀ ರಾಜ್ಯದ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುವಂತೆ ಸಂಘಟಕರು ಕಾರ್ಯಕ್ರಮ ರೂಪಿಸಬೇಕೆಂದು ವಾರ್ತಾ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜ್ ಅವರು ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಡಾ.ಎನ್.ಎಸ್.ಚನ್ನಪ್ಪ ಗೌಡ ಅವರ ಜೊತೆ ಚರ್ಚೆ ನಡೆಸಿದರು.ರಾಷ್ಟ್ರೀಯ ಯುವಜನೋತ್ಸವವನ್ನು ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಆಚರಿಸುತ್ತಿರುವುದರಿಂದ ಸ್ವಾಮಿ ವಿವೇಕಾನಂದರು ಯುವಜನತೆಗೆ ರಾಷ್ಟ್ರ ಕಟ್ಟುವ ದಿಸೆಯಲ್ಲಿ ನೀಡಿರುವ ಧ್ಯೇಯ ವಾಕ್ಯಗಳನ್ನು ಸಮಾರಂಭ ಸ್ಪರ್ಧೆಗಳು ನಡೆಯುವ ಸ್ಥಳಗಳಲ್ಲಿ ಪ್ರದರ್ಶಿಸಲು ಸೂಚಿಸಿದರು.ವಾರ್ತಾ ಇಲಾಖೆ ಯ ನಿರ್ದೇ ಶಕ ರಾದ ಬೇವಿನ ಮರದ ಅವರು ಈ ಸಂ ಬಂಧ ವಾರ್ತಾ ಇಲಾಖೆ ಕೈ ಗೊಳ್ಳ ಲಿರುವ ಪ್ರಚಾರ ಕಾರ್ಯ ಕ್ರಮದ ರೂಪು ರೇಷೆ ಗಳನ್ನು ವಿವರಿ ಸಿದರು. 115 ಹೋ ರ್ಡಿಂಗ್ಸ್ ಗಳನ್ನು ತಯಾ ರಿಸಿ ಬೆಂಗ ಳೂರು ನಗರ ಜಿಲ್ಲೆ ಯಲ್ಲಿ 25 ಹಾಗೂ 15 ಹೈಮಾಸ್ಟ್ ಹೆದ್ದಾರಿ ಫಲಕ ಗಳು,ಉಡುಪಿ ಜಿಲ್ಲೆ ಯಲ್ಲಿ 14,ಕಾರ ವಾರ ದಲ್ಲಿ 21,ಮಂಗ ಳೂರಿ ನಲ್ಲಿ 25 ಮತ್ತು ಕೊಡಗಿ ನಲ್ಲಿ 15 ಹೆದ್ದಾರಿ ಫಲಕ ಗಳನ್ನು ಅಳ ವಡಿ ಸುವು ದಾಗಿ ತಿಳಿಸಿದರು.ಸುಸಜ್ಜಿತ ಮಾಧ್ಯಮ ಕೇಂದ್ರ ವನ್ನು ಸ್ಥಾಪಿಸುತ್ತಿದ್ದು ಮಾಧ್ಯಮ ಪ್ರತಿನಿಧಿಗಳಿಗೆ ಸುದ್ದಿ ರವಾನೆಗೆ ಯಾವ ಕೊರತೆಗಳುಂಟಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದರು.