Thursday, August 4, 2011

ಅರ್ಜಿದಾರರಿಗೆ ಮಾಹಿತಿ ಒದಗಿಸುವುದು ಮಾಹಿತಿ ಆಯೋಗದ ಧ್ಯೇಯ: ಡಾ.ಎಚ್.ಎನ್ ಕೃಷ್ಣ

ಮಂಗಳೂರು,ಆಗಸ್ಟ್.04:ಮಾಹಿತಿ ಹಕ್ಕು ಆಯೋಗ ವಿಚಾರಣಾ ಆಯೋಗವಲ್ಲ; ಆದರೆ ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದವರಿಗೆ ಮಾಹಿತಿ ಒದಗಿಸುವುದೇ ನಮ್ಮ ಆಯೋಗದ ಧ್ಯೇಯ ಎಂದು ಆಯೋಗದ ಅಧ್ಯಕ್ಷರಾದ ಡಾ.ಎಚ್.ಎನ್.ಕೃಷ್ಣ ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ಹಾಗೂ ಮೀಟಿಂಗ್ ಹಾಲ್ ನಲ್ಲಿ ಇಬ್ಬರು ಆಯುಕ್ತರು ಆಯೋಗಕ್ಕೆ ಬಂದ ಅರ್ಜಿಗಳ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.ಸರ್ಕಾ ರದ ಅನು ದಾನ ಹಾಗೂ ಅಂಕಿ ತವಿ ಲ್ಲದೆ, ಕಾನೂನು ವ್ಯಾಪ್ತಿಗೆ ಬಾರದೆ ಸಂಸ್ಥೆ ಗಳ ಕಾರ್ಯ ನಿರ್ವ ಹಣೆ ಅಸಾಧ್ಯ. ಹಾಗಾಗಿ ಎಲ್ಲವೂ ಸಾರ್ವ ಜನಿಕ ಪ್ರಾಧಿ ಕಾರದ ವ್ಯಾಪ್ತಿ ಯಡಿ ಒಳ ಪಡು ವಂತ ಹದ್ದು ಹಾಗೂ ಪ್ರಜೆ ಗಳ ಪ್ರಶ್ನೆ ಗಳಿಗೆ ಮಾಹಿತಿ ನೀಡ ಬೇಕಾ ದುದು ಕರ್ತವ್ಯ ವಾಗುತ್ತದೆ ಎಂದು ಹಲವು ಉದಾಹರಣೆಗಳನ್ನು ನೀಡಿದರು.ದಕ್ಷಿಣ ಕನ್ನಡದಲ್ಲಿ ಸೆಝ್ ವಿರುದ್ಧ ಹಾಗೂ ಕೆಐಎಡಿಬಿ ವಿರುದ್ಧ ದೂರುಗಳನ್ನು ವಿಚಾರಿಸಿದ ಆಯುಕ್ತರು ಸೆಝ್ ಮಾಹಿತಿ ನೀಡದ ಪಕ್ಷದಲ್ಲಿ ಕೆಐಎಡಿಬಿ ಸೆಝ್ ಗೆ ಭೂಸ್ವಾಧೀನ ಮಾಡಿಕೊಡಬೇಕಾದ ಅಗತ್ಯವಿಲ್ಲ; ಸರ್ಕಾರದ ಸಂಸ್ಥೆಗಳಿಂದ ನೀರು, ರಸ್ತೆಯಂತಹ ಮೂಲಭೂತಸೌಕರ್ಯಗಳನ್ನು ನೀಡಬೇಕಾದ ಅಗತ್ಯವಿಲ್ಲ ಎಂದು ಅರ್ಜಿ ಹಾಗೂ ದೂರುಗಳನ್ನು ಆಲಿಸುವ ವೇಳೆ ಸ್ಪಷ್ಟಪಡಿಸಿದರು. ಕೆಎಸ್ ಆರ್ ಟಿಸಿ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ಪೊಲೀಸ್ ಇಲಾಖೆ, ಡಿಸಿ ಕಚೇರಿ, ಮಹಾನಗರಪಾಲಿಕೆ ಆರೋಗ್ಯ ವಿಭಾಗ, ಆರ್ ಟಿಒ, ಉಜಿರೆ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ, ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿ, ಬಂಟ್ವಾಳ ಕಾಲೇಜು ಪ್ರಾಂಶುಪಾಲರ ವಿರುದ್ದದ ಅರ್ಜಿಗಳ ಪರಿಶೀಲನೆ ನಡೆಸಿದ ಆಯುಕ್ತರು 21 ಅರ್ಜಿಗಳಲ್ಲಿ 14 ಅರ್ಜಿಗಳನ್ನು ಇತ್ಯರ್ಥಪಡಿಸಿದರಲ್ಲದೆ 7 ಅರ್ಜಿಗಳನ್ನು ಮುಂದೂಡಿದರು.
