ಮಂಗಳೂರು,ಆಗಸ್ಟ್.22: ಮಹಿಳೆಯರಿಗಾಗಿ ಮೀಸಲು ಈ ಉದ್ಯಾನವನ. ಹಲವು ಜಂಜಡಗಳಿಂದ ಕ್ಷಣಿಕವಾಗಿ ಹೊರಬರಲು, ಪ್ರಕೃತಿಯೊಂದಿಗೆ ಮಾತನಾಡಲು, ಏಕಾಂತವನ್ನು ಅನುಭವಿಸಲು ಮಹಿಳೆ ಮತ್ತು ಮಕ್ಕಳ ಹಿತಚಿಂತನೆಯನ್ನು ಗಮನದಲ್ಲಿರಿಸಿ ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾದ ಡಾ.ಕೆ.ಎನ್ ವಿಜಯಪ್ರಕಾಶ್ ಅವರು ರೂಪಿಸಿದ ವನಿತಾವನ ಇಂದು ಉದ್ಘಾಟನೆಗೊಂಡಿತು.ವಿನೂತನ ಪರಿಕಲ್ಪನೆಯ ಈ ಉದ್ಯಾನವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಿ ಶುಭ ಹಾರೈಸಿದರು.ಈ ಸಂದ ರ್ಭದಲ್ಲಿ ಪತ್ರ ಕರ್ತ ರೊಂದಿಗೆ ಮಾತ ನಾಡಿದ ಅವರು, ದೈ ನಂದಿನ ಕೌಟುಂ ಬಿಕ ಒತ್ತಡ ಹಾಗೂ ಜಂಜಾ ಟದ ಬದು ಕಿನ ನಡುವೆ ಮಹಿಳೆ ಯರಿಗೆ ಕೊಂಚ ನೆಮ್ಮದಿ ನೀಡುವ ಪ್ರಶಾಂತ ವಾತಾ ವರಣ ವನ್ನು ಈ ಉದ್ಯಾನ ವನದಲ್ಲಿ ನಿರ್ಮಿಸಿ ರುವುದಾಗಿ ನುಡಿದರು.ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಯೋಜನೆ ಮಹತ್ವದ್ದಾಗಿದ್ದು, ಮುಂದೆ ಪುರುಷರಿಗಾಗಿಯೂ ಪ್ರತ್ಯೇಕ ಪಾರ್ಕನ್ನು ರೂಪಿಸುವ ಆಲೋಚನೆ ಇದೆ ಎಂದರು. ತಮ್ಮ ನಿಧಿಯಿಂದ 2 ಲಕ್ಷ ರೂ. ಅನುದಾನವನ್ನು ಸಚಿವರು ಪಾರ್ಕಿಗಾಗಿ ಪ್ರಕಟಿಸಿದ್ದು, ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕ ಯೋಗೀಶ್ ಭಟ್ ಅವರು ಕೂಡಾ ತಮ್ಮ ನಿಧಿಯಿಂದ ತಲಾ ಎರಡು ಲಕ್ಷ ರೂ.ಗಳ ಅನುದಾನವನ್ನು ಘೋಷಿಸಿದರು. ವನಿತಾವನದಲ್ಲಿ ವಾಚನಾಲಯ, ಮಹಿಳಾ ಕ್ಲಿನಿಕ್, ಹಾಗೂ ಮಹಿಳಾ ಪೊಲೀಸರೆ ರಕ್ಷಣೆಗೂ ಇರುತ್ತಾರೆ ಎಂದು ಸಚಿವರು ಹೇಳಿದರು.
1.5 ಎಕರೆ ಭೂಮಿಯಲ್ಲಿ ಅಲ್ಲಿದ್ದ ಮರಗಳನ್ನೇ ಉಳಿಸಿಕೊಂಡು ಈ ಉದ್ಯಾನವನ ಯೋಜನೆಯನ್ನು ರೂಪಿಸಲಾಗಿದ್ದು, ಈಗಾಗಲೇ ಆರು ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಒಟ್ಟು 25 ಲಕ್ಷ ರೂ.ಗಳಲ್ಲಿ ಪಾರ್ಕಿನಲ್ಲಿ ವಿವಿಧ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಆಯುಕ್ತರಾದ ಡಾ.ಕೆ.ಎನ್. ವಿಜಯಪ್ರಕಾಶ್ ತಿಳಿಸಿದರು. ನಗರ ಪಾಲಿಕೆ ಯಲ್ಲಿ ರುವ 28 ಉದ್ಯಾ ನವನ ಗಳನ್ನು ಅಭಿ ವೃದ್ಧಿ ಪಡಿ ಸುವ ಯೋಜನೆ ಯನ್ನು ಹಮ್ಮಿ ಕೊಳ್ಳ ಲಾಗಿದೆ. ಈಗಾ ಗಲೇ ಮುಖ್ಯ ಮಂತ್ರಿ ಗಳ ಪ್ರಥಮ ಹಂತದ 100 ಕೋಟಿ ರೂ. ವಿಶೇಷ ಅನು ದಾನ ದಲ್ಲಿ ನಾಲ್ಕು ಪಾರ್ಕ್ ಗಳ ಅಭಿ ವೃದ್ಧಿ ಗಾಗಿ 40 ಲಕ್ಷ ರೂ. ವ್ಯಯಿ ಸಲಾ ಗಿದೆ. ದ್ವಿತೀಯ ಹಂತದ 100 ಕೋಟಿ ರೂ. ವಿಶೇಷ ಅನುದಾನದಲ್ಲಿ ತಲಾ 20 ಲಕ್ಷ ರೂ. ಗಳಂತೆ ಒಂದು ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಗುಜ್ಜರಕೆರೆಯ ಅಭಿವೃದ್ಧಿಗೆ 160 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ ಎಂದರು. ಒಟ್ಟು 263 ಲಕ್ಷ ರೂ. ವೆಚ್ಚದಲ್ಲಿ ಒಂದು ಕೆರೆ ಹಾಗೂ 6 ಉದ್ಯಾನವನಗಳ ಅಭಿವೃದ್ಧಿಗೆ ಯೋಜಿಸಲಾಗಿದೆ ಎಂದರು. ನಗರದ ಇನ್ನೂ ಐದು ಉದ್ಯಾನವನಗಳನ್ನು 'ಓನ್ ಯುವರ್ ಪಾರ್ಕ್, ಓನ್ ಯುವರ್ ರೋಡ್' ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಪ್ರವೀಣ್, ಉಪ ಮೇಯರ್ ಗೀತಾ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಪಾಲಿಕೆ ಸದಸ್ಯರುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.