ಮಂಗಳೂರು,ಆಗಸ್ಟ್.10:ಸ್ತನ್ಯಪಾನ ಅಮೃತ ಸಮಾನ.ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ತಾಯಂದಿರಲ್ಲಿ ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ಪೆರುವಾಯಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವೇಶ್ವರ .ಬಿ.ಕೆ. ಅವರು ತಿಳಿಸಿದ್ದಾರೆ.ಕ್ಷೇತ್ರ ಪ್ರಚಾರ ಇಲಾಖೆ,ಭಾರತ ಸರ್ಕಾರ,ಸಮು ದಾಯ ಆರೋಗ್ಯ ಕೇಂದ್ರ,ವಾಮದ ಪದವು,ವಾರ್ತಾ ಇಲಾಖೆ ಮಂಗ ಳೂರು ,ಚೆನ್ನೈ ತ್ತೋಡಿ ಗ್ರಾಮ ಪಂಚಾ ಯತ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾ ಶ್ರಯದಲ್ಲಿ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಇಂದು ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಆರೋಗ್ಯವಂತ ಮಕ್ಕಳ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಸ್ತನ್ಯಪಾನದ ಮಹತ್ವ ಕುರಿತು ಮಾತನಾಡಿದರು.
ಹೆಣ್ತನದ ಪರಿಪೂರ್ಣತೆಗೆ ತಾಯ್ತನ ಅವಶ್ಯಕ. ತಾಯ್ತನ ಧನ್ಯತೆ ತಾಯಿ ಶಿಶುವಿಗೆ ಎದೆಹಾಲು ಉಣಿಸಿದಾಗ ಮಾತ್ರ ಸಾಧ್ಯ.ಸ್ತನ್ಯಪಾನದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸ್ಮರಣ ಶಕ್ತಿ ವೃದ್ಧಿಸುತ್ತದೆ,ಶಿಶುಗಳ ದವಡೆ ಗಟ್ಟಿಯಾಗಿ ಸದೃಢವಾದ ಹಲ್ಲುಗಳು ಮೂಡುತ್ತದೆ. ಎದೆಹಾಲು ಸುಲಭವಾಗಿ ಜೀರ್ಣವಾಗುವುದರಿಂದ ಮಗು ಆರೋಗ್ಯ ಪೂರ್ಣವಾಗಿರುತ್ತದೆ ಎಂದ ಡಾ.ವಿಶ್ವೇಶ್ವರ ತಾಯಂದಿರು ಶಿಶು ಜನಿಸಿದ ಕೂಡಲೇ ಒಂದು ಗಂಟೆಯೊಳಗೆ ಮಗುವಿಗೆ ಪ್ರಥಮ ಎದೆಹಾಲು ಕಡ್ಡಾಯವಾಗಿ ಉಣಿಸಬೇಕೆಂದರು.
ಸಮಾ ರಂ ಭದ ಅಧ್ಯ ಕ್ಷತೆ ವಹಿ ಸಿದ್ದ ಜಿಲ್ಲಾ ಆ ರೋಗ್ಯ ಮತ್ತು ಕು ಟುಂಬ ಕಲ್ಯಾಣ ಅಧಿ ಕಾರಿ ಡಾ. ಓ.ಆರ್.ಶ್ರೀ ರಂಗಪ್ಪ ಅವರು ಮಾತ ನಾಡಿ ಚೊಚ್ಚಲ ಬಾಣಂ ತಿಯರು ನವ ಜಾತ ಶಿಶು ಗಳಿಗೆ ಎದೆ ಹಾಲು ಯಾವ ರೀತಿ ಹೇಗೆ ಯಾವಾಗ ಎಂಬುದನ್ನು ಆರೋಗ್ಯ ಸಹಾ ಯಕಿ ಯರಿಂದ ತಿಳಿದು ಕೊಂಡು ಎದೆ ಹಾಲು ನೀಡ ಬೇಕು.ಇಲ್ಲ ವಾದಲ್ಲಿ ಎದೆಹಾಲು ಮಗುವಿನ ಸಾವಿಗೂ ಕಾರಣವಾಗಲಿದೆ ಎಂದರು.ಕ್ಷೇತ್ರ ಪ್ರಚಾರಾಧಿಕಾರಿ ಟಿ.ಬಿ.ನಂಜುಂಡಸ್ವಾಮಿ ಅವರು ಮಾತನಾಡಿ ಸ್ತನ್ಯಪಾನದ ಮಹತ್ವ ಗ್ರಾಮೀಣರಲ್ಲಿ ತಿಳಿಸಲಿಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದರು. ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ.ಕೆ.ಉಳಿಪಾಡಿ,ತಾಲೂಕು ಪಂಚಾಯತ್ ಸದಸ್ಯರಾದ ರಮೇಶ್ ಕುಡುಮೇರು ,ಗೋಪಾಲ ಅಂಚನ್, ಗ್ರಾಮಸ್ಥರು ಇವರು ಮಾತನಾಡಿದರು.
