ಮಂಗಳೂರು,ಆಗಸ್ಟ್.01: ಗ್ರಾಮೀಣ ಜನತೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಹಳ್ಳಿಗಳಲ್ಲಿನ ಕುಂದುಕೊರತೆಗಳ ನಿವಾರಿಸಲು ಕ್ರಮಕೈಗೊಳ್ಳಲಾಗುವುದು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸುವ ಮೂಲಕ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತಕ್ಕೆ ಪ್ರಯತ್ನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೂತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಹೇಳಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನ ನೂತನ ಮುಖ್ಯ ಕಾರ್ಯ ನಿರ್ವಾ ಹಕ ಅಧಿ ಕಾರಿ ಯಾಗಿ ಅಧಿ ಕಾರ ವಹಿಸಿ ಕೊಂಡ ಬಳಿಕ ಅವರು ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡಿ ಕೆಲ ವೊಂದು ಇಲಾಖೆ ಗಳಿಗೆ ಕಾಯ ಕಲ್ಪ ಮಾಡ ಬೇಕಾ ಗಿದೆ ಮತ್ತು ಅವು ಗಳನ್ನು ಕ್ರಿಯಾ ಶೀಲ ಗೊಳಿ ಸುವ ಅಗತ್ಯ ವಿದೆ. ಜಿಲ್ಲಾ ಪಂಚಾಯತ್ ವ್ಯವಸ್ಥೆಯಡಿ ಬರುವ ಇಲಾಖೆಗಳಿಗೆ ಚುರುಕು ಮುಟ್ಟಿಸಲಾಗುವುದು ಎಂದರು.
ಕುಡಿಯುವ ನೀರು, ಗ್ರಾಮೀಣ ರಸ್ತೆ, ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುವುದು. ಆ ಮೂಲಕ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಉದ್ದೇಶವೂ ಇದೆ ಎಂದರು.ಸ್ವಚ್ಛತಾ ಕಾರ್ಯ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಆರೋಗ್ಯ ಕಾರ್ಯಕ್ರಮಗಳನ್ನು ಗ್ರಾಮೀಣ ಜನತೆಗೆ ಒದಗಿಸುವುದು ತಮ್ಮ ಆದ್ಯತೆಯಾಗಿರುವುದಾಗಿ ಡಾ.ವಿಜಯಪ್ರಕಾಶ್ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ, ಐಟಿಡಿಪಿ ಮತ್ತು ವಿವಿಧ ನಿಗಮಗಳ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಹಾಗೂ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ನೂತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದರು.
ಅಧಿಕಾರ ವಹಿಸಿ ಕೊಂಡ ನೂತನ ಮುಖ್ಯ ಕಾರ್ಯ ನಿವಾ ರ್ಹಕ ಅಧಿ ಕಾರಿ ಯವ ರನ್ನು ಉಪ ಕಾರ್ಯ ದರ್ಶಿ ಕೆ.ಶಿವ ರಾಮೇ ಗೌಡ, ಯೋಜನಾ ನಿರ್ದೇ ಶಕಿ ಎನ್.ಸಿ.ಸೀತಮ್ಮ, ಮುಖ್ಯ ಲೆಕ್ಕಾ ಧಿಕಾರಿ ಎ.ಎನ್.ರಾಮ ದಾಸ್, ಮುಖ್ಯ ಯೋಜನಾ ಧಿಕಾರಿ ಮಹ ಮ್ಮದ್ ನಜೀರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಸುಂದರ ಪೂಜಾರಿ ಮೊದಲಾದವರು ಅಭಿನಂದಿಸಿದರು.
ದಕ್ಷಿಣ ಕನ್ನಡ ಜಿಲ್ಲ್ಲೆಯವರಾದ ಬಂಟ್ವಾಳ ತಾಲೂಕಿನ ಕಲ್ಲಡ್ಕದವರಾದ ಡಾ.ವಿಜಯಪ್ರಕಾಶ್ ಪರ್ಸನಲ್ ಮೆನೇಜ್ಮೆಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಶನ್ಸ್ ಸ್ನಾತಕೋತ್ತರ ಪದವೀಧರರು. ನಗರ ಮತ್ತು ಕೊಳಚೆ ಪ್ರದೇಶಗಳ ಅಭಿವೃದ್ಧಿ ವಿಷಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 1987-88ರ ಸಾಲಿನಲ್ಲಿ ಕರ್ನಾಟಕ ಸಾಮಾನ್ಯ ಸೇವೆಗಳ (ಕೆಜಿಎಸ್) ಅಧಿಕಾರಿಯಾಗಿ ಸರಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಮೊದಲು ಮಂಗಳೂರು ವಿವಿಯ ವಾಣಿಜ್ಯ ವಿಭಾಗದಲ್ಲಿ ಐದು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಶಿರಸಿ ತಹಶೀಲ್ದಾರ್, ಶಿರಸಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಹಾಸನ ಮುನ್ಸಿಪಲ್ ಕೌನ್ಸಿಲರ್, ಸಹಾಯಕ ಅಭಿವೃದ್ಧಿ ಆಯುಕ್ತ ಬೆಂಗಳೂರು, ಜಲಸಂಪನ್ಮೂಲ -ನಗರಾಡಳಿತ ಸಚಿವರ ಆಪ್ತ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಇಲಾಖೆಯ ಗ್ರಾಮೀಣ ಇಂಧನ ಕಾರ್ಯಕ್ರಮಗಳ ವಿಭಾಗದ ನಿರ್ದೇಶಕ, ಸ್ವ ಉದ್ಯೋಗ ಕಾರ್ಯಕ್ರಮಗಳ ನಿರ್ದೇಶಕ, ಬಿಸಿಎಂ ನಿಗಮದ ಆಡಳಿತ ನಿರ್ದೇಶಕ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ, ಕರ್ನಾಟಕ ವಸತಿ ಶಾಲೆಗಳ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಒಂದು ವರ್ಷ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದು, 2 ವರ್ಷಗಳ ಹಿಂದೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಬಿಸಿಎಂ ನಿಗಮನದಲ್ಲಿ ಆಡಳಿತ ನಿರ್ದೇಶಕರಾಗಿದ್ದಾಗ ನಿಗಮಕ್ಕೆ ಕಾಯಕಲ್ಪ ನೀಡಿ ಸತತ 4 ವರ್ಷ ಕೇಂದ್ರದಿಂದ ಪುರಸ್ಕಾರ ಪಡೆದ ಹೆಗ್ಗಳಿಕೆ ಡಾ.ವಿಜಯ ಪ್ರಕಾಶ್ ಅವರದ್ದಾಗಿದೆ.