ಮಂಗಳೂರು,ಆಗಸ್ಟ್.22: ಶೈಕ್ಷಣಿಕ ವಲಯದಲ್ಲಿ ಉತ್ತಮ 20 ಜಿಲ್ಲೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಿಂದ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಿಣ ನೀಡುವಲ್ಲಿ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನದ ಕ್ರಿಯಾಯೋಜನೆಗೆ ಇಂದು ಜಿಲ್ಲಾ ಪಂಚಾಯತ್ ನಲ್ಲಿ ಅನುಮೋದನೆ ದೊರೆತಿದ್ದು, ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು. ನಗರದ ಜಿಲ್ಲಾ ಪಂಚಾ ಯತ್ ಮಿನಿ ಸಭಾಂ ಗಣದಲ್ಲಿ ಇಂದು ಸರ್ವ ಶಿಕ್ಷಣ ಅಭಿಯಾ ನದ ಜಿಲ್ಲಾ ಅನು ಷ್ಠಾನ ಸಮಿತಿ ಯ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತ ನಾಡು ತ್ತಿದ್ದರು. 2001-02 ನೇ ಸಾಲಿ ನಲ್ಲಿ 7656 ಮಕ್ಕಳು ಶಾಲೆ ಯಿಂದ ಹೊರ ಗುಳಿ ದಿದ್ದರೆ ಈಗ ಆ ಸಂಖ್ಯೆ 64ಕ್ಕೆ ಇಳಿಕೆ ಯಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಜಿಲ್ಲೆಯಲ್ಲಿ ಶೇ. 0.06 ಆಗಿದ್ದು, ರಾಜ್ಯದಲ್ಲೇ ಕನಿಷ್ಠ ಸಂಖ್ಯೆಯಲ್ಲಿ ಶಾಲೆಯಿಂದ ಮಕ್ಕಳು ಹೊರಗುಳಿದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಶೇ.0ಗೆ ತಲುಪುವಲ್ಲಿ ಅಧಿಕಾರಿಗಳು ಶ್ರಮಿಸುವಂತೆ ಕರೆ ನೀಡಿದ ಸಚಿವ ಪಾಲೆಮಾರ್, ಸರಕಾರಿ ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದರು.
ಜಿಲ್ಲೆ 933 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯ, ಕುಡಿಯುವ ನೀರು, ವಿದ್ಯುಚ್ಛಕ್ತಿ, ಅಗ್ನಿನಂದಕ, ವಿಕಲಚೇತನ ಮಕ್ಕಳಿಗೆ ಇಳಿಜಾರು ಸೌಲಭ್ಯ ಕಲ್ಪಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಏಳು ಬ್ಲಾಕ್ ಸಂಪನ್ಮೂಲ ಕೇಂದ್ರಗಳನ್ನು ತೆರೆಯಲಾಗಿದ್ದು, 52.80 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದವರು ತಿಳಿಸಿದರು.
ಜೋಕಟ್ಟೆಯ ಬೋರುಗುಡ್ಡ ಶಾಲೆ ಎಸ್ಇಝೆಡ್ ಪ್ರದೇಶದಲ್ಲಿದ್ದು, ಈ ಶಾಲೆ ತೀರಾ ನಾದುರಸ್ತಿಯಲ್ಲಿದ್ದು, ಮಳೆಗಾಲದಲ್ಲಿ ಹಾವುಗಳ ಕಾಟದಿಂದ ತೊಂದರೆಯಾಗುತ್ತಿದೆ. ಅಲ್ಲಿ ಪಕ್ಕದಲ್ಲೇ ಸುಮಾರು ಮೂರು ಎಕರೆಯಷ್ಟು ಭೂಮಿ ಇದ್ದು, ಅಲ್ಲಿ ಎಸ್ಇಝೆಡ್ ನೆರವಿನಿಂದಲೇ ಶಾಲೆ ಕಟ್ಟಡ ನಿಮರ್ಾಣಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಸಚಿವರ ಗಮನ ಸೆಳೆದರು.