ಗುತ್ತಿಗೆದಾರ ಅಮ್ಮು ರೈ ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಪೈ ,ಶಿಶು ಅಭಿವೃದ್ಧಿ ಸಹಾಯಕ ಅಧಿಕಾರಿ ಸುಬ್ರಹ್ಮಣ್ಯ ,ವಾರ್ತಾ ಇಲಾಖೆಯ ಚಂದ್ರಶೇಖರ ಅಜಾದ್ ಉಪಸ್ಥಿತರಿದ್ದರು.ಇದೇ ಸಂದ ರ್ಭದಲ್ಲಿ ಆರೋಗ್ಯ ವಂತ ಮಕ್ಕಳ ಸ್ಪರ್ಧೆ ಯನ್ನು ಏರ್ಪ ಡಿಸ ಲಾಗಿದ್ದು,ತೀರ್ಪು ಗಾರ ರಾಗಿ ಡಾ.ಸ್ಮಿತಾ ರಾಣಿ, ಡಾ. ಸೋಹನ್ ಕುಮಾರ್ ಮತ್ತು ಡಾ.ರಾಮ ರಾ ಜೇಶ್ ಅವರು ನಡೆಸಿ ಕೊಟ್ಟರು. ಸುಮಾರು 150 ಕ್ಕೂ ಹೆಚ್ಚಿನ ಮಕ್ಕಳು ತಾಯಂ ದಿರು ಈ ಕಾರ್ಯ ಕ್ರಮ ದಲ್ಲಿ ಭಾಗ ವಹಿ ಸಿದ್ದರು. ಆ ರೋಗ್ಯ ವಂತ ಮಕ್ಕಳ ಸ್ಪರ್ಧಾ ವಿಜೇ ತರಲ್ಲಿ 6 ತಿಂಗ ಳಿನಿಂದ 1 ವರ್ಷದೊಳಗಿನ ಮಕ್ಕಳಲ್ಲಿ ಅಭಿಮಾನ್,ರೌನಾಥ್,ಹರ್ಷಿತಾ,ಮೃಣಾಲ್,ಒಂದು ವರ್ಷದಿಂದ ಎರಡು ವರ್ಷದೊಳಗಿನ ಮಕ್ಕಳಲ್ಲಿ ತ್ರಿಷಾ,ಮನೀಷ್,ರಕ್ಷಾ,ಕಾರ್ತಿಕ್,ಎರಡರಿಂದ ಮೂರು ವರ್ಷದೊಳಗಿನ ಮಕ್ಕಳಲ್ಲಿ ನೀತಾ,ಶ್ವಾನ್,ರಿಸಿಕಾ ಮತ್ತು ಸಾನ್ವಿತ್ ವಿಜಯಿಗಳಾಗಿರುತ್ತಾರೆ.ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದುರ್ಗಾ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಗೀತಾ ಸ್ವಾಗತಿಸಿದರು. ಸಮಾರಂಭದ ಅಂಗವಾಗಿ ಯಕ್ಷಲೋಕ ಸಾಂಸ್ಕೃತಿಕ ಸಂಗಮ ಮತ್ತು ಸ್ಕಂದ ಡ್ಯಾನ್ಸ್ ತಂಡದವರಿಂದ ನೃತ್ಯ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು.