ಮಂಗಳೂರು,ಆಗಸ್ಟ್.13: ರಾಜ್ಯದ ಅಧಿಕಾರಿಗಳು ಮತ್ತು ವಿರೋಧ ಪಕ್ಷದ ಪ್ರತಿನಿಧಿಗಳೂ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಯನ್ನು ಸಾಧಿಸಲು ದೃಢ ಹೆಜ್ಜೆ ಇಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಮುಖ್ಯಮಂತ್ರಿ ಪದವಿ ಸ್ವೀಕರಿಸಿದ ಬಳಿಕ ಇದೇ ಪ್ರಥಮ ಬಾರಿ ತವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.ಮುಖ್ಯ ಮಂತ್ರಿ ಹುದ್ದೆ ಜನ ಸೇವೆ ಗೊಂದು ಅವ ಕಾಶ ಎಂದು ವ್ಯಾಖ್ಯಾ ನಿಸಿದ ಮುಖ್ಯ ಮಂತ್ರಿ ಗಳು ವಾರದ 3 ರಿಂದ 4 ದಿನ ವಿಧಾನ ಸೌಧ ಹಾಗೂ ಗೃಹ ಕಚೇರಿ ಕೃಷ್ಣ ದಲ್ಲಿ ದ್ದು ಕೊಂಡು ಆಡಳಿ ತಕ್ಕೆ ಚುರುಕು ಮುಟ್ಟಿ ಸುವ ನಿರ್ಧಾ ರಕ್ಕೆ ಬಂದಿ ದ್ದೇನೆ.ಎರಡು ದಿನ ವಿವಿಧ ಜಿಲ್ಲೆ ಗಳ ಪ್ರವಾಸ ಗಳಿ ಗಾಗಿ ಹಾಗೂ ಒಂದು ದಿನವನ್ನು ಖಾಸಗಿ ಮತ್ತು ಕೌಟುಂಬಿಕ ಕಾರ್ಯಕ್ರಮಗಳಿಗೆ ಮೀಸಲಿಡುವ ಯೋಜನೆ ನನ್ನದು ಎಂದರು. ಈಗಾಗಲೇ ಅಧಿಕಾರಿಗಳ ಸಭೆಯನ್ನು ಕರೆದು ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಅವರೆಲ್ಲರೂ ರಾಜ್ಯ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.ಎರಡು ಬಾರಿ ಯಶಸ್ವಿಯಾಗಿ ಮಂತ್ರಿ ಮಂಡಲದ ರಚನೆ ವಿಸ್ತರಣೆ ನಡೆಸಲಾಗಿದೆ. ಹಿರಿಯರ ಸಲಹೆ ಸೂಚನೆಗಳನ್ನು ಪಡೆದು ಅಂತಿಮ ಸುತ್ತಿನ ಸಂಪುಟ ವಿಸ್ತರಣೆಯನ್ನು ನಡೆಸಲಾಗುವುದು ಎಂದು ನುಡಿದರು.2008ರ ಮೇ ತಿಂಗ ಳಲ್ಲಿ ಯಡಿ ಯೂ ರಪ್ಪ ನೇತೃ ತ್ವದಲ್ಲಿ ಅಧಿ ಕಾರಕ್ಕೆ ಬಂದ ಸರ್ಕಾರ ರಾಜ್ಯದ ಅಭಿ ವೃದ್ಧಿಗೆ ಹೊಸ ದಿಕ್ಕನ್ನು ತೋರಿ ಸಿದೆ. ಹೊಸ ಆಯಾ ಮವನ್ನು ನೀಡಿದೆ. ಅದಕ್ಕೆ ವೇಗ ತುಂಬು ವುದಷ್ಟೆ ನನ್ನ ಕೆಲಸ. ಹೊಸ ಯೋಜನೆ ಗಳನ್ನು,ವಿಷಯ ಗಳನ್ನು ಪ್ರಸ್ತಾಪಿ ಸುವ ಮೂಲ ವೇ ರಾಜ್ಯ ಅಭಿ ವೃದ್ಧಿ ಹೊಂದು ತ್ತದೆ ಎಂಬು ದರಲ್ಲಿ ನನಗೆ ನಂಬಿಕೆ ಇಲ್ಲ.ಈಗಾಗಲೇ ಜಾರಿಯಲ್ಲಿರುವ ನೂರಾರು ಯೋಜನೆಗಳನ್ನು ಇನ್ನಷ್ಟು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕೆ ನನ್ನ ಪ್ರಥಮ ಆದ್ಯತೆ. ಇದರಿಂದಲೇ ಅಭಿವೃದ್ಧಿಯಲ್ಲಿ ರಾಷ್ಟ್ರದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ತವರೂರು ಅವಿಭಾಜಿತ ಜಿಲ್ಲೆಯ ಅಭಿವೃದ್ದಿ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಜಿ.ಪಂ., ಮಹಾನಗರ ಪಾಲಿಕೆ, ತಾ.ಪಂ., ಪುರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ ಅಭಿವೃದ್ಧಿಯತ್ತ ಮುಂದಡಿ ಇಡಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು.ತವರಿಗೆ ಆಗ ಮಿಸಿದ ಮುಖ್ಯ ಮಂತ್ರಿ ಡಿ.ವಿ.ಸದಾ ನಂದ ಗೌಡ ರನ್ನು ಮಂಗ ಳೂರು ವಿಮಾನ ನಿಲ್ದಾ ಣದಲ್ಲಿ ಅದ್ಧೂರಿ ಯಾಗಿ ಸ್ವಾಗತಿ ಸಲಾ ಯಿತು. ಸಚಿವ ಕೃಷ್ಣ ಜೆ.ಪಾಲೆಮಾರ್, ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ಮೇಯರ್ ಪ್ರವೀಣ್ ಅಂಚನ್, ಶಾಸಕರಾದ ಎಸ್.ಅಂಗಾರ, ಮಲ್ಲಿಕಾ ಪ್ರಸಾದ್, ಕ್ಯಾ.ಗಣೇಶ್ ಕಾರ್ಣಿಕ್, ಜಿ.ಪಂ.ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್,ಜಿಲ್ಲಾಧಿಕಾರಿ ಚನ್ನಪ್ಪ ಗೌಡ,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್, ಜವಾಹರ್ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಮತ್ತಿತರರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು. ಮುಖ್ಯಮಂತ್ರಿಯವರ ಪತ್ನಿ ಡಾಟಿ ಸದಾನಂದ ಜತೆಗಿದ್ದರು.