ಜಿಲ್ಲೆಯಲ್ಲಿ 447 ಪ್ರಾಥಮಿಕ ವಿಭಾಗದ, 190 ಹೈಸ್ಕೂಲ್ ವಿಭಾಗದ ಶಿಕ್ಷಕರ ಕೊರತೆ ಇದ್ದು, 81 ಉಸ್ತುವಾರಿ ಅಧಿಕಾರಿಗಳ ಕೊರತೆ ಇರುವುದಾಗಿ ಸಚಿವರ ಗಮನ ಸೆಳೆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಜಿಲ್ಲೆಗೆ ಮಂಜೂರಾಗಿರುವ 56 ಅತಿಥಿ ಉಪನ್ಯಾಸಕರ ಹುದ್ದೆಯನ್ನು ದ್ವಿಗುಣಗೊಳಿಸಬೇಕೆಂದು ಮನವಿ ಮಾಡಿದರು. ನಲಿಕಲಿ ಯೋಜನೆಯಡಿ ಪೀಠೋಪಕರಣ ಅಗತ್ಯವಿರುವುದನ್ನೂ ಅವರು ಸಚಿವರ ಗಮನಕ್ಕೆ ತಂದರು. ಎಲ್ಲ ಸರ್ಕಾರಿ ಶಾಲೆಗಳನ್ನು ಘನತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ಹಾಗೂ ಹಸುರೀಕರಣ ಯೋಜನೆಯಡಿ ಜಿಲ್ಲಾ ಪಂಚಾಯತ್ ಸೇರಿಸಲಿದೆ ಎಂದರು.
ಅಂಗನವಾಡಿ ಶಾಲೆಗಳ ಕಟ್ಟಡ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೊರಗರಿಗೆ ಮನೆಗಳನ್ನು ನಿರ್ಮಿಸಲು ರೂಪಿಸಲಾಗಿರುವ ಯೋಜನೆಯಂತೆಯೇ ಹೊಸ ಪ್ಯಾಕೇಜನ್ನು ಆರಂಭಿಸಲಾಗು ವುದು. ಈ ಯೋಜನೆಯಡಿ ಅಂಗನವಾಡಿಗಳ ಕೊರತೆ ಹಾಗೂ ಅಂಗನವಾಡಿ ಗಳಲ್ಲಿನ ಸೌಲಭ್ಯಗಳ ಕೊರತೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಸಚಿವ ಪಾಲೆಮಾರ್ ಸಭೆಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ 2010-11ನೆ ಸಾಲಿನಲ್ಲಿ ಒಟ್ಟು 58 ಶಾಲಾ ಕೊಠಡಿಗಳ ಅಗತ್ಯವಿದ್ದು, 47 ಪೂರ್ಣಗೊಂಡಿವೆ. ಉಳಿದ ಕೊಠಡಿಗಳು ಮಾಸಾಂತ್ಯದಲ್ಲಿ ಪೂರ್ಣವಾಗಲಿವೆ. ಇದೇ ಅವಧಿಯಲ್ಲಿ ಒಟ್ಟು 2 ಶಾಲಾ ಕಟ್ಟಡಗಳು ಮಂಜೂರಾಗಿದ್ದು, ಒಂದು ಪೂರ್ಣಗೊಂಡಿದೆ ಎಂದು ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪಯೋಜನಾಧಿಕಾರಿ ಶಿವಪ್ರಕಾಶ್ ತಿಳಿಸಿದರು.
ಶಾಲಾಧಾರಿತ ಶಿಕ್ಷಣ, ಗ್ರಂಥಾಲಯಗಳಿಗೆ ಪುಸ್ತಕ ಹಾಗೂ ಓದಿನ ಬಗ್ಗೆ ಆಸಕ್ತಿ ಬೆಳೆಸಲು ಓದುವ ಮೂಲೆಯನ್ನು ಮಕ್ಕಳು ಉಪಯೋಗಿಸುವಂತೆ ಮಾಡುವಲ್ಲಿ ಕಳೆದ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನ ಯಶಸ್ಸು ಕಂಡಿದೆ ಎಂದ ಅವರು, ರಾಜ್ಯ ಮಟ್ಟದಲ್ಲಿ ನೂತನ ಆವಿಷ್ಕಾರಕ್ಕೆ ಒಂದು ಕೋಟಿ ರೂ. ಮೀಸಲಿರಿಸಿದೆ ಎಂದರು.
