Friday, December 9, 2011

" ಯುವಜನೋತ್ಸವ ಯಶಸ್ಸಿಗೆ ಜಿಲ್ಲೆಯ ಜನತೆಯ ಸಹಕಾರ ಅಗತ್ಯ "

ಮಂಗಳೂರು,ಡಿಸೆಂಬರ್.09 : ಜನವರಿ 12ರಿಂದ 16ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಹಬ್ಬ ಯುವಜನೋತ್ಸವದ ಯಶಸ್ಸಿಗೆ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಜನತೆಯ ಸರ್ವ ಸಹಕಾರದ ಅಗತ್ಯವಿದೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಯುವಜನೋತ್ಸವದ ಉಸ್ತುವಾರಿ ಹೊಣೆ ಹೊತ್ತಿರುವ ಜೈರಾಜ್ ಅವರು ಹೇಳಿದರು.ಅವರು ಎರಡು ದಿನ ಗಳಲ್ಲಿ ಯುವ ಜನೋ ತ್ಸವದ ಪೂರ್ವ ಭಾವಿ ಸಿದ್ಧತೆ ಗಳನ್ನು ಪರಿ ಶೀಲಿ ಸಿದ ಬಳಿಕ ಇಂದು ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ಅಧಿ ಕಾರಿ ಗಳ ಸಭೆ ಯನ್ನು ದ್ದೇಶಿಸಿ ಮಾತ ನಾಡುತ್ತಿದ್ದರು. ಮಂಗಳೂರು ನಗರ ಯುವಜನೋತ್ಸವ ಹಬ್ಬದ ಆತಿಥ್ಯವನ್ನು ವಹಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಮಗ್ರ ಯೋಜನೆ ಹಾಗೂ ಅನುಷ್ಠಾನದ ಕುರಿತು ಪ್ರತಿಯೊಬ್ಬರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದ ಅವರು, ಕಾರ್ಯಕ್ರಮಕ್ಕೆ ನೀಡಿದ ಹಣ ಯಾವುದೇ ರೀತಿಯಲ್ಲಿ ಪೋಲಾಗಬಾರದು ಎಂಬ ಎಚ್ಚರಿಕೆಯನ್ನೂ ನೀಡಿದರು.ಎಲ್ಲವೂ ದಾಖ ಲೀಕ ರಣ ಗೊಳ್ಳ ಬೇಕೆಂದ ಅವರು, ಜಿಲ್ಲೆಯ ಎಲ್ಲ ಶಾಲಾ, ಕಾಲೇಜು ಗಳು ಯುವ ಜನೋ ತ್ಸವದಲ್ಲಿ ಸ ಕ್ರಿಯ ವಾಗಿ ಪಾಲ್ಗೊ ಳ್ಳಬೇ ಕಿದೆ. ಬ್ಯಾಂ ಕಿಂಗ್ ನ ತವ ರೂರು, ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಯುವಜನೋತ್ಸವದ ಯಶಸ್ಸಿನೊಂದಿಗೆ ತನ್ನ ಹೆಸರನ್ನು ಭಾರತದ ಭೂಪಟದಲ್ಲಿ ಎಲ್ಲರೂ ಗುರುತಿಸುವಂತೆ ಮಾಡುವ ಅತ್ಯುತ್ತಮ ಮತ್ತು ಅಪರೂಪದ ಅವಕಾಶ ಇದಾಗಿದ್ದು ಎಲ್ಲರೂ ತಂತಮ್ಮ ಕೊಡುಗೆಯನ್ನು ಯಶಸ್ವೀ ಯುವಜನೋತ್ಸವಕ್ಕೆ ನೀಡಬೇಕೆಂದರು.
ಪ್ರತಿಯೊಂದು ಕಾರ್ಯಕ್ರಮವೂ ಯೋಜನೆಯಂತೆ, ಅತ್ಯುತ್ತಮ ಗುಣಮಟ್ಟದೊಂದಿಗೆ ಅನುಷ್ಠಾನವಾಗಬೇಕಿದೆ ಎಂದ ಅವರು, ಜಿಲ್ಲೆಯ ವೈಭವ ಕರ್ನಾಟಕದ ಹೆಸರು ಈ ಕಾರ್ಯಕ್ರಮದ ಯಶಸ್ಸಿನೊಂದಿಗೆ ಮಿಳಿತವಾಗಿದೆ ಎಂದರು. ಕಾರ್ಯಕ್ರಮಕ್ಕೆ ಪೂರ್ವ ಭಾವಿಯಾಗಿ ವಿವಿಧ ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವ ಬಗ್ಗೆ, ಎಲ್ಲರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿ ಸಲಾಯಿತು. ಕಾರ್ಯಕ್ರಮದ ಪ್ರಗತಿ ಪರಿಶೀಲನೆಗೆ ಒಬ್ಬ ಅಧಿಕಾರಿಗೆ ಹೊಣೆ ವಹಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.