ಮಂಗಳೂರು,ಆಗಸ್ಟ್.05: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ವೆಂಕಪ್ಪಜ್ಜನ ಮನೆಯ ಸದಾನಂದ ಗೌಡರು ಕರ್ನಾಟಕ ರಾಜ್ಯದ 26 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವೆಂಕಪ್ಪ ಗೌಡ ಮತ್ತು ಕಮಲಾ ದಂಪತಿಯ ಪುತ್ರನಾಗಿ 1953ರಲ್ಲಿ ಡಿ.ವಿ. ಸದಾನಂದ ಗೌಡರು ಜನಿಸಿದರು.ಪುತ್ತೂರು ತಾಲೂ ಕಿನ ಕೆಯ್ಯೂರು ಮತ್ತು ಸುಳ್ಯ ದಲ್ಲಿ ಪ್ರಾ ಥಮಿಕ ಮತ್ತು ಪ್ರೌಢ ಶಿಕ್ಷಣ ವನ್ನು ಪಡೆ ದರು. ಪುತ್ತೂರು ಸಂತ ಫಿಲೋ ಮಿನಾ ಕಾಲೇಜಿ ನಲ್ಲಿ ಬಿ.ಎಸ್ಸಿ. ಪದವಿ, ಉಡುಪಿ ವೈ ಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾ ಲಯ ದಲ್ಲಿ ಕಾನೂನು ಪದವಿ ಪಡೆ ದರು. ಈ ಸಂದ ರ್ಭದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯ ದರ್ಶಿ ಯಾಗಿ ಚುನಾ ವಣೆಗೆ ನಿಂತು ಗೆದ್ದರು. ಅವಿಭಜಿತ ದ.ಕ. ಜಿಲ್ಲಾ ಅ.ಭಾ.ವಿ.ಪ. ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯನ್ನು ಕೂಡಾ ಯಶಸ್ವಿಯಾಗಿ ನಿರ್ವಹಿಸಿದರು.
1976ರಲ್ಲಿ ಪುತ್ತೂರು ಮತ್ತು ಸುಳ್ಯದಲ್ಲಿ ವಕೀಲ ವೃತ್ತಿ ಆರಂಭಿಸಿದ ಡಿ.ವಿ. ಸದಾನಂದ ಗೌಡ ಪುತ್ತೂರಿನ ಹಿರಿಯ ನ್ಯಾಯವಾದಿ ಯು.ಪಿ. ಶಿವರಾಮ ಗೌಡರ ಬಳಿ ಕಿರಿಯ ನ್ಯಾಯವಾದಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಒಂದು ವರ್ಷ ಕಾಲ ಸಹಾಯಕ ಸರಕಾರಿ ಅಭಿಯೋಜಕರಾಗಿ ಕೆಲಸ ನಿರ್ವಹಿಸಿದ ಅವರು ರಾಜಕೀಯಕ್ಕೆ ಧುಮುಕಿದರು.ಎರಡು ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂ ರಿನ ಶಾಸಕ ರಾಗಿ ಆಯ್ಕೆ ಯಾದ ಇವರು 1-1-1999 ರಲ್ಲಿ ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ರಾಗಿ ದ್ದರು.2004 ರಲ್ಲಿ ಮಂಗ ಳೂರು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಲೋಕ ಸಭೆಗೆ ಆಯ್ಕೆ ಯಾದರು. 2005 ರಲ್ಲಿ ಕೇಂದ್ರ ಕಾಫಿ ಮಂಡ ಳಿಯ ನಿರ್ದೇ ಶಕ ರಾಗಿ ನೇಮಕ ಗೊಂಡರು. 2007ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.ಇವರ ಅಧ್ಯಕ್ಷತೆಯ ಅವಧಿಯಲ್ಲಿ 2008ರಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದಿತು. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಡಿ.ವಿ. ಸದಾನಂದ ಗೌಡ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ಸಂಸದರಾಗಿ ಗೆಲುವು ಸಾಧಿಸಿದರು.ಸಂಸದರಾದ ಡಿ.ವಿ. ಸದಾನಂದ ಗೌಡ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. 6 ರಾಜ್ಯಗಳ ಪಕ್ಷದ ಸಂಘಟನಾ ಹೊಣೆಯನ್ನು ನಿರ್ವಹಿಸಿದ್ದಾರೆ.ಇದಲ್ಲದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಸಮಿತಿ/ಮಂಡಳಿಗಳಲ್ಲಿ ಸಕ್ರಿಯ ಸದಸ್ಯರಾಗಿದ್ದರು.1-1-2003 ರ ಕರ್ನಾಟಕ ಸರ್ಕಾರದ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕರಡು ಮಸೂದೆ ರಚನಾ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ವಿಧಾನಸಭೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸದಸ್ಯರಾಗಿದ್ದರು.ನಂತರ 2003 ರಲ್ಲಿ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದರು. 2006 ರಲ್ಲಿ ವಿಶೇಷ ಆರ್ಥಿಕ ವಲಯ ಸಂಬಂಧಿ ಪಾರ್ಲಿಮೆಂಟರಿ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. 2009 ರಲ್ಲಿ ವಾಣಿಜ್ಯ ,ವಿಜ್ಞಾನ ಮತ್ತು ತಂತ್ರಜ್ಞಾನ,ಪರಿಸರ ಮತ್ತು ಅರಣ್ಯ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.ಡಿವಿಎಸ್ ಅವರು ಕರಾ ವಳಿಯ ಗಂಡು ಕಲೆ ಯಕ್ಷ ಗಾನ ಕಲಾ ವಿದರೂ ಹೌದು. ವಿಶ್ವ ವಿದ್ಯಾ ಲಯ ಮಟ್ಟ ದಲ್ಲಿ ಕ್ಕೊಕ್ಕೊ ಆಟ ದಲ್ಲಿ ಮೈ ಸೂರು ವಿಶ್ವ ವಿದ್ಯಾ ನಿಲಯ ವನ್ನು ಪ್ರತಿ ನಿಧಿ ಸಿದ್ದರು.ಅಲ್ಲದೆ ಬ್ಯಾಡ್ಮಿಂ ಟನ್ ಹಾಗೂ ಟೆನ್ನಿಸ್ ಆಟ ಗಾರರು.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಕುಟುಂಬದ ಕಿರು ಪರಿಚಯ:
ತಂದೆಯ ಹೆಸರು : ದೇವರಗುಂಡ ವೆಂಕಪ್ಪ ಗೌಡ
ತಾಯಿಯ ಹೆಸರು : ಶ್ರೀಮತಿ ಕಮಲ
ಹುಟ್ಟಿದ ದಿನಾಂಕ :18-3-1953
ಹುಟ್ಟಿದ ಸ್ಥಳ ದೇವರಗುಂಡ :ದಕ್ಷಿಣಕನ್ನಡ ಜಿಲ್ಲೆ
ಮದುವೆ : 6-5-1980
ಹೆಂಡತಿ : ಶ್ರೀಮತಿ ಡಾಟಿ ಸದಾನಂದ
ಮಕ್ಕಳು : ಒಬ್ಬ ಪುತ್ರ -ಕಾರ್ತಿಕ್