ಅನಾಥ ಮಕ್ಕಳಿಗೆ ನಗರದಲ್ಲಿ ಟ್ರಾನ್ಸಿಟ್ ಹೋಮ್ ನ್ನು ಪ್ರಸಕ್ತ ಸಾಲಿನಲ್ಲಿ ಆರಂಭಿಸಲಾಗುವುದು. ಶಾಲಾ ಆವರಣದಲ್ಲೇ ಇರುವ ಈ ಹೋಮ್ ನಲ್ಲಿ 50 ಮಕ್ಕಳಿಗೆ ಅವಕಾಶವಿದೆ ಎಂದರು. ಸಭೆಯಲ್ಲಿ ಸಮಿತಿ ಸದಸ್ಯರು ಗಮನ ಸೆಳೆದ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಿಇಒ ಅವರು, ಮಂಗಳೂರು ತಾಲೂಕಿನ 3 ಶೈಕ್ಷಣಿಕ ವಲಯಗಳನ್ನು ಭೌಗೋಳಿಕವಾಗಿ/ ಸಂಖ್ಯಾತ್ಮಕವಾಗಿ ಪುನರ್ ವಿಂಗಡಿಸುವ ಬಗ್ಗೆ, ನಗರದ ಮಕ್ಕಳು ಮಾದಕ ದ್ರವ್ಯ ವ್ಯಸನಿಗಳಾಗದಂತೆ ಸಂಯುಕ್ತ ಕಾರ್ಯಾಚರಣೆ ನಡೆಸುವ ಬಗ್ಗೆ, ಮಕ್ಕಳ ಗುಣ ನಡತೆ ಹಾಗೂ ಪೋಷಕರ ಸಹಕಾರದ ಬಗ್ಗೆಯೂ ಪೂರಕ ಕ್ರಮಗಳನ್ನು ರೂಪಿಸುವುದಾಗಿ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕ್ಯಾ. ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಸರಕಾರಿ ಕನ್ನಡ ಶಾಲೆಗಳ ಸಂಖ್ಯೆ ಹಾಗೂ ವಿದ್ಯಾರ್ಥಿ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಸಭೆಯ ಗಮನಸೆಳೆದರಲ್ಲದೆ, ನಮ್ಮ ಜೀವನ ಶೈಲಿಯಲ್ಲಾಗಿರುವ ಬದಲಾವಣೆ ಮಕ್ಕಳ ಬೆಳವಣಿಗೆಯಲ್ಲಿ ಪ್ರತಿಫಲಿಸುತ್ತಿದ್ದು, ಸಭೆಯಲ್ಲಿ ಸದಸ್ಯರು ಗಮನಸೆಳೆದಿರುವ ಗಂಭೀರ ಸವಾಲುಗಳನ್ನು ಪರಿಹರಿಸಲು ತಮ್ಮೆಲ್ಲ ಸಹಕಾರವನ್ನು ನೀಡುವುದಾಗಿ ಹೇಳಿದರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಒಗ್ಗೂಡಿಸಿ ಒಂದು ಶಾಲೆಯನ್ನಾಗಿ ರೂಪಿಸುವುದರಿಂದ ಆಗಬಹುದಾದ ಅನುಕೂಲ ಹಾಗೂ ಮಕ್ಕಳ ಅನುಕೂಲಕ್ಕೆ ಅಭಿಯಾನದಿಂದ ವಾಹನ ಒದಗಿಸಲು ಸಾಧ್ಯವಿದ್ದು ಶಾಲೆಗಳ ಸಬಲೀಕರಣವಾಗಲಿದೆ ಎಂದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್, ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್ ಉಪಸ್ಥಿತರಿದ್ದರು.
ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್ ಸ್ವಾಗತಿಸಿದರು.