ಹಲವು ಶಿಕ್ಷಣ ಸಂಸ್ಥೆಗಳು ವಿವಿಧ ಕಾರಣ ನೀಡಿ ಮಾಹಿತಿಯನ್ನು ನಿರಾಕರಿಸುತ್ತಿರುವುದು ತಪ್ಪು ಎಂದ ಅವರು, ನೋಂದಾಯಿಸಲ್ಪಡದ ಯಾವುದೇ ಸಂಸ್ಥೆ ಬೇನಾಮಿಯಾಗುತ್ತದೆ. ಕಾನೂನಿನಡಿ ನೋಂದಾಯಿಸಲ್ಪಟ್ಟಿರುವ ಎಲ್ಲಾ ಸಂಸ್ಥೆಗಳು ಮಾಹಿತಿ ನೀಡಲೇ ಬೇಕು.ಒಂದು ವೇಳೆ ಅವರು ನಿರಾಕರಿಸಿದಲ್ಲಿ ಮಾಹಿತಿ ಹಕ್ಕು ಆಯೋಗ ಆ ಮಾಹಿತಿ ಕೊಡಿಸುವ ಕಾರ್ಯ ಮಾಡುತ್ತದೆ ಎಂದರು. ಕಳೆದ ಸಾಲಿ ನಲ್ಲಿ ಆಯೋ ಗಕ್ಕೆ 16,000 ಅರ್ಜಿ ಗಳು ಬಂದಿದ್ದು, ಮಾಹಿತಿ ಸಿಗ ದಾಗ ಅರ್ಜಿ ದಾರರು ಆಯೋ ಗಕ್ಕೆ ದೂರು ನೀಡು ವರು ಎಂದರು. ಮಾಹಿತಿ ಹಕ್ಕು ಅಧಿ ನಿಯ ಮದ ಬಗ್ಗೆ ಸಾರ್ವ ಜನಿ ಕರಲ್ಲಿ ಇನ್ನಷ್ಟು ಜಾಗೃತಿ ಮೂಡ ಬೇಕಿದ್ದು, ಈ ಅಧಿ ನಿಯ ಮದ ಬಳಿಕ ನಿಜ ವಾಗಿ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಬಂದಿದೆ; ಪ್ರಜೆಗಳು ಪ್ರಭುಗಳಾಗಿದ್ದಾರೆ ಎಂದರು.
ಮಾಹಿತಿ ಆಯೋಗಕ್ಕೆ 9212357123 ಮೊಬೈಲ್ ಗೆ ಎಸ್ ಎಂ ಎಸ್ ಮುಖಾಂತರವೂ ದೂರು ಸಲ್ಲಿಸಬಹುದು. ಮಾಹಿತಿ ಹಕ್ಕಿನಡಿ ದೂರು ಸಲ್ಲಿಸಿದವರ ಅನುಕೂಲಕ್ಕೆ ಈಗಾಗಲೇ ಬೀದರ್, ಗುಲ್ಬರ್ಗಾ,, ಮಂಗಳೂರುಗಳಲ್ಲಿ ಮಾಹಿತಿ ಹಕ್ಕು ಆಯುಕ್ತರು ಆಗಮಿಸಿ ಅಹವಾಲು ಆಲಿಸುವ ಇತ್ಯರ್ಥ ಪಡಿಸುವ ಕೆಲಸವಾಗುತ್ತಿದೆ ಎಂದು ವಿರೂಪಾಕ್ಷಯ್ಯ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕವೂ ಪ್ರತೀ ಎರಡು ತಿಂಗಳಿಗೊಮ್ಮೆ ಅಹವಾಲು ಪರಿಶೀಲನೆ ನಡೆಸುತ್ತಿದ್ದು ಬಳ್ಳಾರಿ, ರಾಯಚೂರುಗಳಲ್ಲಿ ಈ ಮಾದರಿ ಯಶಸ್ವಿಯಾಗಿದೆ ಎಂದರು. ಇಂದು ಆಯುಕ್ತರಾದ ವಿರೂಪಾಕ್ಷಯ್ಯ ಅವರು 19 ಅಹವಾಲುಗಳನ್ನು ಪರಿಶೀಲಿಸಿದರು. ನಾಳೆ ಬೆ. 11 ಗಂಟೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹವಾಲು ಆಲಿಕೆ ನಡೆಯಲಿದೆ.