Saturday, August 13, 2011
ಸ್ವ ಕ್ಷೇತ್ರ ದಕ್ಷಿಣ ಕನ್ನಡದಲ್ಲಿ ಮುಖ್ಯಮಂತ್ರಿಗಳು
ಮಂಗಳೂರು,ಆಗಸ್ಟ್.13:ರಾಜ್ಯದ 26 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಇದೇ ಮೊದಲ ಬಾರಿಗೆ 2 ದಿನಗಳ ಭೇಟಿಗೆ ತನ್ನ ತವರೂರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ ದೇವರ ಆಶೀರ್ವಾದ ಪಡೆದರು. ಮಂಗ ಳೂರಿನಲ್ಲಿ ಪಕ್ಷದ ಕಾರ್ಯ ಕರ್ತರ ಅಭಿನಂದನಾ ಸಮಾ ರಂಭದಲ್ಲಿ ಪಾಲ್ಗೊಂಡ ಬಳಿಕ ನೇರವಾಗಿ ಬಂಟ್ವಾಳ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಗೆ ಭೇಟಿ ನೀಡಿದರು.ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹಗ್ಗಡೆ ಅವರನ್ನು ಭೇಟಿ ಮಾಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಹೆಗ್ಗಡೆ ಅವರು ಮುಖ್ಯ ಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಹೆಗ್ಗಡೆಯವರು ರಾಜ್ಯದ ಅಭಿವೃದಿಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿ ಯೊಂದೆ ತನ್ನ ಗುರಿ. ಆಡಳಿತದಲ್ಲಿ ಸಮರ್ಪಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಗಸ್ಟ್ 16,17 ಮತ್ತು 18 ರಂದು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುದಾಗಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಬೃಹ್ಮಣ್ಯಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಸುಳ್ಯದ ವಳಲಾಂಬೆ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಸ್ಳಳಿಯ ಜನತೆ ಆತ್ಮೀಯತೆಯಿಂದ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಮಂತ್ರಿಗಳು ಸ್ವಕ್ಷೇತ್ರದ ಜನತೆಯ ಅಪೇಕ್ಷೆಯಂತೆ ತನ್ನ ಅಧಿಕಾದ ವಧಿಯಲ್ಲಿ ಕೆಡುಕನ್ನು ಮಾಡದೆ ಒಳ್ಳೆಯದನ್ನೇ ಮಾಡುತೇನೆ.ಕೃಷಿಕರು ಮತ್ತು ಗ್ರಾಮೀಣ ಜನರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ವಳಲಾಂಬೆಯಿಂದ ಎಲಿಮಲೆಗೆ ತೆರಳಿದ ಸಂಧರ್ಭದಲ್ಲಿ ದೊಡ್ಡತೋಟದಲ್ಲಿ ಗ್ರಾಮದ ಜನತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲಿಂದ ತನ್ನ ತವ ರೂರು ಮಂಡೆ ಕೋಲಿಗೆ ಆಗ ಮಿಸಿದ ಮುಖ್ಯ ಮಂತ್ರಿ ಡಿ.ವಿ.ಸದಾ ನಂದ ಗೌಡ ಅವರು ಇಲ್ಲಿನ ಮೈತಡ್ಕ-ಪಂಜಿ ಕಲ್ಲು ಎಂಬಲ್ಲಿ ಪಯಸ್ವಿನಿ ನದಿಗೆ ನಿರ್ಮಿ ಸಲಾದ ತೂಗು ಸೇತುವೆ ಯನ್ನು ಉದ್ಘಾ ಟಿಸಿದರು.ಮಲೆ ನಾಡು ಗ್ರಾಮಾ ಭಿವೃದ್ಧಿ ಮಂಡಳಿ ವತಿಯಿಂದ ರೂ. 80 ಲಕ್ಷ ವೆಚ್ಚದಲ್ಲಿ ತೂಗು ಸೇತುವೆಗಳ ಸರ್ದಾರ ಗಿರೀಶ್ ಭಾರಧ್ವಾಜ್ ಅವರು ಈ ಸೇತುವೆಯನ್ನು ನಿರ್ಮಾಣ ಮಾಡಿದ್ದು,ಡಿ.ವಿ. ಸದಾನಂದ ಗೌಡ ಅವರು ಮುಖ್ಯ ಮಂತ್ರಿ ಯಾಗಿ ಅಧಿಕಾರ ಸ್ವೀಕರಿದ 9 ದಿನಗಳ ಬಳಿಕ ತನ್ನ ತವ ರೂರಿನ ಈ ತೂಗು ಸೇತುವೆ ಉದ್ಘಾಟನೆ ಪ್ರಥಮ ಕಾರ್ಯ ಕ್ರಮವಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು ತನ್ನ ಪ್ರಥಮ ಉದ್ಘಾಟನೆ ಸ್ವ ಕ್ಷೇತ್ರದಲ್ಲಿ ನಡೆದಿರುದು ಸಂತಸ ತಂದಿದೆ.ತನ್ನ ತಾಯಿ ಮತ್ತು ಕುಟುಂಬದ ದೈವದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು. ದೇವರ ಗುಂಡದ ಮನೆಗೆ ಆಗ ಮಿಸಿದ ಮುಖ್ಯ ಮಂತ್ರಿ ಗಳು ತಾಯಿ ಕಮಲ ಅವರ ಕಾಲಿಗೆ ನಮಿಸಿ ಆಶೀ ರ್ವಾದ ಪಡೆ ದರು.ತಾಯಿ ಕಮ ಲಮ್ಮ ಮನ ತುಂಬಿ ಮಗನ ನ್ನು ಹರಸಿ ದಾಗ,ಮುಖ್ಯ ಮಂತ್ರಿ ಗಳು ಭಾವ ಪರ ವಶ ರಾದರು. ದೇವರ ಗುಂಡ ದಲ್ಲಿ ನೂರಾರು ಅಭಿ ಮಾನಿ ಗಳು,ಬಂಧು ಮಿತ್ರರು ಪಕ್ಷದ ಕಾರ್ಯ ಕರ್ತರು ಮುಖ್ಯ ಮಂತ್ರಿ ಗಳನ್ನು ಹಾರ ಹಾಕಿ ಅಭಿ ನಂದಿ ಸಿದರು.